232 ಬ್ಯಾಂಕ್‌ಗಳ OTP ಕದಿಯುವ ಮಾಲ್ವೇರ್ ಬಂದಿದೆ ! ಈ ಆಪ್‌ಗಳನ್ನು ಡಿಲೀಟ್ ಮಾಡಿ..!

|

ದೇಶದಲ್ಲಿ ನೋಟು ನಿಷೇಧದ ನಂತರದಲ್ಲಿ ಡಿಜಿಟಲ್ ವ್ಯವಹಾರವು ಹೆಚ್ಚಾಗಿದ್ದು, ಅದರಲ್ಲಿಯೂ ಮೊಬೈಲ್ ಮೂಲಕ ಆಪ್‌ಗಳನ್ನು ಬಳಕೆ ಮಾಡಿಕೊಂಡು ನಡೆಸುವ ವ್ಯವಹಾರಗಳು ದಿನದಿಂದ ದಿನಕ್ಕೇ ಹೆಚ್ಚಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಹೊಸದೊಂದು ತಲೆ ನೋವು ಶುರುವಾಗಿದ್ದು, HDFC, ICICI, SBI ಸೇರಿದಂತೆ ಭಾರತದ ಅನೇಕ ಬ್ಯಾಂಕ್​ ಆಪ್‌ಗಳು ಮಾಲ್ವೇರ್ ಹಿಡಿತದಲ್ಲಿದೆ ಎನ್ನಲಾಗಿದೆ.

232 ಬ್ಯಾಂಕ್‌ಗಳ OTP ಕದಿಯುವ ಮಾಲ್ವೇರ್ ಬಂದಿದೆ ! ಈ ಆಪ್‌ಗಳನ್ನು ಡಿಲೀಟ್ ಮಾಡಿ..

ಓದಿರಿ: ಬ್ಯಾಂಕಿಂಗ್ OTP ಕದಿಯುವ ಮಾಲ್ವೇರ್ ಬಂದಿದೆ ! ಈ ಆಪ್‌ ಡಿಲೀಟ್ ಮಾಡಿ..!

ಭಾರತದ ಬಹುತೇಕ ಬ್ಯಾಂಕ್‌ಗಳು ಬಿಡುಗಡೆ ಮಾಡಿರುವ ಆಂಡ್ರಾಯ್ಡ್ ಆಪ್‌ಗಳು ಸದ್ಯ ಅಪಾಯಕ್ಕೆ ಸಿಲುಕಿದೆ ಎನ್ನಲಾಗಿದ್ದ, ಆಂಡ್ರಾಯ್ಡ್‌ ಫೋನಿನಲ್ಲಿ ಬ್ಯಾಂಕ್ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುವ ಎಲ್ಲರಿಗೂ ಅಪಾಯ ಕಾದಿದ್ದು, ಭಾರೀ ನಷ್ಟವನ್ನು ಎದುರಿಸಬೇಕಾಗಿದೆ.

232 ಮೊಬೈಲ್ ಬ್ಯಾಂಕಿಂಗ್ ಆಪ್‌ಗಳು..!

232 ಮೊಬೈಲ್ ಬ್ಯಾಂಕಿಂಗ್ ಆಪ್‌ಗಳು..!

ಸಿಸ್ಟಮ್ ಸೆಕ್ಯುರಿಟಿಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಕ್ವಿಕ್ ಹೀಲ್ ನೀಡಿರುವ ಮಾಹಿತಿಯ ಪ್ರಕಾರ ವಿಶ್ವದ ಸುಮಾರು 232 ಮೊಬೈಲ್ ಬ್ಯಾಂಕಿಂಗ್ ಆಪ್‌ಗಳು ಬ್ಯಾಂಕಿಂಗ್ ಮಾಲ್ವೇರ್ ಹಿಡಿತಕ್ಕೆ ಸಿಲುಕಿದೆ ಎನ್ನಲಾಗಿದೆ.

ಫೇಕ್ ಫ್ಲಾಷ್ ಪ್ಲೇಯರ್:

ಫೇಕ್ ಫ್ಲಾಷ್ ಪ್ಲೇಯರ್:

ಆಂಡ್ರಾಯ್ಡ್ ಫೋನ್‌ಗಳಿಗೆ ಫೇಕ್ ಫ್ಲಾಷ್ ಪ್ಲೇಯರ್ ಮೂಲಕ ಮಾಲ್ವೇರ್ ಆಂಡ್ರಾಯ್ಡ್‌ ಫೋನ್‌ಗಳನ್ನು ಸೇರಿಕೊಂಡಿದ್ದು, ಇದರಿಂದಾಗಿ ಬ್ಯಾಂಕಿಂಗ್ ಆಪ್‌ಗಳು ಸೆಕ್ಯೂರಿಟಿಯನ್ನು ಕಳೆದುಕೊಂಡಿದೆ ಎನ್ನಲಾಗಿದೆ.

ಬ್ಯಾಂಕಿಂಗ್ ವ್ಯವಹಾರ:

ಬ್ಯಾಂಕಿಂಗ್ ವ್ಯವಹಾರ:

ಈ ಮಾಲ್ವೇರ್ ಮೊಬೈಲ್ ಗೆ ಎಂಟ್ರಿ ಕೊಟ್ಟ ಮೇಲೆ ನಿಮ್ಮ ಫೋನಿನಲ್ಲಿ ನಡೆಯುವ ಎಲ್ಲಾ ಬ್ಯಾಂಕಿಂಗ್ ವ್ಯವಹಾರದ ಮಾಹಿತಿಯನ್ನು ಸಂಗ್ರಹಿಸಿ ತನ್ನ ಮದರ್ ಸರ್ವರ್‌ಗೆ ರವಾನಿಸುತ್ತದೆ ಎನ್ನಲಾಗಿದೆ.

OTP ಕದಿಯುತ್ತದೆ:

OTP ಕದಿಯುತ್ತದೆ:

ಈ ಮಾಲ್ವೇರ್ ನಿಮ್ಮ ಸ್ಮಾರ್ಟ್‌ಫೋನ್‌ ಸೇರಿಕೊಂಡರೆ ನಿಮ್ಮ ಫೋನಿಗೆ ಬರುವ OTP ಯನ್ನು ಕದಿಯಲಿದೆ. ಇದರಿಂದಾಗಿ ನಿಮಗೆ ಸಾಕಷ್ಟು ನಷ್ಟ ಉಂಟಾಗಲಿದೆ ಎನ್ನಲಾಗಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಫೇಕ್ ಆಪ್-ಇ ಮೇಲ್ ಮೂಲಕ:

ಫೇಕ್ ಆಪ್-ಇ ಮೇಲ್ ಮೂಲಕ:

ಈ ಮಾಲ್ವೇರ್ ಫೇಕ್ ಆಪ್ ಇಲ್ಲವೇ ಇಮೇಲ್ ಮೂಲಕ ನಿಮ್ಮ ಮೊಬೈಲ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕಾಗಿ ನಿಮ್ಮ ಫೋನಿನಲ್ಲಿ ಉತ್ತಮ ಗುಣಮಟ್ಟದ ಸೆಕ್ಯುರಿಟಿ ಆಪ್ ಬಳಕೆ ಮಾಡಿಕೊಳ್ಳಿ.

Best Mobiles in India

English summary
SBI, HDFC, IDBI, and more banking apps targeted by new malware. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X