Home
Apps

ಫಾರ್ವಡ್‌ ಮೆಸೆಜ್‌ಗೆ ಬೀಳಲಿದೆ ಬ್ರೇಕ್!.ಸುಳ್ಳು ಸುದ್ದಿ ತಡೆಗೆ ವಾಟ್ಸಪ್ ಹೊಸ ಹೆಜ್ಜೆ.!

ಜನಪ್ರಿಯ ವಾಟ್ಸಪ್ ಮೆಸೆಂಜರ್ ಆಪ್ ಸುಳ್ಳುಸುದ್ದಿ ಹಬ್ಬುವುದನ್ನು ತಡೆಯಲು ನಾನಾ ಫೀಚರ್ಸ್‌ಗಳನ್ನು ಅಳವಡಿಸುವುದರ ಜೊತೆಗೆ ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ಸಹ ಪ್ರಕಟಿಸಿತ್ತು. ಆ ನಿಟ್ಟಿನಲ್ಲಿ ಕೆಲಸ ಮುಂದುವರೆಸಿರುವ ಕಂಪನಿಯು ಮತ್ತೆ ಹೊಸ ಫೀಚರ್ ಒಂದನ್ನು ಸೇರಿಸಿದ್ದು, ವಾಟ್ಸಪ್ ಗ್ರೂಪ್ ಗಳಲ್ಲಿ ಇನ್ನು ಹೆಚ್ಚಾಗಿ ಫಾರ್ವರ್ಡ್ ಆಗಿರುವ ಸುಳ್ಳು ಮೆಸೆಜ್‌ಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಫಾರ್ವಡ್‌ ಮೆಸೆಜ್‌ಗೆ ಬೀಳಲಿದೆ ಬ್ರೇಕ್!.ಸುಳ್ಳು ಸುದ್ದಿ ತಡೆಗೆ  ಹೊಸ ಹೆಜ್ಜೆ.!

ಪ್ರತಿ ತಿಂಗಳು 1.5 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ವಂದತಿಗಳಿಗೆ ಬ್ರೇಕ್ ಹಾಕಲು ಹೆಜ್ಜೆ ಇರಿಸಿದೆ. ಹೊಸ ಅಪ್‌ಡೇಟ್ ವರ್ಷನ್‌ ಮಾದರಿಯಲ್ಲಿ ಹೊಸ ಆಯ್ಕೆ ಲಭ್ಯವಾಗಿದ್ದು, ಬಳಕೆದಾರರಿಗೆ ಫಾರ್ವರ್ಡ್ ಮೆಸೆಜ್ ಎಷ್ಟು ಸಲ ಫಾರ್ವರ್ಡ್ ಆಗಿದೆ ಎನ್ನುವುದರ ಬಗ್ಗೆ ಮಾಹಿತಿ ದೊರೆಯಲಿದೆ. ಈ ಮಾಹಿತಿ ಆಧರಿಸಿ ಅತೀ ಹೆಚ್ಚು ಫಾರ್ವಡ್ ಆಗಿರುವ ಮೆಸೆಜ್ ಗುರುತಿಸಬಹುದು.

ಫಾರ್ವಡ್‌ ಮೆಸೆಜ್‌ಗೆ ಬೀಳಲಿದೆ ಬ್ರೇಕ್!.ಸುಳ್ಳು ಸುದ್ದಿ ತಡೆಗೆ  ಹೊಸ ಹೆಜ್ಜೆ.!

ವಾಟ್ಸಪ್‌ನ ಹೊಸ 2.19.80 ಅಪ್‌ಡೇಟ್‌ ವರ್ಷನ್‌ನಲ್ಲಿ ಈ ಫೀಚರ್ ಸೇರಕೊಂಡಿರಲಿದ್ದು, ಬಳಕೆದಾರರು ಫಾರ್ವರ್ಡ್ ಮೆಸೆಜ್‌ಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಫಾರ್ವರ್ಡ್ ಆಗಿರುವ ಮೆಸೆಜ್ ಅನ್ನು ಗುರುತಿಸಬಹುದಾಗಿದೆ. ಇದರೊಂದಿಗೆ ಐದು ಮತ್ತು ಐದಕ್ಕಿಂತ ಹೆಚ್ಚು ಬಾರಿ ಫಾರ್ವರ್ಡ್ ಆಗಿರುವ ಮೆಸೆಜ್‌ ಅನ್ನು ಹೆಚ್ಚಾಗಿ ಫಾರ್ವರ್ಡ್ ಆಗಿರುವ ಮೆಸೆಜ್ ಎಂಬುದಾಗಿ ವಿಭಾಗಿಸಲಾಗುತ್ತದೆ.

ಫಾರ್ವಡ್‌ ಮೆಸೆಜ್‌ಗೆ ಬೀಳಲಿದೆ ಬ್ರೇಕ್!.ಸುಳ್ಳು ಸುದ್ದಿ ತಡೆಗೆ  ಹೊಸ ಹೆಜ್ಜೆ.!

ಸುಳ್ಳು ಫಾರ್ವರ್ಡ್ ಮೆಸೆಜ್‌ಗಳ ನಿಯಂತ್ರಣಕ್ಕೆ ವಾಟ್ಸಪ್ ಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಸಾಗಿದ್ದು, ಫಾರ್ವರ್ಡ್ ವದಂತಿಗಳು ಶೇರ್‌ ಆಗದಂತೆ ಬ್ರೇಕ್ ಹಾಕುವ ಆಯ್ಕೆಯು ಇನ್ಮುಂದೆ ಗ್ರೂಪ್ ಆಡ್ಮಿನ್‌ಗೆ ಸೀಗಲಿದೆ. ವಾಟ್ಸಪ್‌ನ 2.19.97 ಅಪ್‌ಡೇಟ್‌ ವರ್ಷನ್ ನಲ್ಲಿ ಈ ಆಯ್ಕೆಯು ದೊರೆಯಲಿದ್ದು, ಇನ್ನೂ ಟೆಸ್ಟಿಂಗ್ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಗ್ರೂಪ್ ಅಡ್ಮಿನ್‌ಗೆ ಈ ಆಯ್ಕೆ ಲಭ್ಯವಾಗಲಿದೆ.

ಈ ಹೊಸ ಆಯ್ಕೆಯು ಗ್ರೂಪ್ ಸೆಟ್ಟಿಂಗ್ ನಲ್ಲಿ ಸೇರಿಕೊಳ್ಳಲಿದ್ದು, ಗ್ರೂಪ್ ಆಡ್ಮಿನ್‌ ಮಾತ್ರ ಈ ಆಯ್ಕೆ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಇದರಲ್ಲಿ ಅಡ್ಮಿನ್ ಫಾರ್ವರ್ಡ್‌ ಮೆಸೆಜ್‌ಗಳನ್ನು ಶೇರ್‌ ಮಾಡದಂತೆ ತಡೆಯುವ ಆಯ್ಕೆಗಳು ಲಭ್ಯವಾಗಲಿದ್ದು, ಮೆಸೆಜ್ ಕಂಟೆಂಟ್‌ ಆಧಾರದ ಮೇಲೆ ಅಡ್ಮಿನ್ ನಿರ್ಧಾರ ಕೈಗೊಳ್ಳಬಹುದಾಗಿದೆ. ಈ ಆಯ್ಕೆಯು ಮೊದಲು ಆಂಡ್ರಾಯ್ಡ್‌ ಓಎಸ್‌ ಮಾದರಿಯಲ್ಲಿ ದೊರೆಯಲಿದ್ದು, ಆನಂತರ ಐಓಎಸ್‌ ಓಎಸ್‌ ಮಾದರಿಯಲ್ಲಿ ಲಭ್ಯವಾಗಲಿದೆ.

Best Mobiles in India

English summary
WhatsApp testing a feature for group administrators to disallow sending frequently forwarded messages in groups.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+