ವಾಟ್ಸಪ್ ಮಹತ್ತರ ಹೆಜ್ಜೆ!..ಚಾಟಿಂಗ್‌ ಸ್ಕ್ರೀನ್‌ಶಾಟ್‌ ತೆಗೆಯುವುದಕ್ಕೆ ಬೀಳಲಿದೆ ಬ್ರೇಕ್!

|

ವಿಶ್ವದಲ್ಲಿಯೇ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ 'ವಾಟ್ಸಪ್‌' ಮೆಸೆಂಜರ್ ಅಪ್ಲಿಕೇಶನ್ ಸತತ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವುದರ ಮೂಲಕ ಬಳಕೆದಾರಿರಗೆ ಬೆಸ್ಟ್‌ ಎನಿಸಿದೆ. ಇತ್ತೀಚಿಗಷ್ಟೆ ಸುಳ್ಳು ಫಾರ್ವಡ್‌ ಮೆಸೆಜ್‌ ಕಡಿವಾಣಕ್ಕೆ ಹೊಸ ಆಯ್ಕೆಯನ್ನು ಸೇರಿಸಿರುವ ಸಂಸ್ಥೆಯು ಇದೀಗ ಮತ್ತೆ ಬಳಕೆದಾರರಿಗೆ ಉಪಯುಕ್ತವಾಗುವ ಫೀಚರ್‌ ಅನ್ನು ಸೇರ್ಪಡೆ ಮಾಡುವ ಸಿದ್ಧತೆಯಲ್ಲಿದೆ.

ವಾಟ್ಸಪ್ ಮಹತ್ತರ ಹೆಜ್ಜೆ!..ಚಾಟಿಂಗ್‌ ಸ್ಕ್ರೀನ್‌ಶಾಟ್‌ಗೆ ಬೀಳಲಿದೆ ಬ್ರೇಕ್!

ಹೌದು, ವಾಟ್ಸಪ್ ಆಪ್‌, ಬ್ಲಾಕ್‌ ಸ್ಕ್ರೀನ್‌ಶಾಟ್‌ ಆಯ್ಕೆಯನ್ನು ಬಿಡುಗಡೆ ಮಾಡಲಿದ್ದು, ಚಾಟ್‌ ಮಾಡುತ್ತಿರುವಾಗ ಸ್ಕ್ರೀನ್‌ಶಾಟ್‌ ತೆಗೆಯದಂತೆ ಈ ಆಯ್ಕೆ ಖಾಸಗಿತನ ಕಾಪಾಡಲಿದೆ. ಈ ಮೂಲಕ ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಭದ್ರತೆ ನೀಡುವುದು ವಾಟ್ಸಪ್‌ನ ಉದ್ದೇಶವಾಗಿದ್ದು, ಹೊಸ 2.19.106 ಅಪ್‌ಡೇಟ್‌ ವರ್ಷ್‌ನ್‌ ಮಾದರಿಯಲ್ಲಿ ಈ ನೂತನ ಆಯ್ಕೆ ಸೇರಿರಲಿದೆ ಎಂಬುದನ್ನು WABeta ವರದಿ ತಿಳಿಸಿದೆ.

ವಾಟ್ಸಪ್ ಮಹತ್ತರ ಹೆಜ್ಜೆ!..ಚಾಟಿಂಗ್‌ ಸ್ಕ್ರೀನ್‌ಶಾಟ್‌ಗೆ ಬೀಳಲಿದೆ ಬ್ರೇಕ್!

ವಾಟ್ಸಪ್‌ನಲ್ಲಿ ಚಾಟ್‌ ಮಾಡುತ್ತಿರುವಾಗ ಕೆಲವು ಬಳಕೆದಾರರು ಸ್ಕ್ರೀನ್‌ಶಾಟ್‌ ತೆಗೆದು ಆ ಫೋಟೊಗಳನ್ನು ಮತ್ತೊಬ್ಬರಿಗೆ ಕಳುಹಿಸುವ ಸಾಧ್ಯತೆಗಳು ಇದ್ದು, ಇಂಥ ಸಂಭವಗಳನ್ನು ನಿಯಂತ್ರಿಸಲು ಬಳಕೆದಾರರಿಗೆ ಹೊಸದಾಗಿ ಸ್ಕ್ರೀನ್‌ಶಾಟ್‌ ಬ್ಲಾಕ್‌ ಅಸ್ತ್ರವನ್ನು ನೀಡಲು ಮುಂದಾಗಿದೆ. ಈ ಆಯ್ಕೆಆಕ್ಟಿವ್‌ ಮಾಡಿಕೊಳ್ಳುವ ಮೂಲಕ ನಿರಾತಂಕವಾಗಿ ಚಾಟ್‌ ಮಾಡಬಹುದಾಗಿದೆ.

ಅಂದ ಹಾಗೇ ವಾಟ್ಸಪ್‌ ಹೊಸ ಫಿಂಗರ್‌ಪ್ರಿಂಟ್ ಅಥೇಟಿಕೇಶನ್ ಆಯ್ಕೆಯನ್ನು ರಿಲೀಸ್‌ ಮಾಡಲಿದ್ದು, ಇದು ಸಹ ಬಳಕೆದಾರರ ಖಾಸಗಿತನದ ಭದ್ರತೆಗೆ ಹೆಚ್ಚು ಅನುಕೂಲವಾಗಲಿದೆ. ಈ ಫಿಂಗರ್‌ಪ್ರಿಂಟ್ ಲಾಕ್‌ ಫೀಚರ್‌ ಬಳಕೆಗೆ ಬಂದಾದ ನಂತರದಲ್ಲಿ ಬ್ಲಾಕ್‌ ಸ್ಕ್ರೀನ್‌ಶಾರ್ಟ್‌ ಆಯ್ಕೆಯು ಲಭ್ಯವಾಗಲಿದೆ ಎನ್ನಲಾಗುತ್ತಿದೆ. ಚಾಟ್‌ ಮಾಡುತ್ತಿದ್ದಾಗ ಫಿಂಗರ್‌ಪ್ರಿಂಟ್ ಲಾಕ್‌ ಆಫ್‌ ಮಾಡಿದರೇ ಮಾತ್ರ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದಾಗಿದೆ.

ವಾಟ್ಸಪ್ ಮಹತ್ತರ ಹೆಜ್ಜೆ!..ಚಾಟಿಂಗ್‌ ಸ್ಕ್ರೀನ್‌ಶಾಟ್‌ಗೆ ಬೀಳಲಿದೆ ಬ್ರೇಕ್!

ಈ ಹೊಸ ಆಯ್ಕೆಗಳು ಬಳಕೆದಾರರಿಗೆ ವಾಟ್ಸಪ್‌ನ ಆಪ್‌ಡೇಟ್‌ ವರ್ಷನ್‌ ಮಾದರಿಯಲ್ಲಿ ಲಭ್ಯವಾಗಲಿದ್ದು, ಆಂಡ್ರಾಯ್ಡ್‌ ಓಎಸ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ದೊರೆಯಲಿದೆ. ಇತ್ತೀಚಿಗೆ ಹೊಸ ವಾಟ್ಸಪ್‌ ಗ್ರೂಪ್‌ ಆಯ್ಕೆಗಳು ನೀಡಿದ್ದು, ಹೊಸದಾಗಿ ಗ್ರೂಪ್‌ ರಚಿಸುವವರ ಬಳಿ ನಿಮ್ಮ ನಂಬರ್‌ ಇದ್ದರು ನಿಮ್ಮನ್ನು ಗ್ರೂಪ್‌ಗೆ ಸೇರಿಸುವುದನ್ನು ತಡೆಯಬಹುದಾಗಿದೆ. ಈ ಆಯ್ಕೆ ಈಗಾಗಲೇ ವಾಟ್ಸಪ್‌ ಅಪ್‌ಡೇಟ್‌ ವರ್ಷನ್‌ನಲ್ಲಿ ಲಭ್ಯವಾಗಿದ್ದು, ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಓದಿರಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ?.ಫೋನಿನಲ್ಲಿ ತಿಳಿಯುವುದು ಹೇಗೆ ಗೊತ್ತಾ? ಓದಿರಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ?.ಫೋನಿನಲ್ಲಿ ತಿಳಿಯುವುದು ಹೇಗೆ ಗೊತ್ತಾ?

Best Mobiles in India

English summary
WhatsApp users won’t be able to take screenshots of chats: Here's what this means for you.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X