ಹೊಸ ವರ್ಷಕ್ಕೆ ಶಾಕಿಂಗ್ ಗಿಫ್ಟ್: ಸಾವಿರಾರು ಫೋನ್‌ಗಳಲ್ಲಿ ಇಂದಿನಿಂದ ವಾಟ್ಸ್‌ಆಪ್ ವರ್ಕ್ ಆಗಲ್ಲ
ಹೊಸ ವರ್ಷದ ಸಂಭ್ರಮ ಕಳೆಯುತ್ತಿರುವ ಬೆನ್ನಲೇ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ದಿನೇ ದಿನೇ ತನ್ನ ಚಹರೆಯನ್ನು ಬದಲಾಯಿಸಿಕೊಂಡು ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಇಂದಿನಿಂದ ಹಲವು ಸ್ಮಾರ್ಟ್‌ಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ.

ಓದಿರಿ: ಭಾರತದಲ್ಲಿ ಜಿಯೋನೇ ಬೆಸ್ಟ್: ಸ್ಪೀಡ್ ಇಲ್ಲ ಅನ್ನುವವರೇ ಇಲ್ನೋಡಿ..!
ಈ ಕುರಿತು ಈಗಾಗಲೇ ಮಾಹಿತಿಯನ್ನು ನೀಡಿದ್ದ ವಾಟ್ಸ್‌ಆಪ್, ಹಳೇಯ ವಿಂಡೋಸ್ ಮತ್ತು ಆಂಡ್ರಾಯ್ಡ್ ಫೋನ್ ಗಳಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಿದೆ. ಕಾರಣ ಈ ಫೋನ್‌ಗಳು ವಾಟ್ಸ್‌ಆಪ್ ನೀಡುತ್ತಿರುವ ಹೊಸ ಆಯ್ಕೆಗೆ ಸಪೋರ್ಟ್ ಮಾಡುವುದಿಲ್ಲ ಮತ್ತು ವೇಗವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಹೊಂದಿಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಬ್ಲಾಕ್ ಬೇರಿ-ವಿಂಡೋಸ್:
ಈಗಾಗಲೇ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಲಾಕ್ ಬೆರಿ ಓಸ್, ಬ್ಲಾಕ್ ಬೆರಿ 10 ಮತ್ತು ವಿಂಡೋಸ್ ಫೋನ್ 8.0 ದಲ್ಲಿ ಇನ್ನು ಮುಂದೆ ವಾಟ್ಸ್‌ಆಪ್ ಸಫೋರ್ಟ್ ಮಾಡುವುದಿಲ್ಲ ಎನ್ನಲಾಗಿದೆ. ಕಾರಣ ಈ ಫೋನ್‌ಗಳು ವಾಟ್ಸ್‌ಆಪ್ ನೀಡುವ ಹೊಸ ಆಪ್‌ಡೇಟ್ ಸ್ವೀಕರಿಸುವ ಕ್ಷಮತೆಯನ್ನು ಹೊಂದಿಲ್ಲ ಎನ್ನಲಾಗಿದೆ.


ಆಂಡ್ರಾಯ್ಡ್:
ಇದಲ್ಲದೇ ಆಂಡ್ರಾಯ್ಡ್ 4.0 ಗಿಂತಲೂ ಕಡಿಮೆ ಆವೃತ್ತಿಯ ಆಂಡ್ರಾಯ್ಡ್ ಬಳಕೆದಾರರಿಗೂ ವಾಟ್ಸ್‌ಆಪ್ ಹೊಸ ಆಪ್‌ಡೇಟ್ ನೀಡುವುದಿಲ್ಲ ಎಂದು ಈಗಾಗಲೇ ವಾಟ್ಸ್‌ಆಪ್ ತಿಳಿಸಿಸಿದ್ದು, ಈ ಹಿನ್ನಲೆಯಲ್ಲಿ ಈ ಫೋನ್‌ಗಳನ್ನು ಹೊಂದಿದ್ದವರು ಶೀಘ್ರವೇ ಹೊಸ ಫೋನ್‌ಗಳನ್ನು ತೆಗೆದುಕೊಳ್ಳುವುದು ಉತ್ತಮ.

ವಾಟ್ಸ್‌ಆಪ್ ಸಲಹೆ:
ವಾಟ್ಸ್ಆಪ್ ಸೇವೆಯನ್ನು ಯಾವುದೇ ಅಡೆ-ತಡೆ ಇಲ್ಲದೇ ಬಳಕೆ ಮಾಡಿಕೊಳ್ಳಬೇಕು ಎಂದರೆ ಹೊಸ ಆವೃತ್ತಿಯ ಆಂಡ್ರಾಯ್ಡ್, ಐಫೋನ್ ಇಲ್ಲವೇ ವಿಂಡೋಸ್ ಫೋನ್‌ಗಳಿಗೆ ಆಪ್‌ಗ್ರೇಡ್ ಆಗುವಂತೆ ವಾಟ್ಸ್‌ಆಪ್ ಸಲಹೆಯನ್ನು ನೀಡಿದೆ ಎನ್ನಲಾಗಿದೆ.


Click it and Unblock the Notifications








