Subscribe to Gizbot

ಭಾರತದಲ್ಲಿ ಜಿಯೋನೇ ಬೆಸ್ಟ್‌: ಸ್ಪೀಡ್ ಇಲ್ಲ ಅನ್ನುವವರೇ ಇಲ್ನೋಡಿ..!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನವನ್ನು ಸೃಷ್ಟಿ ಮಾಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ದಿನದಿಂದ ದಿನಕ್ಕೆ ವೇಗವನ್ನು ಕಳೆದುಕೊಂಡಿದ್ದು, ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿಲ್ಲ ಎನ್ನುವವರಿಗೆ ಇಲ್ಲೊಂದು ಸುದ್ದಿ ಇದೆ. ಭಾರತದಲ್ಲಿ ಜಿಯೋನೇ ಬೆಸ್ಟ್ ಎನ್ನುವುದಕ್ಕೆ ಇದೇ ಸಾಕ್ಷಿ.

ಭಾರತದಲ್ಲಿ ಜಿಯೋನೇ ಬೆಸ್ಟ್‌: ಸ್ಪೀಡ್ ಇಲ್ಲ ಅನ್ನುವವರೇ ಇಲ್ನೋಡಿ..!

ಓದಿರಿ: ವೈರಲ್‌ ವಿಡಿಯೋ..! ಆಪಲ್‌ಗೆ ತಿಳಿಯದ ಐಫೋನ್‌ X ನಲ್ಲಿ ಜಪಾನಿ ರೆಕಾರ್ಡ್‌ ಮಾಡಿದ್ದೇನು..?

ಅಕ್ಟೋಬರ್ ನಲ್ಲಿ ಜಿಯೋ ವೇಗದ ಪರೀಕ್ಷೆ ನಡೆದಿದ್ದು, ಈ ಸಂದರ್ಭದಲ್ಲಿ ಜಿಯೋ 21.8 mbps ವೇಗದಲ್ಲಿ ಕಾರ್ಯನಿರ್ವಹಿಸಿದೆ ಎನ್ನಲಾಗಿದೆ. ಟ್ರಾಯ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿಯನ್ನು ತಿಳಿಸಲಾಗಿದೆ. ಇಷ್ಟು ವೇಗದಲ್ಲಿ ಬೇರೆ ಯಾವುದೇ ನೆಟ್‌ವರ್ಕ್‌ಗಳು ಕಾರ್ಯನಿರ್ವಹಿಸಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಮೊದಲ ಸ್ಥಾನ:

ಮೊದಲ ಸ್ಥಾನ:

ಜಿಯೋ 21.8 mbps ವೇಗದಲ್ಲಿ ಕಾರ್ಯನಿರ್ವಹಿಸುವ ಮೂಲಕ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ನಂತರದಲ್ಲಿ ವೊಡಾಫೋನ್ 9.9 mbps ವೇಗದಲ್ಲಿ ಕಾರ್ಯನಿರ್ವಸುವ ಮೂಲಕ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದಾದ ನಂತರದಲ್ಲಿ ಮೂರನೇ ಸ್ಥಾನದಲ್ಲಿರುವ ಏರ್‌ಟೆಲ್ 8.1 mbps ವೇಗದಲ್ಲಿ ಡೇಟಾ ಸೇವೆಯನ್ನು ನೀಡುತ್ತಿದೆ.

ಆಪ್‌ಲೋಡ್ ನಲ್ಲಿ ಐಡಿಯಾ ಫಸ್ಟ್:

ಆಪ್‌ಲೋಡ್ ನಲ್ಲಿ ಐಡಿಯಾ ಫಸ್ಟ್:

ಇದೇ ಮಾದರಿಯಲ್ಲಿ ಡೇಟಾ ಆಪ್‌ಲೋಡ್ ವಿಭಾಗದಲ್ಲಿ ಐಡಿಯಾ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಐಡಿಯಾ 6.2 mbps ವೇಗದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಜಿಯೋ 4.9 mbps ವೇಗವನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಏರ್‌ಟೆಲ್ 3.9mbps ವೇಗದಲ್ಲಿ ಆಪ್‌ಲೋಡ್ ಡೇಟಾವನ್ನು ಹೊಂದಿದೆ.

ಟ್ರಾಯ್ ವರದಿ:

ಟ್ರಾಯ್ ವರದಿ:

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವಿವಿಧ ಟೆಲಿಕಾಂ ಕಂಪನಿಗಳ ಡೇಟಾ ಡೌನ್‌ಲೋಡ್ ಮತ್ತು ಆಪ್‌ಲೋಡ್ ಸ್ಪೀಡ್ ಅನ್ನು ತನ್ನ ಮೈ ಸ್ಪೀಡ್ ಆಪ್‌ ಮೂಲಕ ಡೇಟಾ ಸ್ಪೀಡ್ ಅನ್ನು ಅಳತೆ ಮಾಡಲಿದೆ ಎನ್ನಲಾಗಿದೆ. ಇದು ಸರಿಯಾದ ಮಾಹಿತಿಯನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Jio leads with 21.8Mbps 4G download speed in October: TRAI. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot