Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 12 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 14 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೈಫೈಯರ್: ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಕನೆಕ್ಟ್ ಮಾಡುವ ಆಪ್
ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ಯೋಜನೆಯನ್ನು ಈಗಾಗಲೇ ಕರ್ನಾಟಕ ರಾಜ್ಯ ಜಾರಿಗೊಳಿಸಿದೆ. ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಸಹ ಜಾರಿಗೆ ತಂದಿದೆ. ಆದರೂ ಸಹ ಬಹುಸಂಖ್ಯಾತ ಸಾರ್ವಜನಿಕರು ಉಚಿತ ವೈಫೈಗೆ ಕನೆಕ್ಟ್ ಆಗಲು ಆಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಉಚಿತ ವೈಫೈ ಸೇವೆಯ ಸಂಪರ್ಕವನ್ನು ಆಟೋಮೆಟಿಕಲಿ ಸ್ಮಾರ್ಟ್‌ಫೋನ್ ಬಳಕೆದಾರರು ಕನೆಕ್ಟ್ ಪಡೆಯಲು ಅನುಕೂಲವಾಗುವ ಆಪ್ ಒಂದು ಅಭಿವೃದ್ದಿಗೊಂಡಿದೆ. ಸಾರ್ವಜನಿಕರು ಎಲ್ಲೇ ಇದ್ದರೂ ಸಹ ಶೀಘ್ರವಾಗಿ ಉಚಿತ ವೈಫೈ ಸಂಕರ್ಪ ಕಲ್ಪಿಸುವ ಹೊಸ ಮೊಬೈಲ್ ಅಪ್ಲಿಕೇಶನ್ ಯಾವುದು ಎಂದು ತಿಳಿಯಲು ಈ ಲೇಖನ ಓದಿ. ಅಪ್ಲಿಕೇಶನ್‌ನ ವಿಶೇಷ ಫೀಚರ್‌ಗಳನ್ನು ಸಹ ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.
ಗೂಗಲ್ ಪ್ಲೇ ಸ್ಟೋರ್'ನಲ್ಲಿ 8 ಹೊಸ ವಿಭಾಗಗಳ ಅಳವಡಿಕೆ

ವೈಫೈಯರ್(WiFire)
ವೈಫೈಯರ್ ಎಂಬ ಹೊಸ ಅಪ್ಲಿಕೇಶನ್ ಸ್ವಯಂ ಆಗಿ ನೀವು ಎಲ್ಲೇ ಹೋದರೂ ಸಹ ಅದು ಉಚಿತ ವೈಫೈ ಹಾಟ್‌ಸ್ಪಾಟ್‌ಗಳನ್ನು ಮಾತ್ರ ನಿಮಗೆ ಸಂಪರ್ಕ ಕಲ್ಪಿಸುತ್ತದೆ.

ಪಾಸ್‌ವರ್ಡ್
ಯಾವುದೇ ಪಾಸ್‌ವರ್ಡ್, ಬಳಕೆದಾರರ ಹೆಸರು ಇತರ ಮಾಹಿತಿ ನೀಡದೆ ಉಚಿತವಾಗಿ ಸಂಪರ್ಕ ಕಲ್ಪಿಸುವ ಹೊಸ ಅಪ್ಲಿಕೇಶನ್ ವೈಫೈಯರ್‌ಆಗಿದೆ.

ಸಾರ್ವಜನಿಕ ವೈಫೈ
ನೀವು ಇರುವ ಸ್ಥಳಗಳಲ್ಲಿ ಯಾವುದಾದರೂ ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್ ಇದ್ದರೆ ಸರ್ಚ್ ಮಾಡಿ ನಿಮಗೆ ಸಂಪರ್ಕ ಕಲ್ಪಿಸುವ ಅತ್ಯುತ್ತಮ ಉಪಯೋಗಿ ಆಪ್ ವೈಫೈಯರ್.

ಉಚಿತ ವೈಫೈ ನೆಟ್‌ವರ್ಕ್‌ಗಳು
* ವಿಮಾನ ನಿಲ್ದಾಣಗಳು-ದೆಹಲಿ, ಬಾಂಬೆ, ಬೆಂಗಳೂರು, ಕೊಲ್ಕತ್ತಾ, ಚನ್ನೈ, ಹೈದಾರಾಬಾದ್ * ಸಾರ್ವಜನಿಕ ಹಾಟ್‌ಸ್ಪಾಟ್‌ಗಳು- ಟಾಟಾ ಡೊಕೊಮೊ ಮತ್ತು ಓಜೋನ್ * ರೆಸ್ಟೋರೆಂಟ್‌ಗಳು ಮತ್ತು ಕೆಫೆ - ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್, ಸ್ಟಾರ್ಟ್‌ಬಕ್ಸ್ ಮತ್ತು ಇತರೆ ಹಲವು
ವೈಫೈಯರ್ ಫೀಚರ್
* ಸ್ವಯಂ ಆಗಿ ವೈಫೈಯರ್ ಪಾಸ್‌ವರ್ಡ್ ತೆಗೆದುಕೊಳ್ಳದೆ ವೈಫೈ ಸಂಪರ್ಕ ತೆಗೆದುಕೊಳ್ಳುತ್ತದೆ. * ಸಾರ್ವಜನಿಕ ಹಾಟ್‌ಸ್ಪಾಟ್‌ಗಳಲ್ಲಿ ಆಪ್ ನಿಮ್ಮ ನಂಬರ್ ಅನ್ನು ಸ್ವಯಂ ಆಗಿ ಟೈಪಿಸಿ ಒಮ್ಮೆ ಟ್ಯಾಪ್ ಮಾಡುವ ಮೂಲಕ ಪಾಸ್‌ವರ್ಡ್ ಅನ್ನು ತೆಗೆದುಕೊಳ್ಳುತ್ತದೆ. * ಉಚಿತ ವೈಫೈ ಸ್ಥಳಗಳನ್ನು ಆಪ್‌ನ ಮ್ಯಾಪ್‌ನಲ್ಲಿ ಸರ್ಚ್ ಮಾಡಬಹುದಾಗಿದೆ. * ಇದನ್ನು ಬಳಸುವುದರ ಮೂಲಕ ಅಂಕಗಳನ್ನು ಪಡೆದು ಉಚಿತ ಬಹುಮಾನಗಳನ್ನು ಪಡೆಯಬಹುದು ಎನ್ನಲಾಗಿದೆ

ಬೆಂಗಳೂರು
ವೈಫೈಯರ್ ಉಚಿತ ವೈಫೈಯನ್ನು ಸಂಪರ್ಕಿಸುವ ಸೌಲಭ್ಯವು ಪ್ರಸ್ತುತದಲ್ಲಿ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಲಭ್ಯವಿದೆ. ಅದನ್ನು ಬಿಟ್ಟರೆ ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ ಮತ್ತು ಹೈದಾರಾಬಾದ್‌ನಲ್ಲಿ ಆಪ್ ಸೇವೆ ಇದೆ. ಭಾರತದಾದ್ಯಂತ ಈ ಸೇವೆ ಆಪ್ ಮೂಲಕ ಮುಂದಿನ ದಿನಗಳಲ್ಲಿ ಅಭಿವೃದ್ದಿಗೊಳ್ಳಲಿದೆ.

ಪ್ರವಾಸಿಗರಿಗೆ ಅತ್ಯುತ್ತಮ ಆಪ್
ಆಗಾಗ ಪ್ರವಾಸ ಹೋಗುವವರಿಗೆ ಈ ಆಪ್ ಅಧಿಕ ರೀತಿಯಲ್ಲಿ ಸಹಾಯವಾಗುತ್ತದೆ. ಎಲ್ಲಿ ಹೋದರು ಸಹ ವೈಫೈಯರ್ ಆಪ್ ಮುಖಾಂತರ ಉಚಿತ ವೈಫೈ ಸಂಪರ್ಕ ಪಡೆಯಬಹುದಾಗಿದೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ
ಮಾಹಿತಿಯನ್ನು ಇಂಟರ್ನೆಟ್‌ನಿಂದ ಪಡೆಯಲು ಕಾಲೇಜು ವಿದ್ಯಾರ್ಥಿಗಳು ಹೋದಲ್ಲೆಲ್ಲಾ ವೈಫೈಯರ್ ಹೆಚ್ಚಿನ ರೀತಿಯಲ್ಲಿ ಅವರಿಗೆ ಅನುಕೂಲವಾಗಲಿದೆ.

ವೈಫೈ ಸಂಪರ್ಕ
ವೈಫೈಯರ್ ಆಪ್ ನಿಮ್ಮ ಹತ್ತಿರದಲ್ಲಿ ಇರುವ ಯಾವುದೇ ಸಾರ್ವಜನಿಕ ವೈಫೈ ಸಂಪರ್ಕವನ್ನು ಪಡೆದ ತಕ್ಷಣ ನಿಮಗೆ ನೋಟಿಫಿಕೇಶನ್ ನೀಡುತ್ತದೆ. ವೈಫೈಯರ್ ಆಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಯಾರು ಬೇಕಾದರು ಪಡೆಯಬಹುದಾಗಿದೆ. ವೈಫೈಯರ್ ಆಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470