'ಗೂಗಲ್‌ ಪ್ಲೇ ಸ್ಟೋರ್‌'ನಲ್ಲಿ 8 ಹೊಸ ವಿಭಾಗಗಳ ಅಳವಡಿಕೆ

Written By:

ಗೂಗಲ್‌ ಇತ್ತೀಚೆಗೆ ತನ್ನ ಹೊಸ ಹೊಸ ಯೋಜನೆಗಳನ್ನು ಶೀಘ್ರವಾಗಿ ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ. ಆಂಡ್ರಾಯ್ಡ್‌ ನ್ಯೂಗಾ ಓಎಸ್‌, ಸಲಹೆಗಳು ಮತ್ತು ತಂತ್ರಗಳ ಬಗ್ಗೆ ಮಾಹಿತಿ ನೀಡುವ ಹೊಸ ವೆಬ್‌ಸೈಟ್ ಗೂಗಲ್‌ನ ಇತ್ತೀಚಿನ ಹೊಸ ಸೇವೆಗಳು. ಇವುಗಳ ಬಗ್ಗೆ ಬಹುಸಂಖ್ಯಾತ ಜನರಿಗೆ ಈಗಾಗಲೇ ಮಾಹಿತಿ ತಿಳಿದಿದೆ. ಇದರ ಜೊತೆಗೆ ಗೂಗಲ್‌ ತನ್ನ 'ಗೂಗಲ್‌ ಪ್ಲೇ ಆಪ್‌ ಸ್ಟೋರ್' ಗೆ ಹೊಸ 8 ಫೀಚರ್‌ಗಳನ್ನು ಪರಿಚಯಿಸುತ್ತಿದೆ.

ಗೂಗಲ್‌ ತನ್ನ ಆಪ್‌ ಪ್ಲೇ ಸ್ಟೋರ್‌'ಗೆ ಹೊಸ ಆಪ್‌ ವಿಭಾಗಗಳನ್ನು ಸೇರಿಸುವ ಮುಖಾಂತರ ಹೆಚ್ಚಿನ ಮಾಹಿತಿ ಮತ್ತು ಬಳಕೆದಾರ ಸ್ನೇಹಿಯಾಗಲಿದೆ. ಅಲ್ಲದೇ ಪ್ರಸ್ತುತದಲ್ಲಿ ಇರುವ ಎರಡು ವಿಭಾಗಗಳಿಗೆ ಮರುನಾಮಕರಣ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್‌ ಆಪ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸರ್ಚ್‌ ಅನುಭವ ಉತ್ತಮ ಪಡಿಸುವ ಉದ್ದೇಶ

ಸರ್ಚ್‌ ಅನುಭವ ಉತ್ತಮ ಪಡಿಸುವ ಉದ್ದೇಶ

ಗೂಗಲ್‌ ಸರ್ಚ್‌ ಅನುಭವ ಉತ್ತಮ ಪಡಿಸುವ ಉದ್ದೇಶದ ಹಿನ್ನೆಲೆಯಲ್ಲಿ ಹೊಸ 8 ಆಪ್‌ ವಿಭಾಗಗಳನ್ನು ಪರಿಚಯಿಸುತ್ತಿದ್ದು, ಕೆಲವು ವಿಭಾಗಗಳಿಗೆ ಮರುನಾಮಕರಣ ಮಾಡಿದೆಯಂತೆ. ಬಳಕೆದಾರರು ವ್ಯಾಪಕವಾಗಿ ಹುಡುಕುವಂತಹ ಸರ್ಚ್‌ ಆಧಾರಿತವಾಗಿ ಈ ಫೀಚರ್‌ ಅನ್ನು ಪರಿಚಯಿಸುತ್ತಿದೆ ಎಂದು ಗೂಗಲ್‌ ಪ್ಲೇ ಆಪ್‌ ಬ್ಯುಸಿನೆಸ್ ಡೆವಲಪ್‌ಮೆಂಟ್‌ ಕಾರ್ಯನಿರ್ವಾಹಕ 'ಸರಹ್ ಕರಮ್‌' ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

 ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇರುವ ಹೊಸ ವಿಭಾಗಗಳು

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇರುವ ಹೊಸ ವಿಭಾಗಗಳು

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬಳಕೆದಾರರು ಆರ್ಟ್ & ಡಿಸೈನ್‌(Art & Design), ಆಟೊ &ವೆಹಿಕಲ್(Auto & Vehicles), ಬ್ಯೂಟಿ(Beauty), ಡೇಟಿಂಗ್(Dating), ಈವೆಂಟ್ಸ್‌(Events), ಫುಡ್‌ & ಡ್ರಿಂಕ್‌(Food & Drink), ಹೌಸ್‌ & ಹೋಮ್‌(House & Home) ಮತ್ತು ಪೇರೆಂಟಿಂಗ್ (Parenting) ಎಂಬುದಾಗಿ ನೋಡಬಹುದಾಗಿದೆ.

ಮರುನಾಮಕರಣ ಮಾಡಿದ ವಿಭಾಗಗಳು

ಮರುನಾಮಕರಣ ಮಾಡಿದ ವಿಭಾಗಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟ್ರ್ಯಾನ್ಸ್‌ಪೋರ್ಟೇಶನ್ (Transportation) ವಿಭಾಗವನ್ನು 'Maps & Navigation' ಎಂದು, ಮೀಡಿಯಾ & ವೀಡಿಯೊ' ವಿಭಾಗವನ್ನು 'Video Players &Editors' ಎಂದು ಮರುನಾಮಕರಣ ಮಾಡಲಾಗಿದೆ.

 ಹೊಸ ವಿಭಾಗಗಳು

ಹೊಸ ವಿಭಾಗಗಳು

ಗೂಗಲ್‌ 'ಆಪ್‌ ಪ್ಲೇ ಸ್ಟೋರ್‌'ನಲ್ಲಿ ಸೇರಿಸಲಾಗಿರುವ ಈ ವಿಭಾಗಗಳು ಕೇವಲ ಇನ್ನು 60 ದಿನಗಳೊಳಗೆ ಕಾಣಿಸಿಕೊಳ್ಳಲಿವೆ.

ಅಭಿವೃದ್ದಿಗಾರರ ಸಲಹೆ

ಅಭಿವೃದ್ದಿಗಾರರ ಸಲಹೆ

ಗೂಗಲ್‌ ಈಗ ಸೇರಿಸಿರುವ ವಿಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಇರಲಿರುವ ಆಪ್‌ಗಳು ಪ್ರಸ್ತುತದಲ್ಲೂ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಬಳಕೆದಾರರು ಹೊಸ ವಿಭಾಗ ಪ್ರದರ್ಶನವಾಗುವ ಮುಂಚೆಯು ಸಹ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ ಎಂದು ಕರಮ್ ಹೇಳಿದ್ದಾರೆ.

 ಫ್ಯಾಮಿಲಿ ಲೈಬ್ರರಿ ಫೀಚರ್‌

ಫ್ಯಾಮಿಲಿ ಲೈಬ್ರರಿ ಫೀಚರ್‌

ಗೂಗಲ್‌ ಪ್ಲೇ ಸ್ಟೋರ್‌ 'ಫ್ಯಾಮಿಲಿ ಲೈಬ್ರರಿ ಫೀಚರ್‌' ಅನ್ನು ಬಿಡುಗಡೆ ಮಾಡಿದೆ. ಈ ಫೀಚರ್‌ನಿಂದ ಆಂಡ್ರಾಯ್ಡ್ ಬಳಕೆದಾರ ಆಪ್‌ಗಳನ್ನು ಖರೀದಿಸಿ, ಇದೇ ಆಪ್‌ಗಳನ್ನು ಇತರೆ ಫ್ಯಾಮಿಲಿಯೊಂದಿಗೆ ಶೇರ್‌ ಮಾಡಿಕೊಳ್ಳಬಹುದಾಗಿದೆ. ಗೂಗಲ್‌ ಕಂಪನಿಯು ಈಗಾಗಲೇ ಗೂಗಲ್‌ ಪ್ಲೇ ಮ್ಯೂಸಿಕ್‌ ಫ್ಯಾಮಿಲಿ ಪ್ಲಾನ್‌ ಅನ್ನು ಪರಿಚಯಿಸಿದೆ.

 ಆಪ್‌ ಅಪ್‌ಡೇಟ್‌ ಸೈಜ್‌ ಕಡಿಮೆ

ಆಪ್‌ ಅಪ್‌ಡೇಟ್‌ ಸೈಜ್‌ ಕಡಿಮೆ

ಕಂಪನಿ 'ಗೂಗಲ್‌ ಪ್ಲೇ ಸ್ಟೋರ್‌'ಗೆ ಹೊಸ ಬದಲಾವಣೆ ತಂದಿದ್ದು, ಇದರಿಂದ ಆಪ್‌ ಅಪ್‌ಡೇಟ್‌ಗಳ ಗಾತ್ರ ಕಡಿಮೆಗೊಳ್ಳಲಿದೆ. ಇದರಿಂದ ಆಪ್‌ಗಳ ನಿರ್ದಿಷ್ಟ ಗಾತ್ರವನ್ನು ಅಪ್‌ಡೇಟ್‌ ಆದಾಗ ನೋಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Google Play Store gets 8 new app categories. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot