Subscribe to Gizbot

ಎರಡನೇ ಸೇಲ್ ನಲ್ಲಿಯೂ ಸೋಲ್ಡ್ ಔಟ್: ಮೂರನೇ ಸೇಲ್ ಗೆ Mi TV 4 ರೆಡಿ..!

Posted By: Precilla Dias

ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಶಿಯೋಮಿ Mi TV 4 ಯಶಸ್ವಿಯಾಗಿದೆ ಎಂದರೆ ತಪ್ಪಾಗುವುದಿಲ್ಲ. ಮೊದಲ ಪ್ರಯತ್ನದಲ್ಲಿಯೇ ಜನರ ಮನಸ್ಸು ಗೆದ್ದಿರುವ ಶಿಯೋಮಿ Mi TV 4 ಎರಡನೇ ಸೇಲ್ ನಲ್ಲಿಯೂ ಔಟ್ ಆಪ್ ಸ್ಟಾಕ್ ಆಗಿದ್ದು, ಮೂರನೇ ಸೇಲ್ ಗೆ ಸದ್ದಿಲ್ಲದೇ ತಯಾರಿಯನ್ನು ನಡೆಸಿದೆ. ಮೂಲಗಳ ಪ್ರಕಾರ ಮಾರ್ಚ್ 6 ರಂದು ಮೂರನೇ ಸೇಲ್ ನಲ್ಲಿ ಗ್ರಾಹಕರ ಮುಂದೆ ಬರಲಿದೆ.

ಎರಡನೇ ಸೇಲ್ ನಲ್ಲಿಯೂ ಸೋಲ್ಡ್ ಔಟ್: ಮೂರನೇ ಸೇಲ್ ಗೆ Mi TV 4 ರೆಡಿ..!

ಫ್ಲಿಪ್ ಕಾರ್ಟ್ ಮತ್ತು ಮಿ. ಕಾಮ್ ನಲ್ಲಿ ಫ್ಲಾಷ್ ಸೇಲ್ ನಲ್ಲಿ ಕಾಣಿಸಿಕೊಂಡಿದ್ದ ಶಿಯೋಮಿ Mi TV 4 ಮೊದಲೇ ಸೇಲ್ ನಲ್ಲಿಯೂ ಸೋಲ್ಡ್ ಔಟ್ ಆಗಿತ್ತು, ನಂತರದ ಎರಡನೇ ಸೇಲ್ ನಲ್ಲಿಯೂ ಗ್ರಾಹಕರಿಗೆ ಹತ್ತಿರವಾಗಿರುವ ಕಾರಣ ಔಟ್ ಆಫ್ ಸ್ಟಾಕ್ ಆಗಿದೆ.

55 ಇಂಚಿನ ಶಿಯೋಮಿ Mi TV 4 ರೂ.39,999ಕ್ಕೆ ಲಭ್ಯವಿದ್ದು, ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಲಾಭವನ್ನು ಮಾಡಿಕೊಟ್ಟಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಉಳಿದ ಎಲ್ಲಾ ಟಿವಿಗಳಿಗಿಂತಲೂ ವೇಗವಾಗಿ ಮತ್ತು ಅಧಿಕವಾಗಿ ಮಾರಾಟವಾಗುತ್ತಿದೆ ಎನ್ನಲಾಗಿದೆ.

ಎರಡನೇ ಸೇಲ್ ನಲ್ಲಿಯೂ ಸೋಲ್ಡ್ ಔಟ್: ಮೂರನೇ ಸೇಲ್ ಗೆ Mi TV 4 ರೆಡಿ..!

ಮಾರ್ಚ್ 6 ರಂದು 12 ಗಂಟೆ ಮತ್ತೊಮ್ಮೆ ಶಿಯೋಮಿ Mi TV 4 ಸೇಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಎರಡು ಸೇಲ್ ಗಳಲ್ಲಿ ಈ ಟಿವಿಯನ್ನು ಖರೀದಿಸಲು ಸಾಧ್ಯವಾಗದವರು ಮೂರನೇ ಸೇಲ್ ನಲ್ಲಿ ಶಿಯೋಮಿ Mi TV 4 ಖರೀದಿಸಬಹುದಾಗಿದೆ.

ವಿಶ್ವದ ಅತೀ ತಳುವಾದ LED TV ಎನ್ನಲಾಗಿದೆ. ಒಂದು ರುಪಾಯಿ ಕಾಯಿನ್ ನಷ್ಟು ಸಣ್ಣದಾಗಿದೆ ಎನ್ನಲಾಗಿದೆ. ಇದು 4.9mm ನಷ್ಟು ತೆಳುವಾಗಿದ್ದು, ವಿಶ್ವದಲ್ಲಿಯೇ ಲಭ್ಯವಿರುವ ತೆಳು ಟಿವಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. Mi LED TV 4 ಸ್ಮಾರ್ಟ್ ಟಿವಿಯಾಗಿದೆ.

2GB RAM + 8GB ಇಂಟರ್ ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮತ್ತು Wi Fi ಕನೆಕ್ಟ್ ಮಾಡಬಹುದಾಗಿದ್ದು, ಎರಡು USB ಪೋರ್ಟ್ ಗಳನ್ನು ಕಾಣಬಹುದಾಗಿದೆ. ಅಲ್ಲದೇ 100 MBPS ವೇಗದ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಓದಿರಿ: ಜಿಯೋಗೆ ಖೆಡ್ಡ ತೋಡಲು, ಗೂಗಲ್‌ನೊಂದಿಗೆ ಕೈ ಜೋಡಿಸಿದ ಏರ್‌ಟೆಲ್‌ನಿಂದ ಮಾಸ್ಟರ್ ಪ್ಲಾನ್‌..!

English summary
Xiaomi 55-inch Mi TV 4 sold out yet again in flash sale. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot