ಜಿಯೋಗೆ ಖೆಡ್ಡ ತೋಡಲು, ಗೂಗಲ್‌ನೊಂದಿಗೆ ಕೈ ಜೋಡಿಸಿದ ಏರ್‌ಟೆಲ್‌ನಿಂದ ಮಾಸ್ಟರ್ ಪ್ಲಾನ್‌..!

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋದೊಂದಿಗೆ ಸ್ಪರ್ಧೆಗೆ ನಿಂತಿರುವ ಏರ್‌ಟೆಲ್, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲವೂ ಜಿಯೋವನ್ನು ಹಣಿಯಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಗೂಗಲ್ ಆಂಡ್ರಾಯ್ಡ್ ಗೋ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸದ್ದು ಮಾಡುವುದನ್ನು ಮೊದಲೇ ಅರಿತ ಏರ್‌ಟೆಲ್, ಈ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೂ ಮುನ್ನವೇ ಗೂಗಲ್ ನೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ.

ಜಿಯೋಗೆ ಖೆಡ್ಡ ತೋಡಲು, ಗೂಗಲ್‌ನೊಂದಿಗೆ ಕೈ ಜೋಡಿಸಿದ ಏರ್‌ಟೆಲ್‌ನಿಂದ ಮಾಸ್ಟರ್ ಪ್ಲ

ಈಗಾಗಲೇ ಏರ್‌ಟೆಲ್ ಪರಿಚಯ ಮಾಡಿರುವ 'ಮೈರಾ ಪೇಹೆಲಾ ಸ್ಮಾರ್ಟ್‌ಫೋನ್' ಯೋಜನೆಯಲ್ಲಿ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳನನ್ನು ಲಾಂಚ್ ಮಾಡಲು ಗೂಗಲ್ ನೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ ಎನ್ನಲಾಗಿದೆ. ಇದರಿಂದಾಗಿ ಈಸ್ಮಾರ್ಟ್‌ಫೋನ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದಷ್ಟು ಏರ್‌ಟೆಲ್‌ಗೆ ಲಾಭವಾಗುವ ಸಾಧ್ಯತೆ ಇದೆ.

ಏರ್‌ಟೆಲ್‌-ಗೂಗಲ್ ಒಪ್ಪಂದ:

ಏರ್‌ಟೆಲ್‌-ಗೂಗಲ್ ಒಪ್ಪಂದ:

ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಲೈಟ್ ಆಪ್‌ಗಳಾದ ಗೋ ಆವೃತ್ತಿಯ ಆಪ್‌ ಗಳು ಕಾಣಿಸಿಕೊಳ್ಳಲಿವೆ. ಸದ್ಯ ಏರ್‌ಟೆಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಾರಣ ಏರ್‌ಟೆಲ್ ಆಪ್‌ಗಳು ಸಹ ಈ ಫೋನ್‌ಗಳಲ್ಲಿ ಇರುವ ಸಾಧ್ಯತೆ ಇದೆ.

ಏರ್‌ಟೆಲ್ ಆಫರ್:

ಏರ್‌ಟೆಲ್ ಆಫರ್:

'ಮೈರಾ ಪೇಹೆಲಾ ಸ್ಮಾರ್ಟ್‌ಫೋನ್' ಆಫರ್ ಆಡಿಯಲ್ಲಿ ಆಂಡ್ರಾಯ್ಡ್ ಗೋ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರಿಗೆ ಕ್ಯಾಷ್ ಬ್ಯಾಕ್ ಆಫರ್ ಸೇರಿದಂತೆ ಹೊಸ ಮಾದರಿಯ ಪ್ಲಾನ್‌ಗಳನ್ನು ಏರ್‌ಟೆಲ್ ನೀಡಲಿದೆ ಎನ್ನಲಾಗಿದೆ.

ಮೈಕ್ರೊಮ್ಯಾಕ್ಸ್-ಲಾವಾ:

ಮೈಕ್ರೊಮ್ಯಾಕ್ಸ್-ಲಾವಾ:

ಈಗಾಗಲೇ ಗೂಗಲ್ ಆಂಡ್ರಾಯ್ಡ್ ಗೋ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಮೈಕ್ರೋಮಾಕ್ಸ್ ಮತ್ತು ಲಾವಾ ಕಂಪನಿಗಳು ನಿರ್ಮಾಣ ಮಾಡಿದ್ದು, ಶೀಘ್ರವೇ ಅಂದರೆ ಮಾರ್ಚ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿವೆ. ಈ ಸಂದರ್ಭದಲ್ಲಿ ಏರ್‌ಟೆಲ್ ಬೊಂಬಾಟ್ ಆಫರ್ ನೀಡಲಿದೆ.

ಗೂಗಲ್ ಆಪ್‌ಗಳು;

ಗೂಗಲ್ ಆಪ್‌ಗಳು;

ವಿಶೇಷವಾಗಿ ಗೂಗಲ್ ತನ್ನ ಆಂಡ್ರಾಯ್ಡ್ ಗೋ ಆವೃತ್ತಿಗಾಗಿಯೇ ಹೊಸ ಆಪ್‌ಗಳನ್ನು ವಿನ್ಯಾಸ ಮಾಡಿದೆ. ಗೂಗಲ್ ಗೋ, ಗೂಗಲ್ ಮ್ಯಾಪ್ ಗೋ, ಜಿಮೇಲ್ ಗೋ, ಯೂಟ್ಯೂಬ್ ಗೋ, ಗೂಗಲ್ ಅಸಿಸ್ಟೆಂಟ್ ಗೋ ಮತ್ತು ಫೈಲ್ಸ್ ಗೋ ಆಪ್‌ಗಳು ಕಾಣಿಸಿಕೊಳ್ಳಲಿದೆ.

How To Link Aadhaar With EPF Account Without Login (KANNADA)
ಏರ್‌ಟೆಲ್‌ ಆಪ್‌ಗಳು:

ಏರ್‌ಟೆಲ್‌ ಆಪ್‌ಗಳು:

ಇದಲ್ಲದೇ ಏರ್‌ಟೆಲ್‌ ಆಪ್‌ಗಳು ಸಹ ಈ ಸ್ಮಾರ್ಟ್‌ಫೋನಿನಲ್ಲಿ ಕಾಣಿಸಿಕೊಳ್ಳಲಿದ್ದು, ಮೈ ಏರ್‌ಟೆಲ್ ಆಪ್, ಏರ್‌ಟೆಲ್ ಟಿವಿ, ಮತ್ತು ವಿಂಕ್ ಮ್ಯೂಸಿಕ್‌ಆಪ್‌ಗಳು ಈ ಫೋನಿನಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Airtel, Google Partner to Offer Android Go-Powered Smartphones in India. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X