ಕ್ರಿಕೆಟ್ ಪ್ರಿಯರಿಗಾಗಿಯೇ ಬಂದಿದೆ ಯಾಹೂ ಕ್ರಿಕೆಟ್ ಆಪ್: ವಿಶೇಷತೆಗಳೇನು..?
ಆಂಡ್ರಾಯ್ಡ್ ಹಾಗೂ iSOದಲ್ಲಿ ಕಾರ್ಯನಿರ್ವಹಿಸಲಿರುವ ಈ ಆಪ್ ವಿವಿಧ ಕ್ರಿಕೆಟ್‌ಗಳ ರಿಯಲ್ ಟೈಮ್ ಆಪ್‌ಡೇಟ್ ನೀಡಲಿದೆ. ಅಲ್ಲದೇ ಈ ಆಪ್ ನಲ್ಲಿ ಬಾಲ್ ಟು ಬಾಲ್ ಕಾಮೆಂಟರಿ ಸಹ ದೊರೆಯಲಿದೆ. ಇದರೊಂದಿಗೆ ಇನ್‌ಫೋ ಗ್ರಾಫಿಕ್ಸ್, ಟ್ವೀಟ್‌ಗಳು ಸಹ ಇದರಲ್
ದೇಶದಲ್ಲಿ ಕ್ರಿಕೆಟ್‌ಗೆ ಇರುವ ಅಭಿಮಾನಿಗಳ ಸಂಖ್ಯೆ ಬಹಳ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಕ್ರಿಕೆಟ್ ಲೈವ್ ಮತ್ತು ಸ್ಕೋರ್ ನೋಡುವವರ ಸಂಕ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾಹೂ ಕ್ರಿಕೆಟ್ ಆಪ್ ವೊಂದನ್ನು ಲಾಂಚ್ ಮಾಡಿದೆ.

ಓದಿರಿ: ಕೊಡುವ ಬೆಲೆಗೆ ಯಾವುದು ಬೆಸ್ಟ್: ಜಿಯೋ ಫೋನ್-ಏರ್‌ಟೆಲ್ ಫೋನ್? ಇಲ್ಲಿದೆ ಸಂಪೂರ್ಣ ವಿವರ!
ಆಂಡ್ರಾಯ್ಡ್ ಹಾಗೂ iSOದಲ್ಲಿ ಕಾರ್ಯನಿರ್ವಹಿಸಲಿರುವ ಈ ಆಪ್ ವಿವಿಧ ಕ್ರಿಕೆಟ್‌ಗಳ ರಿಯಲ್ ಟೈಮ್ ಆಪ್‌ಡೇಟ್ ನೀಡಲಿದೆ. ಅಲ್ಲದೇ ಈ ಆಪ್ ನಲ್ಲಿ ಬಾಲ್ ಟು ಬಾಲ್ ಕಾಮೆಂಟರಿ ಸಹ ದೊರೆಯಲಿದೆ. ಇದರೊಂದಿಗೆ ಇನ್‌ಫೋ ಗ್ರಾಫಿಕ್ಸ್, ಟ್ವೀಟ್‌ಗಳು ಸಹ ಇದರಲ್ಲಿ ಇರಲಿದೆ.

ಸ್ಕೋರ್ ಜೊತೆಗೆ ನ್ಯೂಸ್ ಲಭ್ಯ:
ಯಾಹೂ ಕ್ರಿಕೆಟ್ ಆಪ್‌ನಲ್ಲಿ ಕ್ರಿಕೆಟ್ ಸ್ಕೋರ್ ಜೊತೆಗೆ ನ್ಯೂಸ್ ಅನ್ನು ನೀಡಲಿದ್ದು, ಪ್ರತಿ ಮ್ಯಾಚ್ ಅಂಕಿ ಅಂಶಗಳು ಮತ್ತು ನ್ಯೂಸ್ ಅನ್ನು ತಿಳಿಸಲಿದೆ. ಇದರಿಂದ ಬಳಕೆದಾರರಿಗೆ ಕ್ರಿಕೆಟ್ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇಲ್ಲಿ ದೊರೆಯಲಿದೆ.

ಗ್ರಾಫಿಕ್ಸ್ ಲಭ್ಯ:
ಇದೇ ಮಾದರಿಯಲ್ಲಿ ಪ್ರತಿ ಮ್ಯಾಚಿನ ಅಂಕಿ-ಅಂಶಗಳು ಗ್ರಾಫಿಕ್ಸ್ ಮಾದರಿಯಲ್ಲಿ ದೊರೆಯಲಿದೆ. ಬೇರೆ ಎಲ್ಲಾ ಮಾದರಿಯ ಆಪ್‌ಗಳಿಗಿಂತ ವಿಭಿನ್ನಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಸ್ಕೋರ್‌ಗಳನ್ನು ತಿಳಿಯುವುದು ಸುಲಭವಾಗಲಿದೆ.

ಸೆಲೆಬ್ರಿಟಿಗಳ ಟ್ವೀಟ್:
ಪ್ರತಿ ಮ್ಯಾಚಿಗೆ ಸಂಬಂಧಿಸಿದಂತೆ ಸಲೆಬ್ರಿಟಿಗಳು ಟ್ವೀಟ್ ಮಾಡುವುದನ್ನು ಈ ಆಪ್ ನಲ್ಲಿಯೇ ನೋಡುವ ಅವಕಾಶವನ್ನು ಯಾಹೂ ಮಾಡಿಕೊಟ್ಟಿದ್ದು, ಮಾರುಕಟ್ಟೆಯಲ್ಲಿರುವ ಎಲ್ಲಾ ಆಪ್‌ಗಳಿಗೆ ಸ್ಪರ್ಧೆಯನ್ನು ನೀಡಲಿದೆ.


Click it and Unblock the Notifications








