ಕೊಡುವ ಬೆಲೆಗೆ ಯಾವುದು ಬೆಸ್ಟ್: ಜಿಯೋ ಫೋನ್-ಏರ್‌ಟೆಲ್ ಫೋನ್? ಇಲ್ಲಿದೆ ಸಂಪೂರ್ಣ ವಿವರ!

ಕಾರ್ಬನ್ A 40 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಜಿಯೋ ಫೋನ್ ರೂ. 1500ಕ್ಕೆ ದೊರೆಯುತ್ತಿದ್ದರೇ, ಏರ್‌ಟೆಲ್‌ ಫೋನ್ ರೂ. 1,399ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

|

ದೇಶಿಯ ಟೆಲಿಕಾಂ ವಲಯದಲ್ಲಿ ಈಗಾಗಲೇ ರಿಲಯನ್ಸ್ ಜಿಯೋ ಹಾಗೂ ಏರ್‌ಟೆಲ್ ಕಂಪನಿಗಳು ಈಗಾಗಲೇ ದೇಶಿಯ ಟೆಲಿಕಾಂ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ತಮ್ಮದೇ ಫೋನ್‌ಗಳನ್ನು ಬಿಡುಗಡೆ ಮಾಡಿ ಜನರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿರುವ ವಿಚಾರ ತಿಳಿದಿರುವುದೆ.

ಕೊಡುವ ಬೆಲೆಗೆ ಯಾವುದು ಬೆಸ್ಟ್: ಜಿಯೋ ಫೋನ್-ಏರ್‌ಟೆಲ್ ಫೋನ್?

ಓದಿರಿ: ಫೇಕ್ ವಾಟ್ಸ್‌ಆಪ್ ಚಾಟ್ ಸೃಷ್ಟಿ ಮಾಡಬಹುದು.! ಹೇಗೆ ಅಂತೀರಾ..?

ಜಿಯೋ ತನ್ನದೇ ಜಿಯೋ ಪೋನ್ ಬಿಡುಗಡೆ ಮಾಡಿದರೆ, ಏರ್‌ಟೆಲ್ ಈ ಬಾರಿ ಕಾರ್ಬನ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಬನ್ A 40 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಜಿಯೋ ಫೋನ್ ರೂ. 1500ಕ್ಕೆ ದೊರೆಯುತ್ತಿದ್ದರೇ, ಏರ್‌ಟೆಲ್‌ ಫೋನ್ ರೂ. 1,399ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇವರೆಡರಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ತಿಳಿದುಕೊಳ್ಳುವ.

ಕನೆಕ್ಟಿವಿಟಿ:

ಕನೆಕ್ಟಿವಿಟಿ:

ಜಿಯೋ ಫೋನ್ ಫೀಚರ್ ಫೋನ್ ಆಗಿದ್ದು, ಆದರೆ ಸ್ಮಾರ್ಟ್‌ ಫೀಚರ್ ಗಳನ್ನು ಒಳಗೊಂದಿದೆ. ಇದೇ ಮಾದರಿಯಲ್ಲಿ ಏರ್‌ಟೆಲ್ ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದೆ. ಎರಡು ಫೋನ್‌ಗಳು 4G VoLET ಸಪೋರ್ಟ್ ಮಾಡಲಿದೆ. ಆದರೆ ಇಲ್ಲಿ ಜಿಯೋ ಫೋನ್ 4G ಬಿಟ್ಟರೇ ಬೇರೆ ನೆಟ್ವರ್ಕ್ ಗೆ ಸಫೋರ್ಟ್ ಮಾಡುವುದಿಲ್ಲ. ಕಾರ್ಬನ್ ಫೋನ್ ಬೆರೆ ನೆಟ್‌ವರ್ಕ್‌ನೊಂದಿಗೂ ಸೇರಿ ಕಾರ್ಯನಿರ್ವಹಿಸಲಿದೆ.

ಆಪರೇಟಿಂಗ್ ಸಿಸ್ಟಮ್:

ಆಪರೇಟಿಂಗ್ ಸಿಸ್ಟಮ್:

A40 ಇಂಡಿಯನ್ ಫೋನ್ ಆಂಡ್ರಾಯ್ಡ್ 7.0ದಲ್ಲಿ ಕಾರ್ಯನಿರ್ಹಿಸಲಿದ್ದು, ಇದರಲ್ಲಿ ಫೇಸ್‌ಬುಕ್, ವಾಟ್ಸ್‌ಆಪ್ ಸೇರಿದಂತೆ ಮಿಲಿಯನ್ ಸಂಖ್ಯೆಯಲ್ಲಿ ಲಭ್ಯವಿರುವ ಆಪ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಜಿಯೋ ಫೋನ್ KaiOSನಲ್ಲಿ ಕಾರ್ಯನಿರ್ಹಿಸಲಿದ್ದು, ಜಿಯೋ ಆಪ್‌ಗಳನ್ನು ಬಿಟ್ಟರೇ ಬೇರೆ ಆಪ್ ಬಳಸುವ ಸಾಧ್ಯತೆ ಇಲ್ಲ. ಆದರೆ ಬ್ರೌಸ್ ಮಾಡಿಕೊಳ್ಳಬಹುದಾಗಿದೆ.

A40 ಇಂಡಿಯನ್ ವಿಶೇಷತೆಗಳು:

A40 ಇಂಡಿಯನ್ ವಿಶೇಷತೆಗಳು:

A40 ಇಂಡಿಯನ್ ಫೋನ್ ನಲ್ಲಿ 4 ಇಂಚಿನ ಟಚ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 1GB RAM ಇದ್ದು, 1.3GHz ವೇಗದ ಕ್ವಾಡ್‌ ಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. 8GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ ೦.3MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ 1,400mAh ಬ್ಯಾಟರಲಿ ಸಹ ಇದರಲ್ಲಿದೆ.

ಜಿಯೋ ಫೋನ್‌ ವಿಶೇಷತೆಗಳು:

ಜಿಯೋ ಫೋನ್‌ ವಿಶೇಷತೆಗಳು:

ಜಿಯೊ ಫೋನ್‌ನಲ್ಲಿ 2.4 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು ಸಹ ಡ್ಯುಯಲ್ ಕೋರ್ ಪ್ರೋಸೆಸರ್ ಹೊಂದಿದ್ದು, 1 GHz ವೇಗದಲ್ಲಿ ಕಾರ್ಯನಿರ್ವಹಿಲಿಸದ್ದು, 512MB RAM ಇದರಲ್ಲಿದೆ. ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವು ಇದೆ. ಇದಲ್ಲದೇ ಹಿಂಭಾಗದಲ್ಲಿ 2MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 0.3 MP ಕ್ಯಾಮೆರಾ ಇದೆ. ಜೊತೆಗೆ 2000mAh ಬ್ಯಾಟರಿ ಇದೆ.

Best Mobiles in India

English summary
As Airtel challenges Reliance JioPhone with Karbonn A40 Indian smartphone, here’s a look at how they compete. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X