ನಿಂಟೆಂಡೊ ಸಂಸ್ಥೆ ಬಿಡುಗಡೆ ಮಾಡುತ್ತಿದೆ ಹೊಸ "ಅಡ್ವೆಂಚರ್ ಗೇಮ್'!

|

ಮಕ್ಕಳು ಮಾತ್ರ ಗೇಮ್ ಆಡಬೇಕು ಎನ್ನುವ ಜಮಾನ ಇಂದಿನದಲ್ಲ. ಪ್ರಸ್ತುತವಾಗಿ ಎಲ್ಲವಯೋಮಾನದವರು ಗೇಮ್ಸ್ ಆಡುವುದು ಕಾಮನ್ ಆಗಿದೆ. ಮಕ್ಕಳಿಗೆ ಕೆಲವು ಗೇಮ್‌ಗಳು ಇಷ್ಟವಾದರೆ, ದೊಡ್ಡವರು ಅವರವರ ಅಭಿರುಚಿಗೆ ತಕ್ಕಂತೆ ಗೇಮ್ಸ್ಗಳನ್ನು ಆಡುತ್ತಾರೆ. ಸಾಹಸ ಭರಿತ ಕೌತುಕ ಆಟಗಳನ್ನು ಆಡುವ ದೊಡ್ಡವರ ಬಳಗ ಹೆಚ್ಚಿದೆ. ಇಂಥಹ ಗೇಮ್‌ಗಳನ್ನು ಇಷ್ಟಪಡುವ ಗೇಮ್ ಪ್ರಿಯರಿಗೆ ಇಂದಿನ ಈ ಲೇಖನದಲ್ಲಿ ಖುಷಿ ಸುದ್ಧಿಯೊಂದಿದೆ.

ನಿಂಟೆಂಡೊ ಸಂಸ್ಥೆ ಬಿಡುಗಡೆ ಮಾಡುತ್ತಿದೆ ಹೊಸ

ಅನೇಕ ಬಗೆಯ ಗೇಮ್ಸ್ ಆಪ್‌ಗಳು ನಮಗೆ ಸಿಕ್ಕಿದರೂ ಸಹ ಅವುಗಳಲ್ಲಿ ಅಡ್ವೇಂಚರ ಕುರಿತಾದ ಆಟಗಳು ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಅಡ್ವೆಂಚರ್ ಕ್ರಿಯೇಟಿವಿಟಿ ಇರುವಂತಹ ಆಟಗಳನ್ನು ಆಡಲು ಬಹಸುವ ಗೇಮ್ಸ್ ಪ್ರೀಯರು ಸಾಕಷ್ಟಿದ್ದಾರೆ. ಅಂತವರಿಗಾಗಿ ನಿಂಟೆಂಡೊ ಸಂಸ್ಥೆ "ಯೋಶಿ' ಎಂಬ ಸಾಹಸ ಪ್ರಧಾನ ಆಟವೊಂದನ್ನು ಮಾರ್ಚ ಅಂತ್ಯದ ವೇಳೆಗೆ ಬಿಡುಗಡೆ ಮಾಡಲು ಸಿದ್ಧವಿದೆ. ಆ ನಂತರ ಯೋಶಿ ಗೇಮ್ ಆಸಕ್ತರು ಡೌನಲೋಡ್ ಮಾಡಿಕೊಳ್ಳಬಹುದು.

ನಿಂಟೆಂಡೊ ಸಂಸ್ಥೆ ಬಿಡುಗಡೆ ಮಾಡುತ್ತಿದೆ ಹೊಸ
ಈ ಆಟವು ಪಝಲ್ ಮಾದರಿಂತೆ ಇರುವುದಾಗಿದೆ, ಮನೆಯೊಳಗಿನ ಗೃಹಬಳಗೆಯ ಕಾಗದ, ಬಾಕ್ಸ್ ವಸ್ತುಗಳನ್ನು ಮರೆಮಾಡಿರಲಾಗಿರುವುದು, ಆ ಮರೆಯಾದ ವಸ್ತುಗಳನ್ನು ಹುಡುಕುಲು ಮತ್ತು ಆಟಗಾರರು ಪರಿಹಾರ ಕಂಡುಕೊಳ್ಳುವುದು ಈ ಆಟದಲ್ಲಿ ಇರುವ ಪ್ರಮುಖ ಅಂಶಗಳಾಗಿವೆ. ಈ ಆಟವು ಹಲವು ಹಂತಗಳನ್ನು ಹೊಂದಿದ್ದು, ಆಟವನ್ನು ಆಡಲು ಆಯ್ಕೆ ನೀಡಲಾಗಿದೆ ಬೇಕಾದರೆ ನೀವು 2-ಪ್ಲೇಯರ್ ಮೋಡ್‌ನಲ್ಲಿ ಸ್ನೇಹಿತರೊಡನೆ ಸಹ ಆಡಬಹುದಾಗಿದೆ.

'ಯೋಶಿ' ಆಟದಲ್ಲಿ ಬಳಸುವ ಎಲ್ಲ ಪ್ರಮುಖ ವಸ್ತುಗಳು ಗೃಹಬಳಕೆಯ ವಸ್ತುಗಳೆ ಆಗಿರುತ್ತವೆ, ಈ ಆಟವು ನಿಂಟೆಂಡೊ ಸಂಸ್ಥೆ ನಿರ್ಮಿತ ಕರಕುಶಲ ಪ್ರಪಂಚವಾಗಿರುವುದು, ಇಲ್ಲಿ ಡೈನೋಸೂರ್ ವಿಲನ್ ಇದ್ದಂತೆ. ಈ ಡೈನೋಸೂರ್ ಆಟಗಾರರೊಂದಿಗೆ ಸೆಣಸಲಿದ್ದು, ಡೈನೋಸೂರ್ ಮೊಟ್ಟೆ ಸಹಿತ ಇತರೆ ವಸ್ತುಗಳನ್ನು ಎಸೆಯುವ ಸನ್ನಿವೇಶಗಳು ಆಟಗಾರರಿಗೆ ಆಡುವಾಗ ಎದುರಾಗಲಿವೆ ಎನ್ನಲಾಗಿತ್ತಿದೆ.

ನಿಂಟೆಂಡೊ ಸಂಸ್ಥೆ ಬಿಡುಗಡೆ ಮಾಡುತ್ತಿದೆ ಹೊಸ
ಯೋಶಿ ಕ್ರಾಫ್ಟ್‌ ಪ್ರಪಂಚ ಈ ಆಟದಲ್ಲಿ ರತ್ನಗಳನ್ನು ಅನ್ವೇಷಣೆ ಮಾಡುವ ಮತ್ತು ನಿಧಿಯನ್ನು ಹುಡುಕುವ ಕುತೂಹಲಕಾರಿ ಪ್ರಸಂಗಗಳು ಇರಲಿವೆ, ಇವು ಅಡ್ವೆಂಚರ್ ಪ್ರಿಯರಿಗೆ ರಸದೌತಣ ನೀಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಈ ಯೋಶಿ ಗೇಮ್ 2D ಪ್ಲಾಟ್‌ಫಾರ್ಮ ಮಾದರಿಯಲ್ಲಿ ಇರಲಿದೆ. ಇದರೊಂದಿಗೆ ಇದೇ ಮಾರ್ಚ್‌ನಲ್ಲಿ ನಿಂಟಂಡೊ "ಕಿರ್ಬಿಸ್ ಎಕ್ಸ್ಟ್ರಾ ಎಪಿಕ್' ಆಟದ 3D ವರ್ಷನ್ ಸಹ ಬಿಡಲಿದೆ. ಈ ಕಿರ್ಬಿಸ್ ಆಟವು ಬಟ್ಟೆ ಮತ್ತು ದಾರದ ವಸ್ತುಗಳ ಕುರಿತು ಆಡುವ ಆಟವಾಗಿದೆ ಎಂಬದನ್ನು ಸಂಸ್ಥೆ ಹೇಳಿದೆ.
Best Mobiles in India

English summary
The Nintendo Switch exclusive is a playable diorama.to know more visit the kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X