ಫೋನ್‌ನಲ್ಲಿ ಈ 5 ಆಪ್‌ಗಳಿಂದ ಚಾವಣಿಯಲ್ಲಿ ನೀರು ಲೀಕ್‌ ಆಗುವುದನ್ನು ಪತ್ತೆಹಚ್ಚಿ

By Suneel
|

ಮಳೆಗಾಲ ಆರಂಭವಾಯಿತು. ಮಳೆ ಯಾವಾಗ ಬರುತ್ತೆ ಯಾವಾಗ ಹೋಗುತ್ತೆ ಅನ್ನೋದನ್ನೇ ಹೇಳಲು ಸಾಧ್ಯವಿಲ್ಲ. ಆದರೆ ಮಳೆಗಾಲ ಆರಂಭವಾದ್ರೆ ಮನೆಗಳ ಚಾವಣಿಯಲ್ಲಿ ನೀರು ಲೀಕ್‌ ಆಗುವುದು ಮಾತ್ರ ತಪ್ಪಿದ ಸಮಸ್ಯೆ ಅಲ್ಲ.

ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ದಿನಗಳಲ್ಲಿ ದೈನಂದಿನ ಹಲವು ಕೆಲಸಗಳಿಗೆ ಸಹಾಯ ಮಾಡುತ್ತವೆ. ಅಲ್ಲದೇ ಬೆಸ್ಟ್‌ ಫ್ರೆಂಡ್‌ ಸಹ. ಅಂದಹಾಗೆ ನಾವು ಬಳಸುವ ಸ್ಮಾರ್ಟ್‌ಫೋನ್ ಸಹ ಮನೆಗಳ ಚಾವಣಿಯಲ್ಲಿ ಎಲ್ಲಿ ನೀರು ಲೀಕ್‌ ಆಗುತ್ತಿದೆ ಎಂಬುದನ್ನ ಪತ್ತೆ ಹಚ್ಚುತ್ತವೆ. ನಿಮ್ಮ ಮನೆಗಳಲ್ಲಿ, ಎಲ್ಲೇ ಆಗಲಿ ಮಳೆಗಾಲದಲ್ಲಿ ನೀರು ಲೀಕ್‌ ಆಗುತ್ತಿದ್ದರೆ, ಎಲ್ಲಿ ನೀರು ಲೀಕ್‌ ಆಗುತ್ತಿದೆ ಎಂಬುದನ್ನು ಸ್ಮಾರ್ಟ್‌ಫೋನ್‌ ಪತ್ತೆ ಹಚ್ಚುತ್ತವೆ. ನೀರು ಲೀಕ್‌ ಆಗುವುದನ್ನು ಪತ್ತೆಹಚ್ಚಲು ನಾವು ತಿಳಿಸುವ ಕೆಳಗಿನ 5 ಆಪ್‌ಗಳು ಸಹಾಯಕವಾಗಲಿವೆ. 5 ಆಪ್‌ಗಳು ಯಾವುದು, ಹೇಗೆ ಎಂದು ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋಚಾಟ್, ವಾಟ್ಸಾಪ್, ಮೆಸೇಂಜರ್ ಆಪ್‌ಗಳ ನಡುವಿನ 6 ವ್ಯತ್ಯಾಸಗಳು

ಲೀಕ್‌ ಕ್ಯಾಲ್ಕುಲೇಟರ್‌

ಲೀಕ್‌ ಕ್ಯಾಲ್ಕುಲೇಟರ್‌

ಲೀಕ್‌ ಕ್ಯಾಲ್ಕುಲೇಟರ್‌ ಹಲವು ಫೀಚರ್‌ಗಳುಳ್ಳ ಸ್ಮಾರ್ಟ್ ಡಿವೈಸ್‌ ಆಪ್‌ ಆಗಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್‌ ಡಿವೈಸ್‌ಗಳಿಗೆ ಲಭ್ಯವಿದೆ. ಈ ಆಪ್‌ ನಿಮ್ಮ ಮನೆ ಚಾವಣಿ, ಪೈಪ್‌, ಕಛೇರಿಗಳಲ್ಲಿ ಎಲ್ಲಿ ನೀರು ಲೀಕ್‌ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚುತ್ತದೆ.

'ಲೀಕ್‌ ಕ್ಯಾಲ್ಕುಲೇಟರ್‌' ಆಪ್‌ ನೀರು ಲೀಕ್‌ ಆಗುತ್ತಿರುವ ಸ್ಥಳ ಪತ್ತೆ ಹಚ್ಚುವ ಜೊತೆಗೆ, ಸಮಸ್ಯೆ ಬಗೆಹರಿಸಲು ಎಷ್ಟು ವೆಚ್ಚವಾಗುತ್ತದೆ ಎಂದು ಅಂದಾಜು ಮಾಡುತ್ತದೆ.

ಲೀಕ್‌ಸ್ಮಾರ್ಟ್‌

ಲೀಕ್‌ಸ್ಮಾರ್ಟ್‌

ಲೀಕ್‌ಸ್ಮಾರ್ಟ್‌ ಆಪ್‌ನಿಂದ, ನೀರು ಲೀಕ್‌ ಆಗುವುದು ಆರಂಭವಾಗುವ ಮೊದಲೇ ಸಮಸ್ಯೆ ಬಗೆಹರಿಸಬಹುದು. ಆಪ್‌ ವಾಟರ್‌ ಲೀಕ್ ಆಗುವುದನ್ನು ಸೂಚನೆಯಿಂದಲೇ ಪತ್ತೆಹಚ್ಚಿ ಲೀಕ್‌ ಆಗದಂತೆ ತಡೆಯಲು ಪರಿಹಾರ ನೀಡುತ್ತದೆ.

ಲೀಕ್‌ಸ್ಮಾರ್ಟ್‌ ಆಪ್‌ ಆಡಿಯೋ ಮತ್ತು ಪ್ರದರ್ಶನ ಎರಡು ಕ್ರಿಯೆಗಳಿಂದಲೂ ಸಹ ನಿಮ್ಮನ್ನು ಅಲರ್ಟ್‌ ಮಾಡುತ್ತದೆ. ಕೇವಲ 5 ಸೆಕೆಂಡ್‌ಗಳ ಒಳಗಾಗಿ ಆಪ್‌ ಫೋನ್‌ಗೆ ನೋಟಿಫಿಕೇಶನ್‌ ಅನ್ನು ಕಳುಹಿಸುತ್ತದೆ. ಆಪ್ ಐಓಎಸ್‌ ಮತ್ತು ಆಂಡ್ರಾಯ್ಡ್ ಎರಡರಲ್ಲೂ ವರ್ಕ್‌ ಆಗುತ್ತದೆ.

 ಲೀಕ್‌ ಡಿಟೆಕ್ಟರ್‌

ಲೀಕ್‌ ಡಿಟೆಕ್ಟರ್‌

ಲೀಕ್ ಡಿಟೆಕ್ಟರ್ ಆಪ್‌ ಬಳಕೆದಾರರು ಮನೆಯಲ್ಲಿ ಕಂಪ್ರೆಸ್ ಗಾಳಿ ಲೀಕ್‌ ಆಗುವುದನ್ನು ಪತ್ತೆಹಚ್ಚಲು ಸಹಾಯಕವಾಗಿವೆ. ಆಪ್‌ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಬಿಲ್ಟ್‌ ಆದ ಮೈಕ್ರೋಫೋನ್‌ ಅನ್‌ ಬಳಸಿ, 20 kHz ನ್ಯಾರೋ ಬ್ಯಾಂಡ್ ಸೌಂಡ್‌ ಅನ್ನು ಅಧಿಕ ಪ್ರಿಕ್ವೆನ್ಸಿಯಲ್ಲಿ ಆಲಿಸುತ್ತದೆ. ನಂತರ ಕಡಿಮೆ ಫ್ರಿಕ್ವೆನ್ಸಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆ.

ಸ್ಮಾರ್ಟ್‌ ಡಿವೈಸ್‌ನ ಮೈಕ್ರೋಫೋನ್‌ ಅನ್ನು ಸಂದೇಹ ಪಟ್ಟ ಲೀಕ್‌ ಪ್ರದೇಶದ ಸ್ವಲ್ಪ ದೂರದಲ್ಲಿ ಇಟ್ಟರೆ, ಹಿಸ್‌ ಸೌಂಡ್ ಕೇಳುತ್ತದೆ ಮತ್ತು ಕೆಂಪು/ ಹಸಿರು ಇಂಡಿಕೇಟರ್‌ ಲೀಕ್‌ ಅನ್ನು ಸೂಚಿಸುತ್ತದೆ. ಇದು ನೀರು ಲೀಕ್‌ ಆಗುವುದನ್ನು ಸಹ ಸುಲಭವಾಗಿ ಪತ್ತೆ ಹಚ್ಚುತ್ತದೆ.

ಐಕ್ವೇರಿಯಸ್

ಐಕ್ವೇರಿಯಸ್

'ಐಕ್ವೇರಿಯಸ್' ಪಿನ್‌ಪಾಯಿಂಟಿಂಗ್ ವಾಟರ್‌ ಲೀಕ್‌ ಅನ್ನು ಮೊಬೈಲ್‌ ಲೀಕ್ ಡಿಟೆಕ್ಷನ್ ಪರಿಹಾರಕ್ಕೆ ಇರುವ ಆಪ್‌ ಅಗಿದ್ದು, ಆಂಡ್ರಾಯ್ಡ್ ಫೋನ್ ಬಳಕೆದಾರರು ಬಳಸುತ್ತಾರೆ.
ಐಕ್ವೇರಿಯಸ್ ಆಪ್‌ ನೀರು ಲೀಕ್‌ ಆಗುವುದನ್ನು ಸಹ ಪತ್ತೆಹಚ್ಚುತ್ತದೆ.

ಅರ್ಲಿ ವಾಟರ್‌ ಲೀಕ್ ಅಲರ್ಟ್‌

ಅರ್ಲಿ ವಾಟರ್‌ ಲೀಕ್ ಅಲರ್ಟ್‌

'ಅರ್ಲಿ ವಾಟರ್‌ ಲೀಕ್ ಅಲರ್ಟ್‌' ಆಪ್‌ ಬಳಕೆದಾರರಿಗೆ ದೀರ್ಘಕಾಲದ ಪರಿಹಾರವನ್ನು ಸಮಸ್ಯೆಗೆ ನೀಡುತ್ತದೆ. ನೀರು ಲೀಕ್‌ನಿಂದ ಅಗುವ ಸಮಸ್ಯೆಗೆ ಸಲಹೆಗಳನ್ನು ನೀಡುತ್ತದೆ.

ಆಪ್‌ ಬಳಕೆದಾರರು ಹೆಚ್ಚು ವೆಚ್ಚಮಾಡಿ ಮತ್ತು ಒತ್ತಡದಿಂದ ರಿಪೇರ್ ಮಾಡಿಸುವುದನ್ನು ತಡೆಯುತ್ತದೆ. ವಾಟರ್‌ ಸೆನ್ಸಾರ್‌ ಕನೆಕ್ಟರ್‌ನಿಂದ ಎಲ್ಲಾ ಲೀಕ್‌ ಸೂಚನೆಗಳನ್ನು ಪಡೆದು ಅಲರ್ಟ್ ಮಾಡುತ್ತದೆ.

Best Mobiles in India

English summary
You Can Check Water Leaked in Ceiling with These 5 Apps. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X