Home
Apps

ರಿಲಾಯನ್ಸ್ ಜಿಯೋಚಾಟ್, ವಾಟ್ಸಾಪ್, ಮೆಸೇಂಜರ್ ಆಪ್‌ಗಳ ನಡುವಿನ 6 ವ್ಯತ್ಯಾಸಗಳು

By Suneel

ವಿದೇಶಿ ಮೆಸೇಜಿಂಗ್‌ ಆಪ್‌ಗಳು ಇಂದು ದೀರ್ಘವಾಗಿ ಭಾರತದ ಮಾರುಕಟ್ಟೆಗಳನ್ನು ಆಳುತ್ತಿವೆ. ಆದರೆ, 'Hike' ಸಾಮಾಜಿಕ ಮೆಸೇಜಿಂಗ್ ಆಪ್‌ ಆರಂಭದಿಂದ ಇಂದು ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದೆ.

ಇತ್ತೀಚೆಗೆ 'ಮುಕೇಶ್‌ ಅಂಬಾನಿ' ಮಾಲೀಕತ್ವದ 'ರಿಲಾಯನ್ಸ್ ಜಿಯೋ ಇನ್ಫೋಕಾಮ್' ಮೆಸೇಜಿಂಗ್ ಆಪ್ಲಿಕೇಶನ್‌ ಅನ್ನು ಸಾರ್ವಜನಿಕವಾಗಿ ಲಾಂಚ್‌ ಮಾಡಿದ್ದು, ಅದರ ಹೆಸರು 'ಜಿಯೋಚಾಟ್'(JioChat) ಎಂದು. ಈ ಆಪ್‌ ಪ್ರಸ್ತುತದಲ್ಲಿ 'ಗೂಗಲ್‌ ಪ್ಲೇ ಸ್ಟೋರ್‌'ನಲ್ಲಿ ಮತ್ತು ಐಟ್ಯೂನ್‌ ಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಲಭ್ಯವಿದೆ.

ಅಂದಹಾಗೆ 'ಜಿಯೋಚಾಟ್'(JioChat)' ಈಗಾಗಲೇ ಇರುವ ಪ್ರಾಥಮಿಕ ಮೆಸೇಜಿಂಗ್ ಆಪ್‌ಗಳಾದ ವಾಟ್ಸಾಪ್, ಫೇಸ್‌ಬುಕ್‌, ಮೆಸೇಂಜರ್ ಮತ್ತು ಹೈಕ್ ರೀತಿಯ ಹೋಲಿಕೆ ಪಡೆದಿದೆ. ಆದರೆ ಎಲ್ಲರ ಮುಂದೆ ಇರುವ ಬಹುದೊಡ್ಡ ಪ್ರಶ್ನೆ ಎಂದರೆ ಜಿಯೋಚಾಟ್ ಆಪ್ 700 ದಶಲಕ್ಷ ಆಕ್ಟಿವ್‌ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನಂತ ಮೆಸೇಜ್‌ಗಳ ವಿರುದ್ಧ ಹೇಗೆ ಸ್ಪರ್ಧೆ ಎದುರಿಸಲಿದೆ ಎಂಬುದು.

ಜಿಯೋದ 7 ಟ್ಯಾರಿಪ್ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್ ಕರೆ ಮತ್ತು ರೋಮಿಂಗ್ ಆಫರ್!

ಇಂದಿನ ಲೇಖನದಲ್ಲಿ ಜಿಯೋಚಾಟ್‌, ವಾಟ್ಸಾಪ್‌, ಮೆಸೇಂಜರ್‌ಗಳ ನಡುವಿನ ವ್ಯತ್ಯಾಸ ಏನು, ಹಾಗೂ ಜಿಯೋಚಾಟ್ ಇತರೆ ಆಪ್‌ಗಳಿಗಿಂತ ಹೇಗೆ ವಿಭಿನ್ನವಾಗಿದೆ ಎಂದು ತಿಳಿಸುತ್ತಿದ್ದೇವೆ. ಈ ಬಗ್ಗೆ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಈ 8 ಹಂತಗಳನ್ನು ಪಾಲಿಸಿ ಯಾವುದೇ ಆಂಡ್ರಾಯ್ಡ್‌ನಲ್ಲಿ ಜಿಯೋ 4G ಸಿಮ್ ಬಳಸಿ

ಸಾಮಾನ್ಯ ಮೆಸೇಜಿಂಗ್

ಸಾಮಾನ್ಯ ಮೆಸೇಜಿಂಗ್

ಜಿಯೋಚಾಟ್ ಆಪ್‌ ಬಳಸಲು ಸರಳವಾಗಿ ನಿಮ್ಮ ಮೊಬೈಲ್ ನಂಬರ್ ಬಳಸಿ ಸೈನಪ್ ಆಗಿ ಮೆಸೇಜ್‌ ಸೆಂಡ್‌ ಮಾಡಬಹುದು. ಮೂರು ಸೇವೆಗಳು ಸಹ ಲೈಫ್‌ಟೈಮ್‌ ಉಚಿತ. ನೀವು ಆಫ್‌ಲೈನ್‌ನಲ್ಲಿದ್ದಾಗಲು ಸಹ ಜಿಯೋಚಾಟ್‌ನಲ್ಲಿ ಮೆಸೇಜ್‌ ಅನ್ನು ಸ್ನೇಹಿತರಿಗೆ ಸೆಂಡ್ ಮಾಡಬಹುದು. ಜಿಯೋಚಾಟ್‌ ಇಂಟರ್ನೆಟ್‌ ಸಂಪರ್ಕ ಪಡೆದಾಗ ಸ್ವಯಂಕೃತವಾಗಿ ಮೆಸೇಜ್‌ ಡಿಲಿವರಿ ಮಾಡುತ್ತದೆ.

ಗ್ರೂಪ್ ಚಾಟ್

ಗ್ರೂಪ್ ಚಾಟ್

ಜಿಯೋಚಾಟ್ ಆಪ್‌ನ ಪ್ರಮುಖ ವಿಶೇಷತೆ ಎಂದರೆ ನೀವು 500 ಸದಸ್ಯರನ್ನು ಒಳಗೊಂಡ ಒಂದೇ ಗ್ರೂಪ್‌ ಅನ್ನು ಕ್ರಿಯೇಟ್ ಮಾಡಬಹುದು. ಆದರೆ ವಾಟ್ಸಾಪ್‌ನಲ್ಲಿ ನೀವು ಕೇವಲ 256 ಸದಸ್ಯರನ್ನು ಒಳಗೊಂಡ ಗ್ರೂಪ್‌ ಅನ್ನು ಮಾತ್ರ ಕ್ರಿಯೇಟ್‌ ಮಾಡಬಹುದಾಗಿದೆ. ಮೆಸೇಂಜರ್‌ನಲ್ಲಿ ಒಮ್ಮೆಯೇ ಕೇವಲ 150 ಜನರಿಗೆ ಮಾತ್ರ ಮೆಸೇಜ್‌ ಸೆಂಡ್‌ ಮಾಡಬಹುದಾಗಿದೆ. ಇವುಗಳಿಗೆ ಹೋಲಿಸಿದಾಗೆ ಜಿಯೋಚಾಟ್‌ ಗ್ರೇಟ್ ಆಗಿದೆ.

ಇಮೇಜ್‌ ಮತ್ತು ಫೈಲ್‌ಗಳು

ಇಮೇಜ್‌ ಮತ್ತು ಫೈಲ್‌ಗಳು

ಪಿಡಿಎಫ್, ಎಂಪಿ3, ಇಮೇಜ್ ಮತ್ತು ಫೈಲ್‌ಗಳನ್ನು ಮೂರು ಆಪ್‌ಗಳಲ್ಲು ಇತರರಿಗೆ ಕಳುಹಿಸಬಹುದು. ಅಲ್ಲದೇ ಜಿಯೋಚಾಟ್‌ನಿಂದ ಕಳುಹಿಸದ ಇಮೇಜ್‌ ಅನ್ನು ಡೂಡಲ್ ಮಾಡಬಹುದು. ಆದರೆ ವಾಟ್ಸಾಪ್‌ನಲ್ಲಿ ಈ ಫೀಚರ್‌ ಇಲ್ಲ. ಮೆಸೇಂಜರ್‌ ಸಹ ಈ ಫೀಚರ್‌ ಸಪೋರ್ಟ್ ಮಾಡುತ್ತದೆ.

ವಾಯ್ಸ್ ಕರೆ

ವಾಯ್ಸ್ ಕರೆ

ಮೂರು ಆಪ್‌ಗಳು ಸಹ ವಾಯ್ಸ್ ಕರೆ ಅನ್ನು ಸಪೋರ್ಟ್‌ ಮಾಡುತ್ತವೆ. ನಿಮ್ಮ ಸ್ನೇಹಿತರಿಗೆ ಯಾವುದೇ ಸಮಯದಲ್ಲಿ ಉಚಿತವಾಗಿ ಕರೆ ಮಾಡಬಹುದು.

ಗ್ರೂಪ್‌ ವೀಡಿಯೊ ಕರೆ

ಗ್ರೂಪ್‌ ವೀಡಿಯೊ ಕರೆ

ಜಿಯೋಚಾಟ್ ವೀಡಿಯೊ ಕರೆ ಸಪೋರ್ಟ್‌ ಮಾಡುತ್ತದೆ. ಜಿಯೋಚಾಟ್ ಆಪ್‌ನಲ್ಲಿ ವೀಡಿಯೊ ಕರೆ ವಿಶೇಷವೆಂದರೆ ಗ್ರೂಪ್‌ ವೀಡಿಯೊ ಕರೆ ಮಾಡಬಹುದಾಗಿದೆ. ಮೆಸೇಂಜರ್‌ ಕೇವಲ ಒನ್-ಟು-ಒನ್ ವೀಡಿಯೊ ಕರೆ ಮಾಡಬಹುದು. ವಾಟ್ಸಾಪ್ ವೀಡಿಯೊ ಕರೆ ಸಪೋರ್ಟ್ ಮಾಡುವುದಿಲ್ಲ.

ಚಾನೆಲ್‌ಗಳ ಹಿಂಬಾಲಿಸುವಿಕೆ

ಚಾನೆಲ್‌ಗಳ ಹಿಂಬಾಲಿಸುವಿಕೆ

ಜಿಯೋಚಾಟ್ ಆಪ್‌ನಲ್ಲಿ ಪ್ರಖ್ಯಾತ ಬ್ರ್ಯಾಂಡ್‌ಗಳು ಮತ್ತು ಕಂಪನಿಗಳನ್ನು ಚಾನೆಲ್‌ ಮೂಲಕ ಹಿಂಬಾಲಿಸಬಹುದು. ಆದರೆ ಈ ಫೀಚರ್‌ ವಾಟ್ಸಾಪ್‌ ಮತ್ತು ಮೆಸೇಂಜರ್‌ಗಳಲ್ಲಿ ಇಲ್ಲ.

Best Mobiles in India

English summary
6 Key Differences Between Reliance JioChat, WhatsApp and Facebook Messenger. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+