ಮೊಬೈಲ್ ಮೂಲಕ ನಿಮ್ಮ ಚರ್ಮದ ತೊಂದರೆ ಪತ್ತೆ ಮಾಡಬಹುದು, ಬಳಕೆ ಹೇಗೆ?
ಟೆಕ್ ದೈತ್ಯ ಗೂಗಲ್ ಆಗಾಗ್ಗೆ ತನ್ನ ಸೇವೆಗಳನ್ನು ನವೀಕರಣ ಮಾಡುವ ಮೂಲಕ ಬಳಕೆದಾರರು ಅಚ್ಚರಿಗೆ ಒಳಗಾಗುವ ಸುದ್ದಿ ನೀಡುತ್ತಿರುತ್ತದೆ. ಅದರಂತೆ ಇನ್ಮುಂದೆ ಜನರು ತಮ್ಮ ಚರ್ಮದ ಬಗ್ಗೆ ತಾವೇ ವೈದ್ಯರ ಹಾಗೆ ಏನೆಲ್ಲಾ ಸಮಸ್ಯೆ ಆಗಿದೆ?, ಇದಕ್ಕೆ ಪರಿಹಾರ ಏನು ಎಂದು ಪೂರ್ವಭಾವಿಯಾಗಿ ತಿಳಿದುಕೊಳ್ಳಬಹುದು.
ಹೌದು, ಗೂಗಲ್ ಲೆನ್ಸ್(Google Lens) ಚರ್ಮದ ಪರಿಸ್ಥಿತಿಗಳನ್ನು ಪತ್ತೆ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅಂದರೆ ಈ ಗೂಗಲ್ ಲೆನ್ಸ್‌ಗೆ ಚಿತ್ರವನ್ನು ಅಪ್‌ಲೋಡ್ ಮಾಡಿದರೆ ನಿಮ್ಮ ಚರ್ಮಕ್ಕೆ ಆಗಿರುವ ಸಮಸ್ಯೆ ಏನು ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ. ಚರ್ಮ ಮಾತ್ರವಲ್ಲದೆ ಇತರೆ ಅಂಗಗಳಲ್ಲಿನ ಸಮಸ್ಯೆಗಳಿಗೂ ಈ ಮೂಲಕ ಪರಿಹಾರ ಪಡೆದುಕೊಳ್ಳಬಹುದು. ಹಾಗಿದ್ರೆ ಏನಿದು ಗೂಗಲ್‌ನ ಹೊಸ ಫೀಚರ್ಸ್, ಇದು ಯಾರಿಗೆಲ್ಲಾ ಲಾಭ ಎಂಬ ಸಂಪೂರ್ಣ ವಿವರಕ್ಕೆ ಈ ಲೇಖನ ಓದಿರಿ.

ಗೂಗಲ್ ಲೆನ್ಸ್‌ನಲ್ಲಿ ಹೊಸ ಫೀಚರ್ಸ್: ಗೂಗಲ್ ಲೆನ್ಸ್, ಕಂಪ್ಯೂಟರ್ ದೃಷ್ಟಿ-ಚಾಲಿತ ಆಪ್ ಆಗಿದ್ದು, ಇದೀಗ ಹೊಸ ಫೀಚರ್ಸ್ ಅನ್ನು ಪಡೆಯುವ ಮೂಲಕ ಜನರನ್ನು ನಿಬ್ಬೆರಗಾಗಿಸಿದೆ. ಅಂದರೆ ಇದು ಕೇವಲ ಒಂದು ಫೋಟೋದೊಂದಿಗೆ ಚರ್ಮದ ಪರಿಸ್ಥಿತಿಗಳನ್ನು ಅವಲೋಕನ ಮಾಡುತ್ತದೆ. ಈ ಮೂಲಕ ಜನರನ್ನು ಸರಿಯಾದ ಮಾರ್ಗದೆಡೆಗೆ ಕರೆದೊಯ್ಯಲು ಮಾರ್ಗದರ್ಶನ ಮಾಡುವುದು ಇದರ ಉದ್ದೇಶವಾಗಿದೆಂತೆ. ಅಂದರೆ ಜನರು ಬೇಗನೆ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬಹುದು.
ಇನ್ನು ಈ ಗೂಗಲ್ ಲೆನ್ಸ್ ಬಳಕೆ ಮಾಡಿಕೊಂಡು ಚರ್ಮದ ಚಿತ್ರವನ್ನು ಅಪ್‌ಲೋಡ್ ಮಾಡುವುದರಿಂದ ದೃಶ್ಯ ಹೊಂದಾಣಿಕೆಗಳಿಗಾಗಿ ಹುಡುಕಾಟ ಆರಂಭ ಮಾಡುತ್ತದೆ. ಅದರಲ್ಲೂ ಇದು ಆಡ್ಸ ಮೋಲ್ ಅಥವಾ ರಾಶ್ ಸಂಬಂಧಿ ಸಮಸ್ಯೆಗಳನ್ನು ಬೇಗ ಪತ್ತೆ ಮಾಡಿ ಈ ಮೂಲಕ ತಕ್ಷಣ ವೈದ್ಯಕೀಯ ನೆರವು ಪಡೆಯುವಂತೆ ಸೂಚಿಸುತ್ತದೆ. ಹಾಗೆಯೇ ಈ ಲೆನ್ಸ್ ಬಳಕೆ ಮಾಡಿಕೊಂಡು ಜನರು ತುಟಿಯ ಮೇಲಿನ ಉಬ್ಬು, ಉಗುರಿನ ಮೇಲಿನ ಗೆರೆ ಅಥವಾ ನೆತ್ತಿಯಿಂದ ಉದುರುವ ಕೂದಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಲೆನ್ಸ್ ಬಳಕೆ ಮಾಡಿಕೊಂಡು ಆ ಮೂಲಕ ನಿಮ್ಮ ಚರ್ಮ ಎಲ್ಲಿ ಸಮಸ್ಯೆಗೆ ಒಳಗಾಗಿದೆ ಎಂಬುದನ್ನು ಕಂಡುಕೊಂಡು ಆ ಚಿತ್ರ ತೆಗೆದುಕೊಳ್ಳಿ. ಬಳಿಕ ಲೆನ್ಸ್ ಮೂಲಕ ಫೋಟೋವನ್ನು ಅಪ್‌ಲೋಡ್ ಮಾಡಿ ಇದಾದ ನಂತರದಲ್ಲಿ ಹೊಂದಾಣಿಕೆ ಕಾರ್ಯ ನಡೆಯಲಿದ್ದು, ನಿಮ್ಮ ತುಟಿಯ ಮೇಲಿನ ಉಬ್ಬು, ನಿಮ್ಮ ಉಗುರುಗಳ ಮೇಲಿನ ಗೆರೆ ಅಥವಾ ನಿಮ್ಮ ತಲೆಯ ಮೇಲೆ ಕೂದಲು ಉದುರುವಿಕೆಯಂತಹ ಸಮಸ್ಯೆಗಳ ಬಗ್ಗೆ ಇದು ಮಾಹಿತಿ ನೀಡುತ್ತದೆ ಎಂದು ಗೂಗಲ್‌ನ ಉತ್ಪನ್ನ ನಿರ್ವಹಣೆಯ ಹಿರಿಯ ನಿರ್ದೇಶಕ ಲೌ ವಾಂಗ್ ಮಾಹಿತಿ ನೀಡಿದ್ದಾರೆ.
ಈ ಫಲಿತಾಂಶಗಳು ಮಾಹಿತಿ ಮಾತ್ರವೇ ಹೊರತು ರೋಗ ನಿರ್ಣಯವಲ್ಲ ಎಂದು ಗೂಗಲ್ ಈ ವೇಳೆ ಪ್ರಮುಖ ಮಾಹಿತಿಯನ್ನು ನೀಡಿದ್ದು, ಈ ಚರ್ಮದಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ ಹೆಚ್ಚಿನ ಪರಿಹಾರ ಸಲಹೆಗಾಗಿ ನಿಮ್ಮ ವೈದ್ಯಕೀಯ ಪ್ರಾಧಿಕಾರವನ್ನು ಸಂಪರ್ಕಿಸಬೇಕು ಎಂದು ಉಲ್ಲೇಖ ಮಾಡಿದೆ.
ಇನ್ನು ಈ ಗೂಗಲ್ ಲೆನ್ಸ್ ಬಳಕೆ ಮಾಡಿಕೊಂಡು ಕೇವಲ ಚರ್ಮದ ಬಗ್ಗೆ ಮಾತ್ರ ತಿಳಿದುಕೊಳ್ಳುವುದಲ್ಲದೆ ನಿಮ್ಮ ಸುತ್ತಲೂ ನೀವು ನೋಡುವ ಯಾವುದೇ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. ಅಂದರೆ ರಸ್ತೆ ಚಿಹ್ನೆಗಳನ್ನು ಅನುವಾದಿಸಬಹುದು ಮತ್ತು ಗೊತ್ತಿಲ್ಲದ ಯಾವುದಾದರೂ ವಸ್ತುವಿನ ಫೋಟೋ ತೆಗೆದುಕೊಳ್ಳುವ ಮೂಲಕ ಅದರ ಬಗ್ಗೆ ತಿಳಿದುಕೊಳ್ಳಬಹುದು. ಈ ಕಾರಣಕ್ಕಾಗಿಯೇ ಗೂಗಲ್ ಲೆನ್ಸ್ ಅನ್ನು ಇಂದು ಎಲ್ಲಾ ಕಡೆ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಯಾವುದೇ ಆಬ್ಜೆಕ್ಟ್ ಅನ್ನು ಗುರುತಿಸಿದ ನಂತರ ಗೂಗಲ್ ಲೆನ್ಸ್ ಅದರ ಬಗ್ಗೆ ಸಂಬಂಧಿತ ಮಾಹಿತಿಯನ್ನು ಅಂತರ್ಜಾಲದಲ್ಲಿನ ವಿವಿಧ ಮೂಲಗಳಿಂದ ಪಡೆದುಕೊಳ್ಳುತ್ತದೆ. ಇದು ಉತ್ಪನ್ನ ಮಾಹಿತಿ, ವಿಮರ್ಶೆಗಳು, ಬೆಲೆಗಳು ಅಥವಾ ಅಂತಹುದೇ ಚಿತ್ರಗಳಂತಹ ವಿವರಗಳನ್ನು ನೀಡುತ್ತದೆ. ಈ ಆಬ್ಜೆಕ್ಟ್ ಗುರುತಿಸುವಿಕೆಗೆ ಹೆಚ್ಚುವರಿಯಾಗಿ ಗೂಗಲ್ ಲೆನ್ಸ್ ಚಿತ್ರಗಳಲ್ಲಿನ ಪಠ್ಯವನ್ನು ಹೊರತೆಗೆಯಬಹುದು.


Click it and Unblock the Notifications








