Home
Apps

ನಿದ್ರೆ ಸಮಸ್ಯೆಯೇ? ಈ ಆಪ್‌ಗಳನ್ನು ಒಮ್ಮೆ ಬಳಸಿ ನೋಡಿ, ಗೊರಕೆಯನ್ನೇ ಹೊಡಿಯುತ್ತೀರಾ!

ನಿದ್ರೆ ಒಂದು ಮೂಲಭೂತ ಶಾರೀರಿಕ ಅಗತ್ಯವಾಗಿದ್ದು ಅದು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಪ್ರಮುಖವಾಗಿದೆ. ಆದರೆ, ಇಂದಿನ ಒತ್ತಡದ ಜೀವನ ಶೈಲಿ ಹಾಗೂ ಸ್ಮಾರ್ಟ್‌ಫೋನ್‌ನ ಅನಗತ್ಯ ಬಳಕೆಯಿಂದಾಗಿ ಸರಿಯಾಗಿ ನಿದ್ದೆ ಮಾಡಲು ಹಲವರಿಗೆ ಸಾಧ್ಯ ಆಗುತ್ತಿಲ್ಲ. ಅದಾಗ್ಯೂ ನೀವು ಈ ಕೆಲವು ಆಪ್‌ಗಳ ಸಹಾಯದಿಂದ ಉತ್ತಮ ನಿದ್ದೆ ಮಾಡಬಹುದು.

ಹೌದು, ನಿದ್ರೆ ಬಾರದವರು ಮಾತ್ರೆ ತೆಗೆದುಕೊಂಡು ಬಲವಂತವಾಗಿ ನಿದ್ದೆ ಮಾಡಲು ಮುಂದಾಗುತ್ತಾರೆ. ಇನ್ನೂ ಕೆಲವರು ಯಾವುದ್ಯಾವುದೋ ಸಮಯದಲ್ಲಿ ನಿದ್ದೆ ಮಾಡುವ ಮೂಲಕ ಬೆಳಗ್ಗೆ ಯಾವುದು, ರಾತ್ರಿ ಯಾವುದು ಎಂಬುದನ್ನೇ ಮರೆತಿರುತ್ತಾರೆ. ಆದರೆ, ತಂತ್ರಜ್ಞಾನ ನಮಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲಿದ್ದು, ಅದರಂತೆ ಕೆಲವು ಆಪ್‌ಗಳು ನಿಮಗೆ ಉತ್ತಮ ನಿದ್ದೆ ಮಾಡುವಂತೆ ಪ್ರೇರೇಪಿಸುತ್ತವೆ. ಹಾಗಿದ್ರೆ, ಯಾವುವು ಆ ಆಪ್‌ಗಳು?,ಅವು ಹೇಗೆ ಕೆಲಸ ಮಾಡಲಿವೆ? ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ನಿದ್ರೆ ಸಮಸ್ಯೆಯೇ?ಈ ಆಪ್‌ಗಳನ್ನು ಒಮ್ಮೆ ಬಳಸಿ ನೋಡಿ, ಗೊರಕೆಯನ್ನೇ ಹೊಡಿಯುತ್ತೀರಾ!

ಈ ಆಪ್‌ಗಳು ನಿಮಗೆ ಎಲ್ಲಾ ರೀತಿಯಲ್ಲೂ ಸಹಕಾರಿ: ಇಂದು ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾದಂತೆ ಅದಕ್ಕೆ ಅಗತ್ಯವಾದ ಆಪ್‌ಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ನಡುವೆ ನಿದ್ದೆಗೆ ಸಂಬಂಧಿಸಿದಂತೆ ಕೆಲವು ಆಪ್‌ಗಳು ಪ್ಲೇಸ್ಟೋರ್‌ಗಳಲ್ಲಿ ಲಭ್ಯ ಇದ್ದು, ಇವುಗಳನ್ನು ಬಳಕೆ ಮಾಡುವ ಮೂಲಕ ಆರಾಮದಾಯಕ ನಿದ್ದೆ ಮಾಡಬಹುದಾಗಿದೆ. ಈ ಆಪ್‌ಗಳನ್ನು ಐಓಎಸ್‌ ಹಾಗೂ ಆಂಡ್ರಾಯ್ಡ್‌ ಎರಡರಲ್ಲೂ ಬಳಕೆ ಮಾಡಬಹುದು.

ಸ್ಲೀಪ್‌ ಸ್ಕೋರ್‌: ಸ್ಲೀಪ್‌ ಸ್ಕೋರ್‌ ಆಪ್‌ (SleepScore) ನಿಮ್ಮ ನಿದ್ರೆಯನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡುತ್ತದೆ. ಜೊತೆಗೆ ಸ್ಮಾರ್ಟ್‌ಫೋನ್‌ನ ಮೈಕ್ರೋಫೋನ್ ಮತ್ತು ಸ್ಪೀಕರ್ ಅನ್ನು ಬಳಕೆ ಮಾಡಿಕೊಳ್ಳುವ ಈ ಆಪ್ ಸೋನಾರ್ ತಂತ್ರಜ್ಞಾನದ ಮೂಲಕ ನಿಮ್ಮ ಉಸಿರಾಟದ ದರ ಮತ್ತು ದೇಹದ ಚಲನೆಯನ್ನು ಅಳೆಯುತ್ತದೆ. ಈ ಮೂಲಕ ನೀವು ಯಾವ ರೀತಿ ನಿದ್ದೆ ಮಾಡಬೇಕು, ಎಷ್ಟು ನಿದ್ದೆ ಮಾಡಬೇಕು ಎಂಬ ಅಗತ್ಯ ಮಾಹಿತಿಯನ್ನು ನೀಡುತ್ತದೆ.

Calm ಆಪ್‌: ಈ Calm ಆಪ್ ಮೂಲಕ ನೀವು ನಿದ್ದೆ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು. ಹಾಗೆಯೇ ಬಳಕೆದಾರ ಇಂಟರ್ಫೇಸ್ ತುಂಬಾ ಸುಲಭವಾಗಿದ್ದು, ಇದರಲ್ಲಿ ನಿಮ್ಮನ್ನು ಧ್ಯಾನದ ಲೋಕಕ್ಕೆ ಕರೆದೊಯ್ಯಲಾಗುತ್ತದೆ. ಅಂದರೆ ಧ್ಯಾನ ಮಾಡಲು ಮತ್ತು ಶಾಂತವಾಗಿರಲು ಈ ಆಪ್‌ ಸಹಾಯ ಮಾಡಲಿದೆ. ಇದರೊಂದಿಗೆ ಸಂಗೀತದ ಜೊತೆಗೆ ಉಸಿರಾಟದ ವ್ಯಾಯಾಮವನ್ನೂ ಸಹ ಮಾಡಿಸಲಿದ್ದು, ಇದನ್ನು ನೀವು ಅನುಸರಿಸಿದ್ದೇ ಆದರೆ ಉತ್ತಮ ನಿದ್ದೆ ಮಾಡಬಹುದು.

ಪ್ರೈಮ್‌ನ್ಯಾಪ್ ಸ್ಲೀಪ್ ಟ್ರ್ಯಾಕರ್: ಈ ಆಪ್‌ ಟ್ರ್ಯಾಕಿಂಗ್ ಸಾಮರ್ಥ್ಯಗಳೊಂದಿಗೆ ಉತ್ತಮ ನಿದ್ದೆಗೆ ಅವಕಾಶ ಮಾಡಿಕೊಡುತ್ತದೆ. ಈ ಅಪ್ಲಿಕೇಶನ್ ಸೆನ್ಸರ್‌ ಸಹಾಯದಿಂದ ನಿದ್ದೆಯ ಟ್ರ್ಯಾಕಿಂಗ್ ಮಾಡುವುದರ ಜೊತೆಗೆ ನಿಮ್ಮ ಇತರೆ ಚಟುವಟಿಕೆಯ ಮೇಲೆ ಕೆಂದ್ರೀಕರಿಸುತ್ತದೆ. ಇದರಿಂದಾಗಿ ನಿಮ್ಮ ಮಲಗುವ ಮಾದರಿಗಳು ನಿದ್ದೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೀವು ಕಂಡುಕೊಳ್ಳಬಹುದು.

ನಿದ್ರೆ ಸಮಸ್ಯೆಯೇ?ಈ ಆಪ್‌ಗಳನ್ನು ಒಮ್ಮೆ ಬಳಸಿ ನೋಡಿ, ಗೊರಕೆಯನ್ನೇ ಹೊಡಿಯುತ್ತೀರಾ!

ಹೆಡ್‌ಸ್ಪೇಸ್: ಈ ಹೆಡ್‌ಸ್ಪೇಸ್ (HeadSpace) ಆಪ್‌ ಬಳಕೆದಾರರ ಸಾವಧಾನತೆ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಸಹಾಯ ಮಾಡಲಿದೆ. ಅಂದರೆ ಇದು ನಿಮ್ಮ ಪ್ರತಿ ರಾತ್ರಿಯ ನಿದ್ರೆಯನ್ನು ಸುಧಾರಿಸಲು ಕೆಲಸ ಮಾಡಲಿದ್ದು, ಹೇಗೆಲ್ಲಾ ಧ್ಯಾನ ಮಾಡಬೇಕು ಎಂಬುದನ್ನು ತಜ್ಞರು ವಿವರಿಸುತ್ತಾರೆ. ಈ ಮೂಲಕ ನಿಮ್ಮ ದೈನಂದಿನ ಒತ್ತಡದಿಂದ ಮುಕ್ತಿ ಪಡೆದುಕೊಳ್ಳಬಹುದು. ಇದರಿಂದಾಗಿ ಉತ್ತಮವಾದ ನಿದ್ದೆ ತಂತಾನೆ ಬರುತ್ತದೆ.

ನಿದ್ದೆ ಬಾರದಿರಲು ಕಾರಣ ಏನು?: ನಿದ್ದೆ ಬಾರದಿರಲು ಸಾಮಾನ್ಯವಾಗಿ ಹಲವಾರು ಕಾರಣಗಳು ಇರಬಹುದು. ಅದರಲ್ಲೂ ಕೆಲವರಿಗೆ ವಿವಿಧ ಆರೋಗ್ಯ ಸಂಬಂಧಿ ಸಮಸ್ಯೆಗಳು ಇರಬಹುದು. ಆದರೆ ಬಹುತೇಕ ಮಂದಿ ಮಲಗುವಾಗ ಫೋನ್‌ ಅನ್ನು ಅನಗತ್ಯವಾಗಿ ಬಳಕೆ ಮಾಡುವುದರಿಂದ ನಿದ್ದೆಗೆ ಭಂಗ ತಂದುಕೊಳ್ಳುತ್ತಿದ್ದಾರೆ. ಅಂದರೆ ನಿದ್ದೆಗೂ ಫೋನ್‌ಗೂ ಸಂಬಂಧ ಇದ್ದು, ನೀವೀಗ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನೇ ಬಳಕೆ ಮಾಡಿಕೊಂಡು ಉತ್ತಮ ನಿದ್ದೆ ಮಾಡಬಹುದು.

Best Mobiles in India

English summary
Technology helps us in every way, so some apps can help you sleep better.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+