ಯೂಟ್ಯೂಬ್ ನಲ್ಲಿ ಜಾಸ್ತಿ ವಿಡಿಯೋ ನೋಡುತ್ತಿರಾ? ಹಾಗಿದ್ರೆ ಈ ಬಗ್ಗೆ ತಿಳಿಯಿರಿ..!
ಯೂಟ್ಯೂಬ್ ಬಳಕೆ ಕಳೆದ ಒಂದು ವರ್ಷದಿಂದ ಭಾರೀ ಪ್ರಮಾಣದಲ್ಲಿ ಏರುಗತಿಯನ್ನು ಸಾಧಿಸಿದೆ. ಇದೇ ಹಿನ್ನಲೆಯಲ್ಲಿ ಯೂಟ್ಯೂಬಿನಲ್ಲಿ ಬೇಕಾದ ಬೇಡವಾದ ವಿಡಿಯೋಗಳ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಹಣ ಮಾಡುವ ಉದ್ದೇಶದಿಂದಲೇ ಯೂಟ್ಯೂಬ್ ವಿಡಿಯೋಗಳನ್ನು ಮಾಡವವರ ಸಂಖ್ಯೆಯೂ ಹೆಚ್ಚಾಗಿದೆ. ಇದಲ್ಲದೇ ಅಶ್ಲೀಲ ಕಂಟೆಂಟ್ ಗಳು ಅಧಿಕವಾಗುತ್ತಿದೆ.

ಓದಿರಿ: ಆಂಡ್ರಾಯ್ಡ್‌ನಲ್ಲಿ ವಾಟ್ಸ್‌ಆಪ್ ಬಳಕೆ ಮಾಡುತ್ತಿರುವವರೇ ಇಲ್ಲಿ ನೋಡಿ ಒಮ್ಮೆ...!
ಈ ಹಿನ್ನಲೆಯಲ್ಲಿ ಮಕ್ಕಳು ಸಹ ಸ್ಮಾರ್ಟ್‌ಫೋನಿನಲ್ಲಿ ಯೂಟ್ಯೂಬ್ ನೋಡುವ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಮಕ್ಕಳು ಕೆಲವು ವಿಡಿಯೋಗಳನ್ನು ನೋಡಿ ಹಾದಿತಪ್ಪುವ ಸಾಧ್ಯತೆ ಇರುವುದರಿಂದಾಗಿ ಯೂಟ್ಯೂಬ್ ಹೊಸ ಸೇವೆಯನ್ನು ಪರಿಚಯಿಸಲು ಮುಂದಾಗಿದೆ. ಅದುವೇ ಯುಟ್ಯೂಬ್ ಕಿಡ್ಸ್.

ಯೂಟ್ಯೂಬ್ ಕಿಡ್ಸ್:
ಈಗಾಗಲೇ ಜಿಯೋ ಸಿನಿಮಾದಲ್ಲಿ ಕಿಡ್ಸ್ ಎನ್ನುವ ಹೊಸ ಆಯ್ಕೆಯನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಯೂಟ್ಯೂಬ್ ಕಿಡ್ಸ್ ಸಹ ಕೇವಲ ಮಕ್ಕಳ ಮನರಂಜನೆಗೆ ಮತ್ತು ಜ್ಞಾನಾರ್ಜನೆಗೆ ಬೇಕಾದ ವಿಡಿಯೋ ಗಳನ್ನು ನೋಡುವ ಅವಕಾಶವನ್ನು ಮಾತ್ರವೇ ಮಾಡಿಕೊಡಲಿದೆ.

ಪೋಷಕರಿಗೆ ನಿಯಂತ್ರಣ:
ಈ ಯೂಟ್ಯೂಬ್ ಕಿಡ್ಸ್ ಆಪ್ ನಲ್ಲಿ ತಂದೆ-ತಾಯಿಗಳು ಮತ್ತ ಮಕ್ಕಳು ಯಾವುದನ್ನು ನೋಡಬೇಕು, ಬಿಡಬೇಕು ಎಂಬುದರ ಮೇಲೆ ನಿಯಂತ್ರಣವನ್ನು ಹೊಂದುವಂತಹ ಅವಕಾಶವನ್ನು ಮಾಡಿಕೊಡಲಾಗಿದೆ. ವಿಡಿಯೋಗಳನ್ನು ಬ್ಲಾಕ್ ಮಾಡುವ ಅವಕಾಶವನ್ನು ನೀಡಲಾಗಿದೆ.

37 ದೇಶದಲ್ಲಿ ಸೇವೆ:
ಈಗಾಗಲೇ ಯೂಟ್ಯೂಬ್ ಕಿಡ್ಸ್ ಒಟ್ಟು 37 ದೇಶಗಳಲ್ಲಿ ಕಾರ್ಯಚರಣೆಯನ್ನು ನಡೆಸುತ್ತಿದೆ ಎನ್ನಲಾಗಿದೆ. ಸುಮಾರು 800 ಮಿಲಿಯನ್ ವಿಡಿಯೋಗಳು ಮಕ್ಕಳ ಕಲಿಕೆಗೆಂದು ಲಭ್ಯವಿದೆ ಎಂಬುದು ತಿಳಿದುಬಂದಿದೆ.

ಮಕ್ಕಳ ಹಿತ ದೃಷ್ಠಿ:
ಮಕ್ಕಳ ಹಿತ ದೃಷ್ಠಿಯಿಂದ ಈ ಆಯ್ಕೆ ಉತ್ತಮವಾಗಿದೆ ಎನ್ನಲಾಗಿದೆ. ಮಕ್ಕಳು ಅಗತ್ಯವಿಲ್ಲದ ಮತ್ತು ಮನಸ್ಸಿಗೆ ಘಾಸಿ ಮಾಡುವಂತಹ ವಿಡಿಯೋಗಳನ್ನು ನೋಡುವುದನ್ನು ಬಿಟ್ಟು ಉತ್ತಮವಾದ ವಿಡಿಯೋಗಳನ್ನು ಆನಂದಿಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.


Click it and Unblock the Notifications








