ಆಂಡ್ರಾಯ್ಡ್‌ನಲ್ಲಿ ವಾಟ್ಸ್‌ಆಪ್‌ ಬಳಕೆ ಮಾಡುತ್ತಿರುವವರೇ ಇಲ್ಲಿ ನೋಡಿ ಒಮ್ಮೆ...!

Written By:

ವಾಟ್ಸ್‌ಆಪ್ ದಿನೇ ದಿನೇ ಆಪ್‌ಡೇಟ್ ಆಗುತ್ತಿರುವ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಲೇ ಬಂದಿದ್ದೇವೆ. ಇದೇ ಮಾದರಿಯಲ್ಲಿ ಈ ಬಾರಿ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಬದಲಾವಣೆಯನ್ನು ಮಾಡಿಕೊಟ್ಟಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊತ್ತು ತಂದಿದ್ದೇವೆ.

ಆಂಡ್ರಾಯ್ಡ್‌ನಲ್ಲಿ ವಾಟ್ಸ್‌ಆಪ್‌ ಬಳಕೆ ಮಾಡುತ್ತಿರುವವರೇ ಇಲ್ಲಿ ನೋಡಿ ಒಮ್ಮೆ...!

ಓದಿರಿ: ಐಫೋನ್ X ಮೀರಿಸುವ ಆಂಡ್ರಾಯ್ಡ್‌ ಫೋನ್: ಬೆಲೆ ಕಡಿಮೆ, ಆಯ್ಕೆ ಅಧಿಕ

ಈಗಾಗಲೇ ವಾಟ್ಸ್‌ಆಪ್ ಲಾಂಚ್ ಮಾಡುತ್ತದೆ ಎಂದು ತಿಳಿದಿದ್ದ ಅಧಿಕೃತ ಅಕೌಂಟ್ ಎಂಬ ಟಿಕ್ ಮಾರ್ಕ್ ಸೇರಿದಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡು ಗ್ರಾಹಕರ ಮುಂದೆ ಬಂದಿದೆ. ಸದ್ಯ ಈ ಬದಲಾವಣೆಯೂ ಬೀಟಾ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಶೀಘ್ರವೇ ಸಾಮಾನ್ಯ ಬಳಕೆದಾರರಿಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್‌ಆಪ್ ವರ್ಶನ್ 2.17.411:

ವಾಟ್ಸ್‌ಆಪ್ ವರ್ಶನ್ 2.17.411:

ಸದ್ಯ ಬೀಟಾ ಬಳಕೆದಾರರಿಗೆ ವಾಟ್ಸ್‌ಆಪ್ ಆವೃತ್ತಿ 2.17.411 ಬಿಡುಗಡೆಯಾಗಿದ್ದು, ಇದರಲ್ಲಿ ಹಿಂದಿನ ವಾಟ್ಸ್‌ಆಪ್‌ಗಿತಂಲೂ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ. ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

ದೊಡ್ಡದಾದ ಹಾರ್ಟ್‌ ಎಮೋಜಿ:

ದೊಡ್ಡದಾದ ಹಾರ್ಟ್‌ ಎಮೋಜಿ:

ಈಗಾಗಲೇ ವಾಟ್ಸ್‌ಆಪ್‌ನಲ್ಲಿ ಹಾರ್ಟ್‌ ಎಮೋಜಿ ಒಂದನೇ ದೊಡ್ಡದಾಗಿ ಕಳುಹಿಸುವ ಅವಕಾಶವನ್ನು ಬಳಕೆದಾರರು ಪಡೆದುಕೊಂಡಿದ್ದಾರೆ. ಈ ಬಾರಿ ವಾಟ್ಸ್‌ಆಪ್ ಹಾರ್ಟ್‌ ಸೈಜ್ ಅನ್ನು ಸಾಕಷ್ಟು ಬದಲಾವಣೆಯನ್ನು ಮಾಡಿದ್ದು, ಇನಷ್ಟು ದೊಡ್ಡದಾಗಿದೆ.

ಗೆಟ್ ಡೈರೆಕ್ಷನ್:

ಗೆಟ್ ಡೈರೆಕ್ಷನ್:

ನೀವು ಯಾರದೇ ಫೋಟೊ ಕಾಂಟೆಕ್ಟ್ ಮೇಲೆ ಕ್ಲಿಕ್ ಮಾಡಿದರೆ ಮೇಸೆಜ್, ಕಾಲ್, ವಿಡಿಯೋ ಕಾಲ್ ಮತ್ತು ಡಿಟೈಲ್ಸ್ ಎನ್ನುವ ನಾಲ್ಕು ಆಯ್ಕೆಗಳನ್ನು ಕಾಣಬಹುದಾಗಿತ್ತು. ಆದರೆ ಈಗ ಗೆಟ್ ಡೈರೆಕ್ಷನ್ ಅನ್ನುವ ಹೊಸ ಆಯ್ಕೆ ಕಾಣಿಸಿಕೊಂಡಿದ್ದು, ಇದು ಲೈವ್ ಲೋಕೆಷನ್ ಸೆಂಡ್ ಮಾಡಲು ಸಹಾಯಕವಾಗಿದೆ.

ಗ್ರೀನ್ ಟಿಕ್:

ಗ್ರೀನ್ ಟಿಕ್:

ಈಗಾಗಲೇ ವಾಟ್ಸ್‌ಆಪ್ ಟ್ವಿಟರ್ ಹಾಗೂ ಫೇಸ್‌ಬುಕ್ ಮಾದರಿಯಲ್ಲಿ ಅಧಿಕೃತ ಅಕೌಂಟ್ ಎಂದು ತೋರಿಸುವ ಸಲುವಾಗಿ ಬ್ಲೂ ಟೀಕ್ ಮಾರ್ಕ್ ಹಾಕುತ್ತಿದ್ದವು ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಅಧಿಕೃತ ಖಾತೆಗಳಿಗೆ ಗ್ರೀನ್ ಟಿಕ್ ಮಾರ್ಕ್ ಹಾಕುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Latest update to WhatsApp beta on Android. to know more visit kannada.gozbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot