ಮಕ್ಕಳು ಯೂಟ್ಯೂಬ್ ವೀಕ್ಷಿಸಿದರೆ ಇನ್ಮುಂದೆ ಚಿಂತಿಸುವ ಅಗತ್ಯತೆ ಇಲ್ಲ!!
ಮಕ್ಕಳಿಗೆ ಸ್ಮಾರ್ಟ್‌ಪೋನ್ ನೀಡಿದರೆ ಸಾಕು ಅದರಲ್ಲಿ ಯೂಟ್ಯೂಬ್ ತೆರೆದು ನೋಡುತ್ತಾರೆ ಎಂಬುದು ಹಲವು ಪೋಷಕರು ಆತಂಕ ಪಡುತ್ತಾರೆ. ಯೂಟ್ಯೂಬ್ ನೋಡಿದರೆ ಪರವಾಗಿಲ್ಲ. ಆದರೆ, ಅದರಲ್ಲಿ ಕಾಣಿಸುವ ಅಶ್ಲೀಲತೆಯಂತಹ ವಿಡಿಯೋಗಳು ಮತ್ತು ಹಿಂಸಾತ್ಮಕ ವಿಡಿಯೋಗಳನ್ನು ವೀಕ್ಷಿಸಿ ಮಕ್ಕಳ ಮನಸ್ಸು ಹಾಳಾಗುತ್ತದೆ ಎಂಬ ಭಯ ಪೋಷಕರಿಗೆ.!
ಹಾಗಾಗಿಯೇ, ಸಾಮಾಜಿಕ ಜಾಲತಾಣಗಳೆಲ್ಲವೂ ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಮಕ್ಕಳು ಯಾವುವದನ್ನು ಬಳಸಬೇಕು ಅಥವಾ ಬಳಸಬಾರದು ಎಂಬುದನ್ನು ಪೋಷಕರು ನಿಯಂತ್ರಿಸುವಂತೆ ಆಯ್ಕೆಗಳನ್ನು ನೀಡುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ವಿಡಿಯೋ ಜಾಲತಾಣ ಯೂಟ್ಯೂಬ್.!

ಪೋಷಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ನಿಟ್ಟಿನಲ್ಲಿ ಯೂಟ್ಯೂಬ್ ಸಹ ಕಿಡ್ಸ್ ಟೂಲ್ ಅನ್ನು ಬಿಡುಗಡೆ ಮಾಡಿದೆ. ಹೊಸ ಆಯ್ಕೆಯ ಮೂಲಕ ಪೋಷಕರು ತಾವು ಯಾವ ವಿಷಯ, ಚಾನಲ್ ಗಳನ್ನು ಪಟ್ಟಿ ಮಾಡುತ್ತಾರೋ ಆ ವಿಷಯಗಳಿಗೆ ಸಂಬಂಧಿಸಿದಂತಹ ವಿಡಿಯೋ, ಚಾನಲ್ ಗಳನ್ನು ಮಾತ್ರ ಮಕ್ಕಳು ಯೂಟ್ಯೂಬ್ ನಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಇಲ್ಲಿ ಪೋಷಕರು ಅನುಮೋದಿಸುವ ಕಂಟೆಂಟ್ ಅನ್ನು ಮಾತ್ರ ಮಕ್ಕಳು ವೀಕ್ಷಿಸಲು ಸಾಧ್ಯವಿದ್ದು, ಸರ್ಚ್ ಆಫ್ ಕಂಟ್ರೋಲ್ ಆಯ್ಕೆಯನ್ನೂ ನೀಡಲಾಗಿದೆ.. ಈಗ ಪೋಷಕರಿಗೆ ತಮ್ಮ ಮಕ್ಕಳು ಕಲೆ, ಕರಕುಶಲ, ಕ್ರೀಡೆ, ಕಲಿಕೆ ಮುಂತಾದ ವಿಷಯಗಳ ಕುರಿತ ವಿಡಿಯೋಗಳನ್ನು ನೋಡಬೇಕೆಂಬುದನ್ನೂ ಪಟ್ಟಿ ಮಾಡುವ ಆಯ್ಕೆ ನೀಡಲಾಗಿದೆ ಎಂದು ಯುಟ್ಯೂಬ್ ಹೇಳಿದೆ.

ಮಕ್ಕಳನ್ನು ಅಪಾಯವಾಗುವ, ಹಿಂಸಾತ್ಮಕ ಉಗ್ರಗಾಮಿತ್ವವನ್ನು ಬಿಂಬಿಸುವ ವಿಡಿಯೋಗಳನ್ನು ತಡೆಯಲು 10,000 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಯೂಟ್ಯೂಬ್ ಹೇಳಿದೆ. ಮಕ್ಕಳ ಆಸಕ್ತಿಗಳಿಗೆ ಅನುಗುಣವಾದ ವಿಡಿಯೋಗಳನ್ನು ಹೆಚ್ಚು ತಲುಪಿಸುವ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ಯೂಟ್ಯೂಬ್ ಕಿಡ್ಸ್ ಅನ್ನು ಪ್ರಾರಂಭಿಸಲಾಗಿತ್ತು.
ಓದಿರಿ: ಒಂದೇ ತಿಂಗಳಿನಲ್ಲಿ 'ವಾಟ್ಸ್ಆಪ್' ಪಡೆದಿರುವ ಎಲ್ಲಾ 10 ಅಪ್‌ಡೇಟ್ಸ್ ಲೀಸ್ಟ್ ಇಲ್ಲಿದೆ!!


Click it and Unblock the Notifications








