ಒಂದೇ ತಿಂಗಳಿನಲ್ಲಿ 'ವಾಟ್ಸ್ಆಪ್' ಪಡೆದಿರುವ ಎಲ್ಲಾ 10 ಅಪ್‌ಡೇಟ್ಸ್ ಲೀಸ್ಟ್ ಇಲ್ಲಿದೆ!!

. ಮೊಬೈಲ್ ಜಮಾನದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿರುವ ವಿಶ್ವದ ಟಾಪ್ 1 ಮೆಸೆಜಿಂಗ್ ಕಂಪನಿ ವಾಟ್ಸ್‌ಆಪ್, ಇಂದು 'ಸೇವ್ಡ್ ವಾಯ್ಸ್ ಮೆಸೇಜಸ್' ಎಂಬ ಹೊಸ ಆಯ್ಕೆಯನ್ನು ಪರಿಚಯಿಸಿದೆ.

|

ವಾಟ್ಸ್‌ಆಪ್ ಪೇಮೆಂಟ್ ಆಯ್ಕೆ ಬಳಕೆಗೆ ಬರುವ ಮುನ್ನವೇ ವಾಟ್ಸ್‌ಆಪ್ ಮತ್ತೊಂದು ಅಪ್‌ಡೇಟ್ ಅನ್ನು ಪಡೆದುಕೊಂಡಿದೆ. ಮೊಬೈಲ್ ಜಮಾನದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿರುವ ವಿಶ್ವದ ಟಾಪ್ 1 ಮೆಸೆಜಿಂಗ್ ಕಂಪನಿ ವಾಟ್ಸ್‌ಆಪ್, ಇಂದು 'ಸೇವ್ಡ್ ವಾಯ್ಸ್ ಮೆಸೇಜಸ್' ಎಂಬ ಹೊಸ ಆಯ್ಕೆಯನ್ನು ಪರಿಚಯಿಸಿದೆ.

ವಾಟ್ಸ್‌ಆಪ್‌ನಲ್ಲಿ ಈ ಮೊದಲು ವಾಯ್ಸ್‌ ಮೆಸೇಜ್ ರೆಕಾರ್ಡ್‌ ಮಾಡುವ ವೇಳೆ ಚಾಟ್‌ನಲ್ಲಿಯೇ ಇರಬೇಕಿತ್ತು. ಆದರೆ ಈಗಿನ ಸುಧಾರಿತ ಆವೃತ್ತಿಯಲ್ಲಿ ಚಾಟ್‌ನಿಂದ ಹೊರಬಂದು ವಾಯ್ಸ್‌ ರೆಕಾರ್ಡ್‌ಅನ್ನು ಒಮ್ಮೆ ಕೇಳಿ ಕಳುಹಿಸಬಹುದಾಗಿದೆ. ಆದರೆ, ಈ ಸಂದೇಶ ಕೇಳಲು ಹೋಮ್‌ ಸ್ಕ್ರೀನ್‌ಗೆ ಬರಬೇಕಾಗುತ್ತದೆ ಎಂದು ತಿಳಿದುಬಂದಿದೆ.

 ಒಂದೇ ತಿಂಗಳಿನಲ್ಲಿ 'ವಾಟ್ಸ್ಆಪ್' ಪಡೆದಿರುವ ಎಲ್ಲಾ 10 ಅಪ್‌ಡೇಟ್ಸ್ ಲೀಸ್ಟ್!!

ವಾಟ್ಸ್ಆಪ್‌ನಲ್ಲಿ ವಾಯ್ಸ್‌ ರೆಕಾರ್ಡ್‌ ಮಾಡುವ ವೇಳೆ ಯಾವುದಾದರೂ ಕರೆ ಬಂದರೂ ಅಥವಾ ಬ್ಯಾಟರಿ ಚಾರ್ಜ್‌ ಮುಗಿದರೂ ಆ ವರೆಗಿನ ವಾಯ್ಸ್‌ ಮೆಸೇಜ್ ಸೇವ್ ಆಗಲಿದೆ ಎಂದು ವಾಟ್ಸ್‌ಆಪ್ ತಿಳಿಸಿದೆ. ಕೆಲವೇ ದಿನಗಳಲ್ಲಿ ವಾಟ್ಸ್ಆಪ್ ಅಪ್‌ಡೇಟ್ ಮಾಡಿಕೊಂಡಿರುವ ಹಲವು ಫೀಚರ್ಸ್‌ಗಳಲ್ಲಿ ಇದು ಕೂಡ ಒಂದಾಗಿದ್ದು, ಉಳಿದ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ವಾಟ್ಸ್‌ಆಪ್ ನಲ್ಲಿಯೇ ಹಣ ಪಾವತಿಸಿ:

ವಾಟ್ಸ್‌ಆಪ್ ನಲ್ಲಿಯೇ ಹಣ ಪಾವತಿಸಿ:

ವಾಟ್ಸ್ಆಪ್ ಬಳಕೆದಾರರಿಗೆ ನೀಡಿರುವ ಹೊಸ ಸೇವೆಯೂ ಇದಾಗಿದ್ದು, UPI ಬಳಕೆಯ ಮೂಲಕ ವಾಟ್ಸ್‌ಆಪ್ ನಲ್ಲಿ ನಿಮ್ಮ ಸ್ನೇಹಿತರಿಗೆ ಹಣವನ್ನು ಕಳುಹಿಸಬಹುದು ಮತ್ತು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ವ್ಯಾಪಾರಿಗಳಿಗೆ ಪೇಮೆಂಟ್ ಸಹ ಮಾಡಬಹುದಾಗಿದೆ.

ಮೇಸೆಜ್ ಡಿಲೀಟ್ ಮಾಡಿ:

ಮೇಸೆಜ್ ಡಿಲೀಟ್ ಮಾಡಿ:

ಇದಲ್ಲದೇ ನೀವು ಗ್ರೂಪ್‌ನಲ್ಲಿ ಇಲ್ಲವೇ ಸ್ನೇಹಿತರೊಂದಿಗೆ ಚಾಟ್ ಮಾಡುವ ಸಂದರ್ಭದಲ್ಲಿ ತಿಳಿಯದೆ ತಪ್ಪಾಗಿ ಮೇಸೆಜ್ ಗಳನ್ನು ಸೆಂಡ್ ಮಾಡಿದ ಸಂದರ್ಭದಲ್ಲಿ ಅವರು ನೋಡುವ ಮೊದಲೇ ನೀವು ಅದನ್ನು ಡಿಲೀಟ್ ಮಾಡಬಹುದಾಗಿದೆ. ಇದಕ್ಕಾಗಿ ಒಂದು ಗಂಟೆಗೂ ಹೆಚ್ಚು ಕಾಲಾವಕಾಶವನ್ನು ನೀಡಲಾಗಿದೆ. ಇದು ವಾಟ್ಸ್‌ಆಪ್ ನೀಡಿರುವ ಹೊಸ ಆಯ್ಕೆಯಾಗಿದೆ.

ಗ್ರೂಪ್ ಬಗ್ಗೆ ಮಾಹಿತಿ:

ಗ್ರೂಪ್ ಬಗ್ಗೆ ಮಾಹಿತಿ:

ಇದಲ್ಲದೇ ನೀವು ಆಡ್ಮಿನ್ ಆಗಿರುವ ಗ್ರೂಪ್‌ ಬಗ್ಗೆ ನೀವು ಮಾಹಿತಿಯನ್ನು ನೀಡಬಹುದಾಗಿದೆ. ನಿಮ್ಮ ಗ್ರೂಪ್ ಯಾವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ, ಉದ್ದೇಶಗಳೇನು, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಸದಸ್ಯರಿಗೆ ತಿಳಿಸಲು ಇದು ವೇದಿಕೆಯಾಗಲಿದೆ.

ಗ್ರೂಪ್ ವಿಡಿಯೋ ಕಾಲಿಂಗ್:

ಗ್ರೂಪ್ ವಿಡಿಯೋ ಕಾಲಿಂಗ್:

ಮೊದಲು ವಾಟ್ಸ್‌ಆಪ್ ಬಳಕೆದಾರರಿಗೆ 'ಒನ್ ಆನ್ ಒನ್' ವಿಡಿಯೋ ಕಾಲಿಂಗ್ ಮಾಡುವ ಆಯ್ಕೆಯನ್ನು ಮಾತ್ರವೇ ನೀಡಲಾಗಿತ್ತು. ಆದರೆ ಈಗ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವ ಹೊಸ ಆಯ್ಕೆಯೊಂದನ್ನು ನೀಡಲಾಗಿದೆ. ಇದರಲ್ಲಿ ನಿಮ್ಮ ಸ್ನೇಹಿತರೊಂದಿಗೆ ಒಟ್ಟಾಗಿ ಮಾತನಾಡಬಹುದಾಗಿದೆ.

ವಾಟ್ಸ್‌ಆಪ್ ಬಿಸ್ನೆಸ್:

ವಾಟ್ಸ್‌ಆಪ್ ಬಿಸ್ನೆಸ್:

ಇದಲ್ಲದೇ ನಿಮ್ಮ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ಬೆಳಸಲು ವಾಟ್ಸ್ಆಪ್ ಸಹಾಯವನ್ನು ಮಾಡಲಿದ್ದು, ಇದಕ್ಕಾಗಿ ಬೆಸ್ನೆಸ್ ಆಪ್ ವೊಂದನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದರಲ್ಲಿ ನಿಮ್ಮ ಬಿಸ್ನೆಸ್ ಬಗ್ಗೆ ಸಂಫೂರ್ಣ ಮಾಹಿತಿಯನ್ನು ನೀಡುವುದಲ್ಲದೇ ಗ್ರಾಹಕರೊಂದಿಗೆ ಸಂವಹನ ನಡೆಸಲು ಸಹಾಯಕಾರಿಯಾಗಿದೆ.

ವಿಡಿಯೋ ಕಾಲ್‌ನಿಂದ ಆಡಿಯೋ ಕಾಲ್‌:

ವಿಡಿಯೋ ಕಾಲ್‌ನಿಂದ ಆಡಿಯೋ ಕಾಲ್‌:

ನಿಮ್ಮ ಸ್ನೇಹಿತರಿಗೆ ಆಡಿಯೋ ಕಾಲ್ ಮಾಡಿ ಮಾತನಾಡುವ ಸಂದರ್ಭದಲ್ಲಿಯೇ ಆಡಿಯೋ ಕಾಲ್ ಅನ್ನು ವಿಡಿಯೋ ಕಾಲ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದ್ದು, ಇದ್ಕಕಾಗಿಯೇ ವಾಟ್ಸ್ ಆಪ್ ಅವಕಾಶವನ್ನು ಮಾಡಿಕೊಟ್ಟಿದೆ. ಇಂದರಿಂದಾಗಿ ವಾಟ್ಸ್‌ಆಪ್ ಕಾಲಿಂಗ್ ಅನುಭವ ಉತ್ತಮವಾಗಲಿದೆ.

ವಾಟ್ಸ್‌ಆಪ್ ನಲ್ಲಿಯೇ ಯೂಟ್ಯೂಬ್:

ವಾಟ್ಸ್‌ಆಪ್ ನಲ್ಲಿಯೇ ಯೂಟ್ಯೂಬ್:

ಈ ಹಿಂದೆ ನಿಮ್ಮ ಸ್ನೇಹಿತರು ಯೂಟ್ಯೂಬ್ ವಿಡಿಯೋ ಲಿಂಕ್ ಶೇರ್ ಮಾಡಿದ ಸಂದರ್ಭದಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅದು ಯೂಟ್ಯೂಬ್ ಆಪ್‌ನಲ್ಲಿ ತೆರೆದುಕೊಳ್ಳುತಿತ್ತು. ಆದರೆ ಈಗ ಅದು ಬದಲಾಗಿದ್ದು, ನಿಮ್ಮ ಚಾಟ್ ವಿಂಡೋದಲ್ಲಿಯೇ ಯೂಟ್ಯೂಬ್ ವಿಡಿಯೋವನ್ನು ಪ್ಲೇ ಮಾಡಬಹುದಾಗಿದೆ.

ವಾಟ್ಆಪ್ ಐಕಾನ್ ಬದಲಾಯಿಸಿ:

ವಾಟ್ಆಪ್ ಐಕಾನ್ ಬದಲಾಯಿಸಿ:

ಆಂಡ್ರಾಯ್ಡ್ ಒರಿಯೋ ಬಳಕೆದಾರರು ತನ್ನ ವಾಟ್ಸ್ ಆಪ್ ಐಕಾನ್ ಅನ್ನು ಬದಲಾಯಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ ಮತ್ತು ಅದನ್ನು ಸ್ನೇಹಿತರೊಂದಿಗೆ ಶೇರ್ ಸಹ ಮಾಡಬಹುದಾಗಿದೆ.

ಲೈವ್ ಲೋಕೆಷನ್ ಶೇರ್:

ಲೈವ್ ಲೋಕೆಷನ್ ಶೇರ್:

ನಿಮ್ಮ ವಾಟ್ಸ್‌ಆಪ್ ಮೂಲಕ ನೀವು ಲೈವ್ ಲೋಕೆಷನ್ ಅನ್ನು ಶೇರ್ ಮಾಡಬಹುದಾಗಿದೆ. ನೀವು ಎಲ್ಲಿದ್ದೀರಿ ಎಂಬುದನ್ನು ಸ್ನೇಹಿತರು ರಿಯಲ್ ಟೈಮಿನಲ್ಲಿ ನೋಡಬಹುದಾಗಿದೆ.

How to read deleted WhatsApp messages - GIZBOT KANNADA
ಸ್ಟೇಟಸ್ :

ಸ್ಟೇಟಸ್ :

ಫೇಸ್‌ಬುಕ್‌ನಲ್ಲಿ ಇದ್ದಂತಹ ಬಣ್ಣಬಣ್ಣದ ಸ್ಟೆಟಸ್ ಬ್ಯಾಕ್‌ ಗ್ರೌಂಡ್ ಅನ್ನು ವಾಟ್ಸ್‌ಆಪ್ ನಲ್ಲಿಯೂ ಬಳಕೆ ಮಾಡಿಕೊಳ್ಳುವ ಅವಕಾಶವು ಇದೆ. ಅಲ್ಲದೇ ಫಾಂಟ್ ಗಳನ್ನು ಬದಲಾಯಿಸಿಕೊಳ್ಳೂವ ಅವಕಾಶವನ್ನು ಮಾಡಿಕೊಡಲಾಗಿದೆ.

Best Mobiles in India

English summary
WhatsApp on Android beta gets option to save voice messages, add location stickers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X