4K ವಿಡಿಯೋ ರೇಕಾರ್ಡ್ ಮಾಡಲು ಇಲ್ಲಿವೆ ನೋಡಿ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು!
ಮೊಬೈಲ್ ಕ್ಯಾಮೆರಾ ಮೂಲಕ ಅತ್ಯುತ್ತಮ ವಿಡಿಯೋ ಸೆರೆಹಿಡಿಯಬೇಕೆ? ಈ ನಿಟ್ಟಿನಲ್ಲಿ ಮೀಡ್‌ರೇಂಜ್ ದರದಲ್ಲಿ ಒಂದೊಳ್ಳೆ 4K ವಿಡಿಯೋ ಸಪೋರ್ಟ್ ಇರುವ ಸ್ಮಾರ್ಟ್‌ಪೋನ್ ಖರೀದಿಸಲು ಯೋಚಿಸುತ್ತಿದ್ದಿರಾ? ಹಾಗಿದ್ರೆ ಖಂಡಿತಾವಾಗಿಯು ನಿಮಗೆ ಕೆಲವು ಅತ್ಯುತ್ತಮ ಮೊಬೈಲ್‌ಗಳ ಆಯ್ಕೆ ಲಭ್ಯ ಇದೆ. ಇತ್ತೀಚಿಗೆ ಮೊಬೈಲ್ ಬ್ರ್ಯಾಂಡ್‌ಗಳು ಕ್ಯಾಮೆರಾ ಆಯ್ಕೆಗೆ ಹೆಚ್ಚಿನ ಗಮನ ನೀಡುತ್ತಿದ್ದು, ಮೀಡ್‌ರೇಂಜ್‌ನಲ್ಲಿ ಕೆಲವು ಬೆಸ್ಟ್ ಕ್ಯಾಮೆರಾ ಫೋನ್‌ಗಳ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಇವು ವಿಡಿಯೋ ರೆಕಾರ್ಡಿಂಗ್‌ಗೆ ಉತ್ತಮ ಎನಿಸುವಂತೆ ಇವೆ.
ಹೌದು, ಪ್ರಸ್ತುತ ಇತ್ತೀಚಿನ ಅನೇಕ ಮೊಬೈಲ್‌ಗಳು ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಅವುಗಳಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸಲ್ ಸೆನ್ಸಾರ್ ಸೌಲಭ್ಯ ಒಳಗೊಂಡಿವೆ. ಆ ಪೈಕಿ ಕೆಲವು ಮಿಡ್‌ರೇಂಜ್ ಬೆಲೆಯ ಫೋನ್‌ಗಳು ಸಹ 50 ಮೆಗಾಪಿಕ್ಸಲ್ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದ್ದು, ಕ್ವಾಲಿಟಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಪಡೆದಿವೆ. ಸದ್ಯ ನೀವೇನಾದರೂ 30,000ರೂ. ಗಳ ಬೆಲೆಯಲ್ಲಿ ಅತ್ಯುತ್ತಮ 4K ವಿಡಿಯೋ ಕ್ಯಾಮೆರಾ ಮೊಬೈಲ್ ಖರೀದಿಸಲು ಪ್ಲ್ಯಾನ್ ಮಾಡಿದ್ದರೆ, ಈ ಲೇಖನ ಓದಿರಿ.

ಮೊಟೊರೊಲಾ ಎಡ್ಜ್ 50 ಫ್ಯೂಜನ್ ಮೊಬೈಲ್
ಮೊಟೊರೊಲಾ ಎಡ್ಜ್ 50 ಫ್ಯೂಜನ್ ಮೊಬೈಲ್ 6.7 ಇಂಚಿನ 3D ಕರ್ವ್ಡ್ pOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯು 2400 × 1080p ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಇದೆ.
ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದು 4K ರೆಸಲ್ಯೂಶನ್ ವಿಡಿಯೋ ರೇಕಾರ್ಡಿಂಗ್ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 68W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಮೊಬೈಲ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ 6.4 ಇಂಚಿನ ಡೈನಾಮಿಕ್ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಪವರ್ ಅನ್ನು ಹೊಂದಿದೆ.
ಇದು ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದು 4K ರೆಸಲ್ಯೂಶನ್ ವಿಡಿಯೋ ರೇಕಾರ್ಡಿಂಗ್ ಸಪೋರ್ಟ್ ಮಾಡುತ್ತದೆ. ಹಾಗೆಯೇ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ವಿವೋ V30e ಮೊಬೈಲ್
ವಿವೋ V30e ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ + ಕರ್ವ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಪಡೆದಿದೆ. ಹಾಗೆಯೇ ಈ ಫೋನ್ 8GB + 128GB ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.
ವಿವೋ V30e ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿ ಇದೆ. ಇದು 4K ರೆಸಲ್ಯೂಶನ್ ವಿಡಿಯೋ ರೇಕಾರ್ಡಿಂಗ್ ಸಪೋರ್ಟ್ ಮಾಡುತ್ತದೆ. ಹಾಗೆಯೇ 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ.


Click it and Unblock the Notifications








