Just In
- 1 hr ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 1 hr ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 3 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 3 hrs ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
Don't Miss
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Automobiles
ಟಾಟಾಗೆ ಸೆಡ್ಡು ಹೊಡೆಯಲು 6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ
- Finance
Multibagger stock: 1 ವರ್ಷದಲ್ಲೇ ಶೇ.1000 ರಿಟರ್ನ್ ಪಡೆಯಿರಿ!
- Lifestyle
ಒಣಕೆಮ್ಮಿಗೆ ಕಾರಣವೇನು? ಯಾವ ಮನೆಮದ್ದು ಒಳ್ಳೆಯದು?
- Sports
IND vs AUS Test : ಫೆಬ್ರವರಿ 1 ರಂದು ಭಾರತಕ್ಕೆ ಆಸ್ಟ್ರೇಲಿಯಾ ತಂಡ : ಬೆಂಗಳೂರಿನಲ್ಲಿ ಅಭ್ಯಾಸ
- Movies
ಗಾಯಕನಾಗುವ ಆಸೆಯಿಂದ ಬಂದು ನಟನಾದ ಯಶವಂತ್ ಕಿರುತೆರೆ ಪಯಣ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫೋಟೋಗ್ರಫಿಯಲ್ಲಿ ಆಸಕ್ತಿ ಇದೆಯಾ?.ಇಲ್ಲಿವೇ ನೋಡಿ ಬೆಸ್ಟ್ ಆರಂಭಿಕ DSLR ಕ್ಯಾಮೆರಾಗಳು.!!
ಒಂದು ಫೋಟೊ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಫೋಟೋಗ್ರಫಿಯನ್ನು ಒಂದು ದೃಶ್ಯಕಾವ್ಯ ಎಂದು ಸಹ ಬಣ್ಣಿಸುವುದುಂಟು. ಆಸಕ್ತಿ ಜೊತೆಗೆ ಅಭಿರುಚಿ ಇದ್ದರೇ ಅದ್ಭುತ ಫೋಟೋಗಳು ಮೂಡಿಬರಲು ಸಾಧ್ಯ. ಫೋಟೋಗ್ರಾಫಿಯನ್ನು ಬಹುತೇಕರು ವೃತ್ತಿಯಾಗಿ ಸ್ವೀಕರಿಸಿದ್ದರೇ, ಅನೇಕರಿಗೆ ಫೋಟೋಗ್ರಫಿ ಒಂದು ಹವ್ಯಾಸ ಆಗಿದೆ. ಏನೇ ಆದರೂ ಫೋಟೋಗ್ರಫಿ ಅತ್ಯುತ್ತಮ ಕ್ಯಾಮೆರಾ ಬೇಕೆ ಬೇಕು ಅಲ್ಲವೇ.

ಹೌದು, ಗುಣಮಟ್ಟದ ಫೋಟೋ ಸೆರೆಹಿಡಿಯಲು ಒಂದು ಅತ್ಯುತ್ತಮ ಕ್ಯಾಮೆರಾ ಇರಲೆಬೇಕು. ಫೋಟೋಗ್ರಫಿ ವಿಶಾಲವಾದ ಆಯ್ಕೆ ಇದ್ದು, ಒಂದು ನಿಗದಿತ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ಏಷ್ಟೋಸಲ ಯಾರ ಕಣ್ಣಿಗೆ ಕಾಣದ್ದು ಛಾಯಾಚಿತ್ರಕಾರನ ಕ್ಯಾಮೆರಾ ಕಣ್ಣಲ್ಲಿ ಸೆರೆ ಆಗಿರುತ್ತವೆ. ಫೋಟೋ ಸೆರೆಹಿಡಿಯುವಾಗ ಕ್ಯಾಮೆರಾಗಳಿಗೆ ಅಗತ್ಯ ಎಕ್ಸ್ಟ್ರಾ ಲೆನ್ಸ್‌ಗಳನ್ನು ಬಳೆಸಿಕೊಂಡರೆ ಅದ್ಭುತವಾಗಿ ಫೋಟೋ ಸೆರೆಹಿಡಿಯಬಹುದು.

ಪ್ರಮುಖ ಡಿಎಸ್‌ಎಲ್‌ಆರ್ ಕ್ಯಾಮೆರಾ ಕಂಪನಿಗಳು ನೂತನ ಫೀಚರ್ಸ್‌ಗಳನ್ನು ಹೊಸ ಮಾದರಿಯ ಕ್ಯಾಮೆರಾಗಳಲ್ಲಿ ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸುವಾಗ ನಿಮ್ಮ ಫೋಟೋಗ್ರಫಿಗೆ ಅಗತ್ಯವಿರುವ ಫೀಚರ್ಸ್‌ಗಳನ್ನು ಗಮನಿಸಿ ಕ್ಯಾಮೆರಾ ಆಯ್ಕೆ ಮಾಡಿಕೊಳ್ಳಬೇಕು. ಹಾಗಾದರೇ ಪ್ರಸ್ತುತ 50,000ರೂ.ಗಳ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಎಂಟ್ರಿ ಲೆವಲ್ ಕ್ಯಾಮೆರಾಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ನಿಕಾನ್ D5600
ನಿಕಾನ್ D5600 ಕ್ಯಾಮೆರಾವು 24.2ಮೆಗಾಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, ಇದರಲ್ಲಿ APS-C CMOS ಸೆನ್ಸಾರ್ ಇದೆ. ನಿಕಾನ್ DX ಲೆನ್ಸ್ ಒಳಗೊಂಡಿದ್ದು, ಸುಮಾರು 1,040,000 ನಷ್ಟು ಡಾಟ್ಸ್‌ಗಳನ್ನು ಹೊಂದಿರುವ 3.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಕ್ಯಾಮೆರಾದ ನಿರಂತರ ಶೂಟಿಂಗ್ ವೇಗ 5fps ಆಗಿದೆ. ವಿಡಿಯೋ ರೆಸಲ್ಯೂಶನ್ 1080 ಪಿಕ್ಸಲ್ ಸಾಮರ್ಥ್ಯದಲ್ಲಿದೆ. ಬ್ಲೂಟೂತ್, ವೈಫೈ ಆಯ್ಕೆಗಳನ್ನು ಹೊಂದಿರುವ ಈ ಕ್ಯಾಮೆರಾ ಆರಂಭಿಕ ಹವ್ಯಾಸಿ ಛಾಯಾಚಿತ್ರಕಾರರಿಗೆ ಉತ್ತಮ ಆಯ್ಕೆ.

ಕೆನಾನ್ EOS 750D
ಕೆನಾನ್ ಕಂಪನಿಯ ಈ ಕ್ಯಾಮೆರಾವು 1,040,000 ಡಾಟ್ಸ್‌ಹೊಂದಿರುವ 3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 24.2 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿದೆ. ಇದು APS-C CMOS ಸೆನ್ಸಾರ್ ಅನ್ನು ಒಳಗೊಂಡಿದ್ದು, ಜೊತೆಗೆ Canon EF mount ಲೆನ್ಸ್‍ಗಳನ್ನು ಹೊಂದಿದೆ. 5fps ವೇಗದಲ್ಲಿ ನಿರಂತರ ಶೂಟಿಂಗ್ ಮಾಡಬಹುದಾಗಿದ್ದು, ಬ್ಲೂಟೂತ್, ವೈಫೈ ಫೀಚರ್ಸ್ ಆಯ್ಕೆಗಳನ್ನು ಹೊಂದಿದೆ. ಮೊದಲ ಬಾರಿ ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸುವವರಿಗೆ ಬೆಸ್ಟ್.

ನಿಕಾನ್ D5500
ನಿಕಾನ್ ಡಿ5500 ಮಾದರಿಯ ಈ ಕ್ಯಾಮೆರಾವು APS-C CMOS ಸೆನ್ಸಾರ್‌ಅನ್ನು ಹೊಂದಿದ್ದು, 24.2 ಮೆಗಾಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾದಲ್ಲಿ ನಿಕಾನ್ DX ಲೆನ್ಸ್‌ಅನ್ನು ಬಳಸಲಾಗಿದ್ದು, 1,036,800 ಡಾಟ್ಸ್‌ಗಳೊಂದಿದೆ 3.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 5fps ವೇಗದಲ್ಲಿ ನಿರಂತರ ಶೂಟಿಂಗ್‌ಗೆ ಮಾಡುವ ಆಯ್ಕೆ ಇದ್ದು, 1080 ಪಿಕ್ಸಲ್ ಸಾಮರ್ಥ್ಯದಲ್ಲಿ ವಿಡಿಯೋ ರೆಸಲ್ಯೂಶನ್ ಇದೆ.

ಸೋನಿ ಅಲ್ಫಾ A68
ಸೋನಿ ಕಂಪನಿಯ ಈ ಕ್ಯಾಮೆರಾವು ಸಹ 24.2ಮೆಗಾಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ Sony A-mount ಲೆನ್ಸ್‌ಗಳನ್ನು ಒಳಗೊಂಡಿದೆ. ಈ ಕ್ಯಾಮೆರಾವು APS-C CMOS ಸೆನ್ಸಾರ್ ಅನ್ನು ಹೊಂದಿರುವ ಜೊತೆಗೆ 8fps ಸಾಮರ್ಥ್ಯದಲ್ಲಿ ನಿರಂತರ ಶೂಟಿಂಗ್ ಮಾಡುವ ಆಯ್ಕೆಯನ್ನು ಹೊಂದಿದೆ. 460,000 ಡಾಟ್ಸ್‌ಗಳ ಬಲದೊಂದಿಗೆ 2.7 ಇಂಚಿನ ಡಿಸ್‌ಪ್ಲೇ ಇದೆ. BIONZ X ಪ್ರೊಸೆಸರ್ ಅನ್ನು ಹೊಂದಿದ್ದು, ಕ್ಯಾಮೆರಾದ ವೇಗವನ್ನು ದ್ವಿಗುಣ ಮಾಡಲಿದೆ.

ನಿಕಾನ್ D3500
ನಿಕಾನ್ D3500 ಕ್ಯಾಮೆರಾವು 921,000 ಡಾಟ್ಸ್‌ನೊಂದಿಗೆ 3.0 ಇಂಚಿನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ಯಾಮೆರಾವು 24.2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ನಿಕಾನ್ F ಲೆನ್ಸ್‌ಅನ್ನು ಹೊಂದಿದ್ದು, APS-C CMOS ಸೆನ್ಸಾರ್ ಈ ಕ್ಯಾಮೆರಾ ಒಳಗೊಂಡಿದೆ. 11-point AF ಆಟೋ ಫೊಕಸ್‌ಶಕ್ತಿಯನ್ನು ಒದಗಿಸಲಾಗಿದ್ದು, 1550 ಶಾರ್ಟ್ಸ್‌ನಷ್ಟು ಬ್ಯಾಟರಿ ಬಾಳಿಕೆ ಹೊಂದಿದೆ. ವಿಡಿಯೋ ಗುಣಮಟ್ಟವು 1080 ಪಿಕ್ಸಲ್ ಆಗಿದ್ದು, ಫುಲ್ ಹೆಚ್‌ಡಿಯಲ್ಲಿರಲಿದೆ.

ಕೆನಾನ್ EOS 1500D
ಇದೊಂದು ಉತ್ತಮ ಎಂಟ್ರಿ ಲೆವಲ್ ಡಿಎಸ್‌ಎಲ್‌ಆರ್ ಕ್ಯಾಮೆರಾ ಆಗಿದ್ದು, ಈ ಕ್ಯಾಮೆರಾವು 24.2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. APS-C CMOS ಸೆನ್ಸಾರ್‌ಅನ್ನು ಒಳಗೊಂಡಿದ್ದು, ಕೆನಾನ್ EF mount ಲೆನ್ಸ್‌ಗಳನ್ನು ಹೊಂದಿದೆ. 1,040,000 ಡಾಟ್ಸ್‌ಗಳ ಬಲದೊಂದಿಗೆ 3 ಇಂಚಿನ್ ಡಿಸ್‌ಪ್ಲೇಯನ್ನು ಹೊಂದಿದೆ. 5fps ನಿರಂತರ ಶೂಟಿಂಗ್ ಮಾಡುವ ಆಯ್ಕೆಯನ್ನು ಒಳಗೊಂಡಿದೆ. ವಿಡಿಯೋ ಗುಣಮಟ್ಟ 1080 ಪಿಕ್ಸಲ್ ಸಾಮರ್ಥ್ಯದಲ್ಲಿ ಇರಲಿದೆ.

ಕೆನಾನ್ EOS 200D
ಈ ಕ್ಯಾಮೆರಾವು ಕೆನಾನ್ EOS 1500D ಮಾದರಿಯಂತೆ 24.2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, APS-C CMOS ಸೆನ್ಸಾರ್‌ಅನ್ನು ಒಳಗೊಂಡಿದೆ. ಕೆನಾನ್ EF mount ಲೆನ್ಸ್‌ಗಳನ್ನು ಹೊಂದಿದ್ದು, ಇದರೊಂದಿಗೆ 1,040,000 ಡಾಟ್ಸ್‌ಗಳ ಕೃಢೀಕರಣದೊಂದಿಗೆ 3 ಇಂಚಿನ್ ಡಿಸ್‌ಪ್ಲೇಯನ್ನು ಹೊಂದಿದೆ. ವಿಡಿಯೋ ಗುಣಮಟ್ಟ 1080 ಪಿಕ್ಸಲ್ ಸಾಮರ್ಥ್ಯದಲ್ಲಿ ಇದ್ದು, 5fps ವೇಗದಲ್ಲಿ ನಿರಂತರ ಶೂಟಿಂಗ್ ಮಾಡುವ ಆಯ್ಕೆಯನ್ನು ಸಹ ಒಳಗೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470