'ಕೆನಾನ್' ಹೊಸ 'ಮಿರರ್‌ ಲೆಸ್ಸ್ EOS RP' ಕ್ಯಾಮೆರಾ ಲಾಂಚ್.! ಬಜೆಟ್‌ ಬೆಲೆಯಲ್ಲಿ ಲಭ್ಯ.!

|

ಕ್ಯಾಮೆರಾ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಲೇ ಇದ್ದು, ಪ್ರಮುಖ ಎಲ್ಲ ಕ್ಯಾಮೆರಾ ತಯಾರಿಕಾ ಸಂಸ್ಥೆಗಳು ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳುತ್ತಲಿವೆ. ಆದರೆ ಅವುಗಳಲ್ಲಿ ವೃತ್ತಿಪರ ಛಾಯಾಚಿತ್ರಕಾರರ ನೆಚ್ಚಿನ ಕ್ಯಾಮೆರಾ ಎಂದು ಗುರುತಿಸಿಕೊಂಡಿರುವ ಕೆನಾನ್ ಕ್ಯಾಮೆರಾ ಕಂಪನಿ ಇಂದಿಗೂ ಮಾರುಕಟ್ಟೆಯಲ್ಲಿ ಎವರ್‌ಗ್ರೀನ್ ಸ್ಥಾನ ಪಡೆದುಕೊಂಡಿದೆ.

'ಕೆನಾನ್' ಹೊಸ 'ಮಿರರ್‌ ಲೆಸ್ಸ್ EOS RP'  ಕ್ಯಾಮೆರಾ ಲಾಂಚ್.!

ಜಪಾನ ಮೂಲದ ಜನಪ್ರಿಯ ಕ್ಯಾನಾನ್ ಕಂಪನಿ ಇದೀಗ ಭಾರತೀಯ ಮಾರುಕಟ್ಟೆಗೆ ಹೊಸ EOS RP ಕ್ಯಾಮೆರಾ ಒಂದನ್ನು ಬಿಡುಗಡೆ ಮಾಡಿದ್ದು, ಈ ಕ್ಯಾಮೆರಾವು ಚಿಕ್ಕದಾದಿದ್ದು, ಫುಲ್‌ ಫ್ರೇಮ್‌ ಮಿರರ್ ಲೆಸ್‌ ಜೊತೆಗೆ ಹಗುರವಾದ ರಚನೆಯನ್ನು ಹೊಂದಿದೆ. ಕಳೆದ ಸೆಪ್ಟಂಬರ್‌ನಲ್ಲಿ EOS R ಹೆಸರಿನ ಮೊದಲ ಫುಲ್‌ಫ್ರೇಮ್‌ ಮಿರರ್‌ ಲೆಸ್ಸ್ ಕ್ಯಾಮೆರಾವನ್ನು ಪರಿಚಯಿಸಿತ್ತು.

ಕೆನಾನ್ EOS RP ಕ್ಯಾಮೆರಾ 26.2 ಮೆಗಾಪಿಕ್ಸಲ್ ಸಾಮರ್ಥ್ಯದೊಂದಿಗೆ ಡ್ಯುಯಲ್‌ ಪಿಕ್ಸಲ್ CMOS ಸೆನ್ಸಾರ್‌ಅನ್ನು ಹೊಂದಿದ್ದು, 4K ವಿಡಿಯೋ ರೆಕಾರ್ಡಿಂಗ್‌ಗೆ ಮಾಡಬಹುದಾಗಿದೆ. ಭಾರತೀಯ ಮಾರಕಟ್ಟೆಯಲ್ಲಿ ಇದರ ಆರಂಭಿಕ ಬೆಲೆಯು 110,495ರೂ.ಗಳು ಆಗಿದೆ. ಇದರೊಂದಿಗೆ EOS RP ಕಿಟ್‌ ಒಳಗೊಂಡ ಕ್ಯಾಮೆರಾ ಬೆಲೆಯು 199,490ರೂ.ಗಳು ಆಗಿದೆ.

'ಕೆನಾನ್' ಹೊಸ 'ಮಿರರ್‌ ಲೆಸ್ಸ್ EOS RP'  ಕ್ಯಾಮೆರಾ ಲಾಂಚ್.!

ಈ ಕ್ಯಾಮೆರಾವು 3 ಇಂಚಿನ ಡಿಸ್‌ಪ್ಲೇ 2.36 ಬಿಂದುಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ವೀವ್ ಫೈಂಡರ್‌ ಇದ್ದು, ಅದು ಟಚ್‌ ಮತ್ತು ಡ್ರ್ಯಾಗ್ AFಯನ್ನು ಹೊಂದಿದೆ. 24fps ವೇಗದಲ್ಲಿ 4K UHD ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದ್ದು, 60fps ಸಾಮರ್ಥ್ಯದಲ್ಲಿ ಫುಲ್‌ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್ ಮಾಡಲು ಸಹಕರಿಸುತ್ತದೆ.4K ಲಾಪ್ಸ್‌ಶೂಟಿಂಗ್ ಆತ್ಕೆ ಸಹ ಇದೆ.

ಡ್ಯಯಲ್ ಪಿಕ್ಸಲ್ CMOS AFನೊಂದಿಗೆ ಸಂಯೋಜನೆಯೊಂದಿಗೆ DiG!C 8 ಇಮೇಜ್ ಪ್ರೊಸೆಸರ್ ಇದ್ದು, ಇದು ಕಂಪನಿಯ ಮುಂದುವರಿದ ಆಟೋಫೋಕಸ್ಸಿಂಗ್ ತಂತ್ರಜ್ಞಾನವಾಗಿದೆ. 4779 ರಷ್ಟು ಆಪೋಫೋಕಸ್‌ ಬಿಂದುಗಳ ಸ್ಥಾನಗಳನ್ನು ಒಳಗೊಂದಿದ್ದು, ಆಟೋಫೋಕಸ್‌ ನಂತರ ಅದರ ನಿಖರತೆ ಮತ್ತು ನಿಯಂತ್ರಣದ ಆಯ್ಕೆಯನ್ನು ಬಳಕೆದಾರರು ನೀಡುತ್ತದೆ.

'ಕೆನಾನ್' ಹೊಸ 'ಮಿರರ್‌ ಲೆಸ್ಸ್ EOS RP'  ಕ್ಯಾಮೆರಾ ಲಾಂಚ್.!

ಬ್ಲೂಟೂತ್, ವೈಫೈ, ಇಂಟರ್ವೆಲ್ ಟೈಮರ್‌ ಮೋಡ್, ಸೈಲೆಂಟ್ ಶುಟಿಂಗ್ ಮೋಡ್ ಆಯ್ಕೆಗಳನ್ನು ಒಳಗೊಂಡಂತೆ ಮಂದಬೆಳಕಿನಲ್ಲಿ ಉತ್ತಮ ಫೋಟೋಗಾಗಿ ISO 40,000 ಸಾಮರ್ಥ್ಯವನ್ನು ಹೊಂದಿದೆ. ಈ ಕ್ಯಾಮೆರಾದೊಂದಿಗೆ ವಿವಿಧ ಶ್ರೇಣಿಯ EOS R ಲೆನ್ಸ್‌ಗಳನ್ನು ಬಳಸಬಹುದಾಗಿದ್ದು, ಕೈಯಲ್ಲಿ ಹಿಡಿಯಲು ಉತ್ತಮ ಗ್ರೀಪ್ ರಚನೆ ಒದಗಿಸಲಾಗಿದೆ.

ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಕೆನಾನ್ ಕ್ಯಾಮೆರಾ, ಪ್ರಿಂಟರ್ ಮತ್ತು ಸ್ಕ್ಯಾನರ್‌ ಸೇರಿದಂತೆ ಕಂಪನಿಯ ಉತ್ಪನ್ನಗಳಿಂದ ಉತ್ತಮ ಆದಾಯ ಬಂದಿದ್ದು, ಹೀಗಾಗಿ ಭಾರತೀಯ ಗ್ರಾಹಕರಿಗೆ ಇನ್ನು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದ್ದೆವೇ ಎಂದು ಭಾರತೀಯ ಕೆನಾನ್ ಸಂಸ್ಥೆಯ ಮುಖ್ಯಸ್ಥ ಕಾಜುಟಾಡಾ ಕೋಬಯಾಶಿ ಅವರು ತಿಳಿಸಿದ್ದಾರೆ.

Best Mobiles in India

English summary
Canon officially took the wraps of its budget full-frame camera — the EOS RP — and it hasn't taken Canon long to launch it in India.to know morevisit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X