ಅತ್ಯುತ್ತಮ Zoom ಸೌಲಭ್ಯ ಪಡೆದಿರುವ ಬೆಸ್ಟ್ ಕ್ಯಾಮೆರಾ ಫೋನ್‌ಗಳ ಲಿಸ್ಟ್ ಇಲ್ಲಿದೆ!
ಇಂದಿನ ಬಹುತೇಕ ಮೊಬೈಲ್‌ಗಳು ಅತ್ಯುತ್ತಮ ಕ್ಯಾಮೆರಾ ಆಯ್ಕೆ ಪಡೆದಿವೆ. ದುಬಾರಿ ಫೋನ್‌ಗಳಲ್ಲಿ ಅಷ್ಟೇ ಅಲ್ಲದೇ, ಬಜೆಟ್ ಬೆಲೆಯ ಮೊಬೈಲ್‌ಗಳಲ್ಲಿಯೂ ಉತ್ತಮ ಕ್ಯಾಮೆರಾ ಸೆನ್ಸಾರ್ ಸೌಲಭ್ಯ ಕಾಣಬಹುದಾಗಿದೆ. ಅದಾಗ್ಯೂ, ಕೆಲವು ಮೊಬೈಲ್ ಬ್ರ್ಯಾಂಡ್‌ಗಳು ಮೊಬೈಲ್ ಫೋಟೋಗ್ರಫಿ ಅನ್ನು ಇನ್ನಷ್ಟು ಉತ್ತಮಗೊಳಿಸಲು ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುತ್ತವೆ. ಇಂದಿನ ಕೆಲವು ಫೋನ್‌ಗಳಲ್ಲಿ ಅತ್ಯುತ್ತಮ ಜೂಮ್ (Zoom) ಸೌಲಭ್ಯ ಸಹ ಕಾಣಬಹುದಾಗಿದೆ.
ಹೌದು, ಡಿಎಸ್ಎಲ್‌ಆರ್ (DSLR) ಕ್ಯಾಮೆರಾಗಳಲ್ಲಿ ಇರುವಂತೆ ಮೊಬೈಲ್ ಫೋನ್‌ಗಳಲ್ಲಿ ಜೂಮ್ ನಿರೀಕ್ಷಿಸಲಾಗದು. ಅದಾಗ್ಯೂ, ಕೆಲವು ಮೊಬೈಲ್ ಬ್ರ್ಯಾಂಡ್‌ಗಳು ಮೊಬೈಲ್ ಫೋಟೋಗ್ರಫಿಗೆ ಸರಿಹೊಂದುವಂತಹ ಆಪ್ಟಿಕಲ್ ಜೂಮ್ ಆಯ್ಕೆ ನೀಡಿವೆ. ಮುಖ್ಯವಾಗಿ ಸ್ಯಾಮ್‌ಸಂಗ್, ಆಪಲ್ ಐಫೋನ್, ಹಾನರ್, ಒನ್‌ಪ್ಲಸ್ ಹಾಗೂ ವಿವೋದ ಕೆಲವು ಮೊಬೈಲ್‌ಗಳಲ್ಲಿ ಈ ಸೌಲಭ್ಯ ಕಾಣಬಹುದಾಗಿದೆ. ಹಾಗಾದರೇ ಜೂಮ್ ಸೌಲಭ್ಯದ ಕೆಲವು ಬೆಸ್ಟ್ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಒನ್‌ಪ್ಲಸ್ 12 (OnePlus 12)
ಒನ್‌ಪ್ಲಸ್ 12 (OnePlus 12) ಫೋನ್ 64 ಎಂಪಿ ಟೆಲಿಫೋಟೋ ಲೆನ್ಸ್ (f/2.6, 70 mm, 1/2" ಸೆನ್ಸಾರ್) ಪಡೆದಿದ್ದು, ಇದರ ಜೊತೆಗೆ 3x ಆಪ್ಟಿಕಲ್ ಜೂಮ್, ಆಟೋಫೋಕಸ್ ಮತ್ತು OIS ಸೌಲಭ್ಯ ಪಡೆದಿದೆ. ಇನ್ನು ಮುಂಭಾಗದಲ್ಲಿ, ಸೆಲ್ಫಿ ಕ್ಯಾಮರಾ 32ಎಂಪಿ ಆಗಿದೆ. ಇನ್ನು ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ 6.82 ಇಂಚಿನ QHD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1440 x 3168 ಪಿಕ್ಸೆಲ್ ಸ್ಕ್ರೀನ್ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಸ್ನ್ಯಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ (Samsung Galaxy S24 Ultra) ಮೊಬೈಲ್ 100x ಡಿಜಿಟಲ್ ಜೂಮ್ ಜೊತೆಗೆ 3x ಮತ್ತು 5x ಟೆಲಿಫೋಟೋ ಮತ್ತು ಪೆರಿಸ್ಕೋಪ್ ಲೆನ್ಸ್‌ಗಳನ್ನು ಲಾಸ್‌ಲೆಸ್ ಜೂಮ್‌ಗಾಗಿ ನೀಡುತ್ತದೆ. ಇನ್ನು ಇದು 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 3120 x 1440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 14 ಬೆಂಬಲದ ಜೊತೆಗೆ ರನ್ ಆಗಲಿದೆ.
ಇದರಲ್ಲಿ ಮೊದಲನೆ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ದ್ವಿತೀಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದ್ದು, ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ. ನಾಲ್ಕನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ವಿವೋ X100
ವಿವೋದ ಈ ಎಂಟ್ರಿ ಲೆವೆಲ್ ಫ್ಲ್ಯಾಗ್‌ಶಿಪ್ ಫೋನ್ 64ಎಂಪಿ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (70 mm, 1/2" ಸೆನ್ಸಾರ್) ಜೊತೆಗೆ 3x ಆಪ್ಟಿಕಲ್ ಜೂಮ್, f/2.6 ಅಪರ್ಚರ್, ಆಟೋಫೋಕಸ್ ಮತ್ತು OIS ಅನ್ನು ಹೊಂದಿದೆ. ಅಲ್ಲದೇ ಈ vivo X100 ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್ ಸೌಲಬ್ಯದ ಪವರ್ ಅನ್ನು ಪಡೆದಿದ್ದು, ಇದಕ್ಕೆ ಸಪೋರ್ಟ್ ಆಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ.


Click it and Unblock the Notifications








