Home
ಕ್ಯಾಮೆರಾ

ಅಗ್ಗದ ಬೆಲೆಯಲ್ಲಿ ಅತ್ಯುತ್ತಮ Selfie ಕ್ಯಾಮೆರಾ ಇರುವ ಫೋನ್‌ಗಳು ಇವೇ ನೋಡಿ!

ಪ್ರಸ್ತುತ ಬಿಡುಗಡೆ ಆಗುವ ಅನೇಕ ಮೊಬೈಲ್‌ಗಳಲ್ಲಿ ಉತ್ತಮ ಕ್ಯಾಮೆರಾ ಫೀಚರ್‌ ಕಾಣಬಹುದಾಗಿದೆ. ಹಾಗೆಯೇ ಹಿಂಬದಿಯ ರಿಯರ್‌ ಕ್ಯಾಮೆರಾ ಸೆನ್ಸಾರ್‌ ಜೊತೆಗೆ ಮುಂಭಾಗದ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಮೂಲಕ ಸೆಲ್ಫಿ ಪ್ರಿಯ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿವೆ. ಅದರಲ್ಲಿಯೂ ಸದ್ಯ ಕೆಲವು ಅಗ್ಗದ ದರದ ಫೋನ್‌ಗಳಲ್ಲಿ ಸಹ ಆಕರ್ಷಕ ಕ್ಯಾಮೆರಾ ಸೌಲಭ್ಯ ಲಭ್ಯ.

ಹೌದು, ಮಾರುಕಟ್ಟೆಯಲ್ಲಿ ಉತ್ತಮ ಸೆಲ್ಫಿ ಕ್ಯಾಮೆರಾ ಸೌಲಭ್ಯದ ಮೊಬೈಲ್‌ಗಳು ಹೆಚ್ಚಿನ ಬೇಡಿಕೆ ಪಡೆದಿವೆ. ಇನ್ನು ಬಹುತೇಕ ಗ್ರಾಹಕರು ಅವರ ಅನುಕೂಲಕ್ಕೆ ಸರಿ ಹೊಂದುವ ಮೊಬೈಲ್‌ ಖರೀದಿ ಮಾಡಿದರೂ ಸೆಲ್ಫಿ ಕ್ಯಾಮೆರಾ ಉತ್ತಮವಾಗಿರಲಿ ಎಂದು ಬಯಸುತ್ತಾರೆ. ವಿಶೇಷ ಅಂದ್ರೆ, ಇಂದಿನ ಕೆಲವು ಕಡಿಮೆ ದರದ ಫೋನ್‌ಗಳು ಸಹ ತಮ್ಮ ವಿಭಾಗದಲ್ಲೇ ಉತ್ತಮ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿವೆ. ಹಾಗಾದರೇ ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಉತ್ತಮ ಸೆಲ್ಫಿ ಕ್ಯಾಮೆರಾ ಸೌಲಭ್ಯದ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಅಗ್ಗದ ಬೆಲೆಯಲ್ಲಿ ಅತ್ಯುತ್ತಮ Selfie ಕ್ಯಾಮೆರಾ ಇರುವ ಫೋನ್‌ಗಳು ಇವೇ ನೋಡಿ!

ರೆಡ್ಮಿ 13 5G ಮೊಬೈಲ್‌

ರೆಡ್ಮಿ 13 5G ಫೋನ್‌ ಮೂರು ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಆಗಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಅಂದಹಾಗೆ ಇದು 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6080SoC ಪ್ರೊಸೆಸರ್ನಲ್ಲಿ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ.

ಮೊಟೊರೊಲಾ g14 ಮೊಬೈಲ್‌

ಮೊಟೊರೊಲಾ g14 ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಹಾಗೆಯೇ ಈ ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇ 2400×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಯುನಿಸೋಕ್‌ T616 SoC ಪ್ರೊಸೆಸರ್‌ ಪವರ್‌ ಸೌಲಭ್ಯ ಸಹ ಪಡೆದಿದೆ. ಅಲ್ಲದೇ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಪೊಕೊ C65 ಮೊಬೈಲ್‌

ಪೊಕೊ ಕಂಪನಿಯ ಈ ಮೊಬೈಲ್‌ ಡ್ಯುಯಲ್‌ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ ಮುಖ್ಯ ಸೆನ್ಸರ್‌ ಆಗಿದ್ದು, ಉಳಿದಂತೆ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ + ಎಐ ಲೆನ್ಸ್‌ನೊಂದಿಗೆ ಆಯ್ಕೆ ಪಡೆದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.

ಇನ್ನು ಈ ಫೋನ್‌ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1650 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದುಕೊಂಡಿದೆ.

Best Mobiles in India

English summary
Few Best Selfie Mobiles Under Rs 10,000 in October 2024. check mobile list, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+