ಬರಲಿದೆ ಫುಜಿಫಿಲ್ಮ್ ಕಂಪನಿಯ ಹೊಸ ಕ್ಯಾಮೆರಾ.! ಹೇಗಿದೆ ಗೊತ್ತಾ?
ಕ್ಯಾಮೆರಾಗಳ ಲೋಕವಿಂದು ಸಂಪೂರ್ಣ ಕಲರ್‌ಫುಲ್ ಆಗಿದ್ದು, ಅತೀ ನೂತನ ಫೀಚರ್ಸ್‌ಗಳನ್ನು ನೀವು ಕಾಣಬಹುದು. ಪ್ರಮುಖ ಎಲ್ಲ ಕ್ಯಾಮೆರಾ ಕಂಪನಿಗಳು ಸಾಕಷ್ಟು ಹೊಸತನದ ಫೀಚರ್ಸ್‌ಗಳಲ್ಲಿ ದೊರೆಯುತ್ತಿವೆ. ಅವುಗಳಲ್ಲಿ ಜನಪ್ರಿಯ 'ಫುಜಿಫಿಲ್ಮ್' ಕಂಪನಿಯು ಸಹ ಒಂದು. ವಿಶ್ವಮಟ್ಟದಲ್ಲಿ ತನ್ನ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳಿಂದ ಹೆಸರುವಾಸಿ ಆಗಿರುವ 'ಫುಜಿಫಿಲ್ಮ್' ಕಂಪನಿಯು ಇದೀಗ ಕ್ಯಾಮೆರಾ ಪ್ರಿಯರಿಗೆ ಗುಡ್‌ನ್ಯೂಸ್ ಒಂದನ್ನು ನೀಡಿದೆ.

ಹೌದು, ಜನಪ್ರಿಯ ಫುಜಿಫಿಲ್ಮ್ ಕ್ಯಾಮೆರಾ ಕಂಪನಿಯು 'X-T30' ಹೆಸರಿನ ಚಿಕ್ಕ ಕ್ಯಾಮೆರಾವನ್ನು ಪರಿಚಯಿಸುವ ಮಾಹಿತಿಯನ್ನು ಕಂಪನಿ ಹೊರಹಾಕಿದೆ. ಕಂಪನಿಯು ಈ ಹಿಂದೆ ಬಿಡುಗಡೆ ಮಾಡಿದ್ದ 'ಮಿರರ್ ಲೆಸ್ X-T20' ಕ್ಯಾಮೆರಾದ ಮುಂದುವರಿದ ಭಾಗವಾಗಿದೆ. ಹೊಸ 'X-T30' ಕ್ಯಾಮೆರಾವು CMOS 4 APS-C ಸೆನ್ಸಾರ್ ನೊಂದಿಗೆ, 26.1 ಮೆಗಾಪಿಕ್ಸಲ್ ಸಾಮರ್ಥ್ಯದ ಬ್ಲ್ಯಾಕ್ ಇಲ್ಯೂಮಿನೆಟೆಡ್ ಕ್ಯಾಮೆರಾ ಹೊಂದಿರಲಿದೆ ಎಂದು ಹೇಳಲಾಗಿದೆ.

ಫುಜಿಫಿಲ್ಮ್ ನ ನೂತನ X-T30 ಕ್ಯಾಮೆರಾದಲ್ಲಿ 4K ಗುಣಮಟ್ಟದ ವಿಡಿಯೋ ರೇಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಸ್ಥಿರವಿಲ್ಲದ ರನ್ನಿಂಗ್ ಚಿತ್ರಗಳನ್ನು ಸೆರೆಹಿಡಿಯಲು ಸ್ಪೋರ್ಟ್ಸ್ ಫೈಂಡರ್ ಮೋಡ್ ಆಯ್ಕೆಯನ್ನು ನೀಡಲಾಗಿದೆ. ಈ ಆಯ್ಕೆಯಲ್ಲಿ 30fps ವೇಗದಲ್ಲಿ ಚಿತ್ರಗಳು ಸೆರೆಯಾಗಲಿದ್ದು, ಎಲೆಕ್ಟ್ರಾನಿಕ್ ಶಟರ್ ಮತ್ತು ಕ್ಯಾಮೆರಾಗಳಲ್ಲಿ ಇತ್ತೀಚಿನ ಹೊಸ ಮೊನೊಕ್ರೋಮ್ ಆಯ್ಕೆಗಳನ್ನು ಸಹ ಕಾಣಬಹುದಾಗಿದೆ. ಇದರೊಂದಿಗೆ ಫುಜಿಫಿಲ್ಮ್ 'X-T30' ಕ್ಯಾಮೆರಾವು ಇತರೆ ಏನೆಲ್ಲಾ ಹೊಸತನದ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿ.

CMOS 4 ಸೆನ್ಸಾರ್
ಫುಜಿಫಿಲ್ಮ್ X-T30 ಹೊಸ ಕ್ಯಾಮೆರಾದಲ್ಲಿ CMOS 4 ಸೆನ್ಸಾರ್ ಅನ್ನು ಪರಿಚಯಿಸಿದ್ದು, ಇದು ಅಸ್ಥಿರ ಚಿತ್ರಗಳನ್ನು ಅಂದರೇ ಚಲಿಸುತ್ತಿರುವ ವ್ಯಕ್ತಿ ಅಥವಾ ವಸ್ತುವಾಗಳ ಚಿತ್ರವನ್ನು ಅತೀ ಸ್ಪಷ್ಟವಾಗಿ ಸೆರೆಹಿಡಿಯಬಹುದು. ವಸ್ತುವು ಎಷ್ಟೆ ವೇಗದಲ್ಲಿದ್ದರು ಚಿತ್ರಗಳು ಉತ್ತಮವಾಗಿ ಮೂಡಿಬರಲಿವೆ. ಇದರೊಂದಿಗೆ ಕ್ಯಾಮೆರಾ ಸೆರೆಹಿಡಿಯುವವರ ಕೈಚಳಕವು ಬೇಕು.

ಕ್ಯಾಮೆರಾದ ರಚನೆ
'X-T30' ಕ್ಯಾಮೆರಾವು ಕಂಫರ್ಟ್ ಗಾತ್ರದ ಕ್ಯಾಮೆರಾ ಆಗಿದ್ದು, ಸಿಲ್ವರ್ ಮತ್ತು ಬ್ಲ್ಯಾಕ್ ಬಣ್ಣಗಳ ಸಮ್ಮಿಶ್ರಣದಲ್ಲಿ ಕಾಣುವ ಈ ಕ್ಯಾಮೆರಾವು ಅತೀ ಆಕರ್ಷಕ ನೋಟವನ್ನು ಹೊಂದಿದೆ. ಕ್ಯಾಮೆರಾ ಮುಂದೆ ಎಕ್ಸ್‌ಟ್ರಾ ಲೆನ್ಸ್ ಜೋಡಿಸಿಕೊಳ್ಳಲು ಅವಕಾಶ ಇರಲಿದೆ.

ಕ್ಯಾಮೆರಾ ವ್ಯೂ ಫೈಂಡರ್
ಫುಜಿಫಿಲ್ಮ್‌ಕಂಪನಿಯ ನೂತನ X-T30 ಕ್ಯಾಮೆರಾವು ಸಾಕಷ್ಟು ಹೊಸತನಗಳನ್ನು ಒಳಗೊಂದಿದ್ದು, ಇದರಲ್ಲಿ ನೀಡಲಾಗಿರುವ 2.36 ಮಿಲಿಯನ್ ಎಲೆಕ್ಟ್ರಾನಿಕ್ ಡಾಟ್‌ಗಳು ಕ್ಯಾಮೆರಾದ ವ್ಯೂ ಫೈಂಡರ್ ಅನ್ನು 800cd/m2 ರಷ್ಟು ಹೆಚ್ಚು ಪ್ರಕಾಶಮಾನವಾಗಿಸಿದೆ. ಬೂಸ್ಟ್ ಮೋಡ್ ಆಯ್ಕೆ ಮಾಡಿದಾಗ 100fps ಸಾಮರ್ಥ್ಯದಲ್ಲಿ ಫೋಟೋ ಕ್ವಾಲಿಟಿ ದ್ರವತೆ ಉತ್ತಮವಾಗಿರಲಿದೆ.

ಕ್ಯಾಮೆರಾ ಡಿಸ್‌ಪ್ಲೇ
X-T30 ಕ್ಯಾಮೆರಾವು 3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಟಚ್‌ಸ್ಕ್ರೀನ್ LCD ಮಾದರಿಯ ಡಿಸ್‌ಪ್ಲೇ ಆಗಿರಲಿದೆ. ಕಂಪನಿಯ ಜನಪ್ರಿಯ X-T20 ಕ್ಯಾಮೆರಾದ ಡಿಸ್‌ಪ್ಲೇ ಗಿಂತ ಶೇ.10 ರಷ್ಟು ಹೊಸ 'X-T30' ಕ್ಯಾಮೆರಾದ ಡಿಸ್‌ಪ್ಲೇ ತಿಳುವಾಗಿದೆ. ಡಿಸ್‌ಪ್ಲೇ ಕ್ವಾಲಿಟಿಯು ಉತ್ತಮವಾಗಿದೆ

ಮೆಮೊರಿ
'X-T30' ಕ್ಯಾಮೆರಾದಲ್ಲಿ ಚಿತ್ರಗಳನ್ನು ಮತ್ತು ವಿಡಿಯೋವನ್ನು ಸೆರೆಹಿಡಿಯಲು 8 ಬಿಟ್ ಸಾಮರ್ಥ್ಯದ SDHC ಅಥವಾ SDXC ಮೆಮೊರಿ ಕಾರ್ಡ್ ಅನ್ನು ಬಳಸಬೇಕು. ಅತ್ಯುತ್ತಮ ಸ್ಟೋರೆಜ್ ಸಾಮರ್ಥ್ಯ ವಿರುವ ಎಸ್‌ಡಿ ಕಾರ್ಡ್ ಬಳಕೆ ಉತ್ತಮ. ಏಕೆಂದರೇ ಫೋಟೋ ಮತ್ತು ವಿಡಿಯೋಗಳ ರೆಸಲ್ಯೂಶನ್ ಹೈ ಕ್ವಾಲಿಟಿಯಲ್ಲಿರಲಿದ್ದು, ಡಾಟಾ ಗಾತ್ರ ದೊಡ್ಡದಾಗಿರುತ್ತದೆ.

ಬೆಲೆ ಮತ್ತು ಲಭ್ಯತೆ
ಫುಜಿಫಿಲ್ಮ್ X-T30 ಕ್ಯಾಮೆರಾವು ಇದೇ ಮಾರ್ಚ್ 20 ಕ್ಕೆ UK ಮಾರುಕಟ್ಟೆಯಲ್ಲಿ ರಿಲೀಸ್ ಆಗಲಿದ್ದು, UKಯಲ್ಲಿ ಲೆನ್ಸ್ ರಹಿತವಾದ ಈ ಕ್ಯಾಮೆರಾ ಬೆಲೆ £849 (77,400ರೂ.ಗಳು). ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ಎನ್ನುವ ಬಗ್ಗೆ ಕಂಪನಿಯಿಂದ ಮಾಹಿತಿ ಲಭ್ಯವಿಲ್ಲ.


Click it and Unblock the Notifications








