ಕ್ಯಾಮೆರಾದಲ್ಲಿ 'ಮೋಷನ್‌ ಬ್ಲರ್‌' ಫೋಟೊ ಹೀಗೆ ಕ್ಲಿಕ್ಕ್ ಮಾಡಿ!

|

ಮಾರುಕಟ್ಟೆಯಲ್ಲಿ ಅತ್ಯುತ್ತಮ ಕ್ಯಾಮೆರಾಗಳು ಲಗ್ಗೆ ಇಡುತ್ತಿದ್ದು, ನೂತನ ತಂತ್ರಜ್ಞಾನದ ಫೀಚರ್ಸ್‌ಗಳನ್ನು ಅವು ಹೊಂದಿವೆ. ಫೋಟೊಗಳನ್ನು ಮತ್ತಷ್ಟು ಸುಂದರವಾಗಿಸಲು ವಿಶೇಷ ಲೆನ್ಸ್‌ಗಳು ಕ್ಯಾಮೆರಾಗೆ ಸಾಥ ನೀಡುತ್ತಿವೆ. ಫೋಟೊಗಳಲ್ಲಿಗ ಕ್ಯಾಂಡಿಡ್‌ ಫೋಟೊಗ್ರಾಫಿ, ಬ್ಯಾಕ್‌ಗ್ರೌಂಡ್‌ ಬ್ಲರ್‌ ಹೀಗೆ ಹಲವು ಆಯಾಮಗಳು ಈಗ ಟ್ರೆಂಡ್‌ನಲ್ಲಿವೆ. ಇವುಗಳೊಂದಿಗೆ ಮೋಷನ್‌ ಬ್ಲರ್‌ ಸಹ ಆಕರ್ಷಕ ಎನಿಸುತ್ತಿದೆ.

ಕ್ಯಾಮೆರಾದಲ್ಲಿ 'ಮೋಷನ್‌ ಬ್ಲರ್‌' ಫೋಟೊ ಹೀಗೆ ಕ್ಲಿಕ್ಕ್ ಮಾಡಿ!

ಕ್ಯಾಮೆರಾಗಳಲ್ಲಿ ಹೊಸ ತರಹದ ಫೋಟೊ ಕ್ಲಿಕ್ಕ್ ಮಾಡುವುದು ಒಂದು ಆಸಕ್ತಿದಾಯಕ ಕಲೆ ಆಗಿದ್ದು, ಇರುವ ವಸ್ತುವನ್ನೆ ಭಿನ್ನವಾಗಿ ಸೆರೆಹಿಡಿಯುವ ದೃಷ್ಠಿಕೋನ ಛಾಯಾಚಿತ್ರಗಾರನಲ್ಲಿ ಇರಬೇಕು. ಇದೀಗ ಮೋಷನ್‌ ಫೋಟೊಗಳನ್ನು ಸೆರೆಹಿಡಿಯುತ್ತಿರುವುದು ಸಹ ಹೆಚ್ಚು ಗಮನಸೆಳೆಯುತ್ತಿದ್ದು, ಅದಕ್ಕೆ ಅತ್ಯುತ್ತಮ ಕ್ಯಾಮೆರಾಗಳು ಮತ್ತು ಕ್ರಿಯೆಟಿವಿಟಿಯು ಬೇಕಾಗಿರುತ್ತದೆ. Intentional Camera Movement(ICM) ಟೆಕ್ನಿಕ್‌ಗಳನ್ನು ಬಳಸಬಹುದಾಗಿದೆ. ಹಾಗಾದರೇ ಮೋಷನ್‌ ಬ್ಲರ್‌ ಫೋಟೊ ಹೇಗೆ ಸೆರೆಹಿಡಿಯುವುದು ಎಂಬ ಕೆಲವು ವಿಧಾನಗಳನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಸದ್ಯದಲ್ಲೇ ಶಿಯೋಮಿ ಲಾಂಚ್ ಮಾಡಲಿದೆ ಎರಡು ಹೊಸ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌! ಓದಿರಿ : ಸದ್ಯದಲ್ಲೇ ಶಿಯೋಮಿ ಲಾಂಚ್ ಮಾಡಲಿದೆ ಎರಡು ಹೊಸ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌!

ICM ಟೆಕ್ನಿಕ್

ICM ಟೆಕ್ನಿಕ್

ಕ್ಯಾಮೆರಾದಲ್ಲಿ ICM(Intentional Camera Movement)ಸೆಟ್ಟಿಂಗ್‌ ಮಾಡುವ ಮೂಲಕ ಕ್ಯಾಮರಾ ಚಲನೆಯಲ್ಲಿ ಮೋಷನ್‌ ಬ್ಲರ್‌ ಫೋಟೊಗಳನ್ನು ಸೆರೆಹಿಡಿಯಬಹುದಾಗಿದೆ. ಈ ವಿಧಾನಗಳನ್ನು ಬಳಸಿದರೇ ಖಾತರಿ ಫಲಿತಾಂಶಗಳನ್ನು ಸೀಗಲಿದೆ. ಈ ತಂತ್ರವನ್ನು ಬಳಸಿಕೊಂಡು ನೀವು ವಿಶ್ವಾಸ ಮತ್ತು ಅನುಭವವನ್ನು ಪಡೆದುಕೊಳ್ಳುವುದರಿಂದ, ನಿಧಾನವಾಗಿ ಶಟರ್ ಸ್ಪೀಡ್‌ ಅನ್ನು ನಿಧಾನವಾಗಿ ಪ್ರಯೋಗಿಸುವ ಪ್ರಯತ್ನಗಳನ್ನು ಮಾಡಿ ಈ ಕೌಶಲ್ಯವನ್ನು ರೂಡಿಸಿಕೊಳ್ಳಬಹುದು.

ಟ್ರಾಯ್‌ಪಾಡ್‌ ಬಳಸಿ

ಟ್ರಾಯ್‌ಪಾಡ್‌ ಬಳಸಿ

ಈ ವಿಧಾನದಲ್ಲಿ ಕ್ಯಾಮೆರಾವನ್ನು ಟ್ರಾಯಪಾಡ್‌ಗೆ ಜೋಡಿಸಿಕೊಂಡು, ಮೋಷನ್‌ ಬ್ಲರ್‌ ಚಿತ್ರ ಸೆರೆಹಿಡಿಯುವುದಾಗಿದೆ. ವರ್ಟಿಕಲ್‌ ಆಗಿ ಬ್ಲರ್‌ ಫೋಟೊ ಸೆರೆಹಿಡಿಯುತ್ತಿದ್ದರೆ ಆಗ ಹಾರಿಜಂಟಲ್‌ ಆಂಗಲ್‌ನಲ್ಲಿ ಕ್ಯಾಮೆರಾ ಚಲನೆ ಮಾಡಬೇಡಿ. ಶಟರ್ ಕ್ಲಿಕ್ಕ್ ಮಾಡುವ ಮೂಲಕ ಮೊಷನ್ ಬ್ಲರ್‌ ಫೋಟೊ ಸೆರೆಹಿಡಿಯಬಹುದು, ಜಾಸ್ತಿ ಬ್ಲರ್‌ ಆದರೆ ಪೋಟೊ ಉತ್ತಮವಾಗಿ ಬರುವುದಿಲ್ಲ.

ಕ್ಯಾಮೆರಾ ಸೆಟ್ಟಿಂಗ್

ಕ್ಯಾಮೆರಾ ಸೆಟ್ಟಿಂಗ್

ಕ್ಯಾಮೆರಾದಲ್ಲಿ ಸೆಟ್ಟಿಂಗ್ ಮಾಡುವ ಮೂಲಕವು ಮೊಷನ್‌ ಫೋಟೋ ಸೆರೆಹಿಡಿಯಬಹುದಾಗಿದ್ದು, ಈ ವಿಧಾನವು ಉತ್ತಮ ಫಲಿತಾಂಶ ನೀಡಲಿದೆ. ಅಗತ್ಯಕ್ಕೆ ತಕ್ಕಹಾಗೆ ಶಟರ್ ವೇಗವನ್ನು 1/8 sec ಮತ್ತು 1/15 ನಡುವೆ ಸೆಟ್ಟ ಮಾಡುವುದು. ಅಥವಾ 1/10 sec ಮಾಡಬಹುದು. ISO ಆಟೋ ಸೆಟ್ಟ್ ಮಾಡುವುದು ಇದು ಅಪರ್ಚರ್ ಗಮನಿಸಿಕೊಳ್ಳಲಿದೆ. ನಂತರ ಪೋಟೊ ಸೆರೆಹಿಡಿಯಲು ಮುಂದಾಗಿ.

ಇನ್‌ ಕ್ಯಾಮೆರಾ ಮೂವ್‌ಮೆಂಟ್

ಇನ್‌ ಕ್ಯಾಮೆರಾ ಮೂವ್‌ಮೆಂಟ್

ಈ ವಿಧಾನದಲ್ಲಿ ಕ್ಯಾಮೆರಾ ಮತ್ತು ಲೆನ್ಸ್‌ಗಳ ಸ್ಥಿರತೆ ಹಾಗೂ ಚಲನೆಗಳು ಮುಖ್ಯವಾಗಿದ್ದು, ಉತ್ತಮ ಹಿಡಿತವಿರಲಿ. ವಸ್ತುವುನ ಮೇಲೆ ಆಟೊ ಫೋಕಸ್‌ ಮಾಡಿ ಶಟರ್‌ ಬಟನ್ ಹಾಫ್‌ ಹೋಲ್ಡ್‌ ಮಾಡಿಕೊಂಡು, ಝೂಮ್‌ ರಿಂಗ್‌ ಬಳಸಿ ಮೂವಮೆಂಟ್‌ ಮಾಡಬೇಕು. ಹೀಗೆ ಮಾಡುತ್ತಾ ಶಟರ್‌ಅನ್ನು ರಿಲೀಸ್‌ ಮಾಡಿದರೇ ಬ್ಲರ್‌ ಫೋಟೊ ಮೂಡಿಬರಲಿದೆ. ಆದರೆ ಪ್ರಾಕ್ಟಿಸ್‌ ಬೇಕು.

Best Mobiles in India

English summary
How to create motion blur in-camera.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X