ನಿಕಾನ್ ಫಿಲ್ಮೀ ಕಿಟ್ ಕ್ಯಾಮರಾ ಬಿಡುಗಡೆ ಸಿದ್ಧ!..ಬೆಲೆ ಎಷ್ಟು?

|

ಕ್ಯಾಮರಾದ ಬಗ್ಗೆ ಆಸಕ್ತಿ ಇರುವ ಯಾರಿಗೆ ತಾನೆ ನಿಕಾನ್ ಕಂಪನಿ ಬಗ್ಗೆ ಗೊತ್ತಿಲ್ಲ ಹೇಳಿ. ಜನಪ್ರಿಯ ನಿಕಾನ್ ನೂತನ ಆವಿಸ್ಕಾರಗಳನ್ನು ಕ್ಯಾಮರಾ ಲೋಕದಲ್ಲಿ ನಡೆಸುತ್ತಾ ಬಂದಿದೆ. ಹಾಗಾಗಿ, ಕ್ಯಾಮರಾ ಪ್ರಿಯರಿಗೆ ನೆಚ್ಚಿನ ಕಂಪನಿ ಎಂದೆ ಹೇಳಬಹುದು. ಆದರೆ ಇಂದಿನ ವಿಷಯವೇನೆಂದರೆ, ನಿಕಾನ್ ಕಂಪೆನಿ ತನ್ನ ಆವಿಸ್ಕಾರಗಳ ಪಟ್ಟಿಗೆ ಹೊಸ ಸೆರ್ಪಡೆಯೊಂದನ್ನು ಮಾಡಿದೆ. ತನ್ನ ಜನಪ್ರಿಯ ಕ್ಯಾಮರಾ ಮಾದರಿ 'ನಿಕಾನ್ Z6' ಗೆ ಹೊಸ 'ಫಿಲ್ಮ್ ಮೇಕರ್ ಕಿಟ್‌'ನ್ನು ಕಂಪೆನಿ ಪರಿಚಯಿಸುತ್ತಿದೆ.

ನಿಕಾನ್ ಫಿಲ್ಮೀ ಕಿಟ್ ಕ್ಯಾಮರಾ ಬಿಡುಗಡೆ ಸಿದ್ಧ!..ಬೆಲೆ ಎಷ್ಟು?

ಫೋಟೋಗ್ರಫಿಯನ್ನು ಮತ್ತು ವಿಡಿಯೋಗ್ರಫಿಯನ್ನು ಇಂದು ಬಹುತೇಕ ಎಲ್ಲರು ಇಷ್ಟ ಪಡುತ್ತಾರೆ. ಕ್ಯಾಮರಾಗಳ ಮೂಲಕವೇ ಶಾರ್ಟ್‌ಫೀಲ್ಮಗಳನ್ನು ಮಾಡುತ್ತಿದ್ದಾರೆ. ಈ ಅಂಶಗಳನ್ನು ನಿಕಾನ್ ಆಧಾರವಾಗಿಸಿಕೊಂಡು ಹೊಸ ಕ್ಯಾಮರಾ ಫಿಲ್ಮೀ ಕಿಟ್ ಬಿಡುಗಡೆ ಮಾಡುತ್ತಿದೆ. ಹಾಗಾದರೆ, ಈ ಹೊಸ ನಿಕಾನ್ Z6 ಫಿಲ್ಮ್ ಮೇಕರ್ ಕಿಟ್‌ ಏಕೆ ಫಿಲ್ಮೀ ವಿಡಿಯೋ ಮಾಡುವವರ ಗಮನಸೆಳೆದಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ನಿಕಾನ್ ಫಿಲ್ಮೀ ಕಿಟ್ ಕ್ಯಾಮರಾ ಬಿಡುಗಡೆ ಸಿದ್ಧ!..ಬೆಲೆ ಎಷ್ಟು?

ಫಿಲ್ಮೀ ಕಿಟ್‌ನಲ್ಲಿ ಎನೇಲ್ಲಾ ಇರಲಿವೆ...

* ನಿಕಾನ್ Z6 ಕ್ಯಾಮರಾ ಬಾಡಿ.
* Z 24-70mm f / 4 ಎಸ್ ಲೆನ್ಸ್.
* ಮೌಂಟ್ ಅಡಾಪ್ಟರ್ ಎಫ್ಟಿಝಡ್.
* ಅಟೊಮಸ್ ನಿಂಜಾ ವಿ 4 ಕೆ ಎಚ್ಡಿಆರ್ 5.0 ಇಂಚಿನ ಮಾನಿಟರ್ ರೆಕಾರ್ಡರ್.
* ರೋಡ್ ವಿಡಿಯೊಮಿಕ್ ಪ್ರೊ +, ಮೊಝಾ ಏರ್ 2 3-ಆಕ್ಸಿಸ್ ಹ್ಯಾಂಡ್-ಹೆಲ್ಪ್ ಗಿಂಬಲ್ ಸ್ಟೇಬಿಲೈಜರ್,
* EL15b ಬ್ಯಾಟರಿ ಮತ್ತು ಸುರುಳಿಯಾಕಾರದ HDMI ಕೇಬಲ್.

ಈ ಫಿಲ್ಮೀ ಕಿಟ್ ಭಾರತದಲ್ಲಿ ಲಭ್ಯನಾ..?
ಹಾಗಾದರೇ ಅನೇಕ ವಿಶೇಷತೆಗಳನ್ನು ಒಳಗೊಂಡ ಈ 'ನಿಕಾನ್ Z6 ಫಿಲ್ಮೀ ಕಿಟ್, ಭಾರತದಲ್ಲಿ ಲಭ್ಯನಾ..? ಎಂದು ನೋಡುವುದಾದರೇ, 'ನಿಕಾನ್ Z6 ಫಿಲ್ಮೀ ಕಿಟ್‌'ನ್ನು ಈ ವರ್ಷದ ಮೊದಲಾರಂಭದಲ್ಲಿ US ನಲ್ಲಿ ಬಿಡುಗಡೆ ಮಾಡುವುದಾಗಿ ನಿಕಾನ್ ಸಂಸ್ಥೆ ತಿಳಿಸಿದೆ. USನಲ್ಲಿ ಇದರ ಬೆಲೆ $ 3,999.95 ಇರಲಿದೆ. ಅಂದರೆ, ನಮ್ಮ ರೂಪಾಯಿ ಮೌಲ್ಯದಲ್ಲಿ 2,80,016.50ರೂಪಾಯಿಗಳಾಗಿವೆ. ಆದರೆ, ಭಾರತದಲ್ಲಿ ಈ ಫಿಲ್ಮೀ ಕಿಟ್ ಬಿಡುಗಡೆಯ ಬಗ್ಗೆ ನಿಕಾನ್ ಇನ್ನೂ ಮಾಹಿತಿ ನೀಡಿಲ್ಲ.

Best Mobiles in India

English summary
It also unveiled an ultra-wide 14-30mm f/4 zoom for the Z-Mount .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X