ಅತ್ಯಾಧುನಿಕ ಸೋಲಾರ್ ಆಧಾರಿತ ಸಿಸಿಟಿವಿ ಮಾರುಕಟ್ಟೆಗೆ: ಫೀಚರ್‌ಗಳೇನು?

Written By:

ಇದೆ ಮೊದಲ ಬಾರಿ ಅತ್ಯಾಧುನಿಕ ಸೋಲಾರ್ ಆಧಾರಿತ 2 Mg ಪಿಕ್ಸೆಲ್ ಸಿಸಿಟಿವಿ ಕ್ಯಾಮೆರಾ ಒಂದು ಬಿಡುಗಡೆಯಾಗಿದೆ. ಎಲೆಕ್ಟ್ರಾನಿಕ್ ಸೆಕ್ಯುರಿಟಿ ಸಲ್ಯೂಶನ್ ಕಂಪೆನಿ ಎಎನ್‌ಜಿ ಇಂಡಿಯಾ ಲಿಮಿಟೆಡ್ (AnG) ಸಂಸ್ಥೆ ಈ ಸಿಸಿಟಿವಿ ಕ್ಯಾಮೆರಾ ವಿನ್ಯಾಸ ಮಾಡಿದ್ದು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

"SC-IE20SP-V212R30" ಎಂಬ ಹೆಸರಿನ ನೂತನ ಸಿಸಿಟಿವಿ ವೈರ್‌ಲೆಸ್ ಡಿಜಿಟಲ್ ಸೆನ್ಸಾರ್‌ ಒಳಗೊಂಡಿದ್ದು, 1080ಪಿಕ್ಸೆಲ್ ನಲ್ಲಿ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲಿದೆ. ಇನ್ನು ಬ್ಯಾಟರಿ ಒಮ್ಮೆ ಚಾರ್ಜ್ ಆದರೆ ಎರಡು ದಿನಗಳ ಪೂರ್ತಿ ಚಾರ್ಜ್ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಅತ್ಯಾಧುನಿಕ ಸೋಲಾರ್ ಆಧಾರಿತ ಸಿಸಿಟಿವಿ ಮಾರುಕಟ್ಟೆಗೆ: ಫೀಚರ್‌ಗಳೇನು?

ಅತ್ಯುತ್ತಮ ಸೆಲ್ಫಿ ತೆಗೆಯಲು ಇರುವ ಟಾಪ್ 5 ಸೆಲ್ಫಿ ಆಪ್‌!!

ನೂತನ ಸಿಸಿಟಿವಿ ಕ್ಯಾಮೆರಾ ರಿಮೊಟ್ ಕಂಟ್ರೊಲ್ ಕಾನ್‌ಫಿಗರೇಷನ್ ಸಿಸ್ಟಮ್ ಹೊಂದಿದ್ದು, ಮೋಷನ್ ಡೈರೆಕ್ಷನ್ ಅಲಾರಾಂ ಫೀಚರ್‌ ಹೊಂದಿದೆ. 2G, 3G ಡಾಟಾ ನೆಟ್‌ವರ್ಕ್ ಗಳಲ್ಲೂ ಸಿಸಿಟಿವಿ ಕ್ಯಾಮೆರಾ ವಿಡಿಯೋಗಳು ಸ್ಮಾರ್ಟ್‌ಫೋನ್‌ಗೆ ತಲುಪುತ್ತವೆ ಎನ್ನಲಾಗಿದೆ.

ಅತ್ಯಾಧುನಿಕ ಸೋಲಾರ್ ಆಧಾರಿತ ಸಿಸಿಟಿವಿ ಮಾರುಕಟ್ಟೆಗೆ: ಫೀಚರ್‌ಗಳೇನು?

ಪರಿಸರ ಸ್ನೇಹಿತವಾಗಿರುವ ಈ ಸಿಸಿಟಿವಿ ಕಡಿಮೆ ಖರ್ಚನಲ್ಲಿ ಹೆಚ್ಚು ಕಾಯ ನಿರ್ವಹಿಸುವ ಸಾಧನ. ಇದು ವೈರ್‌ಲೆಸ್ ಸೆಕ್ಯುರಿಟಿ ಸಿಸ್ಟಮ್ ಹೊಂದಿದ್ದು, ಈ ಟೆಕ್ನಾಲಜಿ ಮೂಲಕ ಬಹುದೂರದಿಂದ ಸಿಸಿಟಿವಿ ಕಾರ್ಯ ನಿರ್ವಹಣೆಯನ್ನು ನಿರ್ವಹಿಸಬಹುದು ಎಂದು ಎಎನ್‌ಜಿಯ ನಿರ್ದೇಶಕ ಪುಲ್ಕಿತ್ ಪುನ್ಜ್ ತಿಳಿಸುತ್ತಾರೆ.

ಅತ್ಯಾಧುನಿಕ ಸೋಲಾರ್ ಆಧಾರಿತ ಸಿಸಿಟಿವಿ ಮಾರುಕಟ್ಟೆಗೆ: ಫೀಚರ್‌ಗಳೇನು?

ಇನ್ನು ಮಾರುಕಟ್ಟೆಯಲ್ಲಿ ಇದರ ಬೆಲೆ 65,000 ರೂಪಾಯಿಗಳಾಗಿದ್ದು, ಒಮ್ಮೆ ಖರ್ಚು ಮಾಡಿದರೆ ಬಹುಕಾಲ ಭಾಳಿಕೆ ಬರುವಂತಹ ಮತ್ತು ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯುವ ಈ ಸಿಸಿಟಿವಿಯನ್ನು ಉತ್ತಮ ಸುರಕ್ಷತೆಗಾಗಿ ಖರೀದಿಸಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿEnglish summary
The cctv camera supports Android, ioS and BB platforms To Know More Visit to Kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot