ಅತ್ಯುತ್ತಮ ಸೆಲ್ಫಿ ತೆಗೆಯಲು ಇರುವ ಟಾಪ್ 5 ಸೆಲ್ಫಿ ಆಪ್‌!!

Written By:

ದಿನಕ್ಕೆ ಹತ್ತಾರು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡದಿದ್ದರೆ ಇಂದಿನ ಯುವಜನತೆಯ ದಿನ ಮುಗಿಯದು. ಹಾಗಾಗಿಯೇ, ಮೊಬೈಲ್‌ ಕಂಪೆನಿಗಳು ಅತ್ಯುತ್ತಮ ಗುಣಮಟ್ಟದ ಸೆಲ್ಫಿ ಕ್ಯಾಮೆರಾ ಇರುವ ಸ್ಮಾರ್ಟ್‌ಫೊನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ!

ಅತ್ಯುತ್ತಮ ಸೆಲ್ಫಿ ಕ್ಯಾಮೆರಾ, ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾದ ಸ್ಮಾರ್ಟ್‌ಫೊನ್‌ಗಳು ಇತ್ತೀಚಿಗೆ ಮಾರುಕಟ್ಟೆಗೆ ಬರುತ್ತಿವೆ. ಆದರೆ, ಅವುಗಳ ಬೆಲೆ ನೋಡಿದರೆ ಖರೀದಿಸಲು ಸಾಧ್ಯವಿಲ್ಲಾ! ಹಾಗಾಗಿ, ಇರುವಂತಹ ಸ್ಮಾರ್ಟ್‌ಫೊನ್‌ಗಳಲ್ಲಿಯೇ ಕೇವಲ ಆಂಡ್ರಾಯ್ಡ್ ಆಪ್ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಉತ್ತಮ ಚಿತ್ರ ತೆಗೆಯಬಹುದು!!

ಗೋಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಸಿಗುವಂತಹ ಸಾವಿರಾರು ಸೆಲ್ಫಿ ಆಪ್‌ಗಳು ಇವೆ. ಅವುಗಳಲ್ಲಿ ಅತ್ಯುತ್ತಮ 5 ಸೆಲ್ಫಿ ಆಪ್‌ಗಳನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಅವುಗಳು ಯಾವವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯೂಟಿ ಪ್ಲಸ್ ( Beautyplus)

ಬ್ಯೂಟಿ ಪ್ಲಸ್ ( Beautyplus)

ಪ್ರಪಂಚದಾದ್ಯಂತ ಸರಿಸುಮಾರು 10 ಮಿಲಿಯನ್‌ಗೂ ಹೆಚ್ಚು ಜನರ ಸ್ಮಾರ್ಟ್‌ಫೋನ್‌ಗಲ್ಲಿ ಜಾಗ ಪಡೆದಿರುವ ಹುಡುಗಿಯರ ನೆಚ್ಚಿನ ಸೆಲ್ಫಿ ಆಪ್ ಇದು!.ಬ್ಯೂಟಿ ಪ್ಲಸ್ ಆಪ್‌ ಮೂಲಕ ನಮಗೆ ಬೇಕಾದ ರೀತಿಯಲ್ಲಿ ಚಿತ್ರವನ್ನು ಮಾರ್ಪಡಿಸಬಹುದು. ದಪ್ಪಗಿದ್ದವರು ಸಣ್ಣಗೆ, ಕಪ್ಪು ಇದ್ದವು ಬಿಳಿಯಾದಂತೆ ಮಾಡಬಹುದು!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಸ್ಟ್‌ಮಿ ಸೆಲ್ಫಿ ಕ್ಯಾಮೆರಾ( BestMe SelFie Camera)

ಬೆಸ್ಟ್‌ಮಿ ಸೆಲ್ಫಿ ಕ್ಯಾಮೆರಾ( BestMe SelFie Camera)

ಅತ್ಯುತ್ತಮ ಸೆಲ್ಫಿ ತೆಗೆಯಲು ಇರುವ ಎರಡನೆಯ ಅತ್ಯುತ್ತಮ ಸೆಲ್ಫಿ ಆಪ್ ಎಂದರೆ ಬೆಸ್ಟ್‌ಮಿ ಸೆಲ್ಫಿ ಕ್ಯಾಮೆರಾ ಆಪ್ ಇದು. ಸೆಲ್ಫಿ ಚಿತ್ರಗಳನ್ನು ಈ ಆಪ್‌ ಮೂಲಕ ತೆಗೆದರೆ ಫೆಸ್‌ನಲ್ಲಿನ ಕಪ್ಪುಕಲೆಗಳನ್ನು ಇಲ್ಲದಂತೆ ಮಾಡುತ್ತದೆ! ಇನ್ನು ಆಪ್‌ನಲ್ಲಿ ಎಮೊಜಿಗಳ ಸೇವೆಯು ಲಭ್ಯವಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್‌ ಸಿಸ್ಟಮ್‌ಗಳೆರಡರಲ್ಲೂ ಕಾರ್ಯ ನಿರ್ವಹಿಸುತ್ತದೆ.

ಕ್ಯಾಂಡಿ ಕ್ಯಾಮೆರಾ.(Candy Camera)

ಕ್ಯಾಂಡಿ ಕ್ಯಾಮೆರಾ.(Candy Camera)

ಅತ್ಯುತ್ತಮ ಫಿಲ್ಟರ್ ಸೆಲ್ಫಿ ಚಿತ್ರ ತೆಗೆಯಲು ಕ್ಯಾಂಡಿ ಕ್ಯಾಮೆರಾ ಆಪ್ ಸಹಾಯಕ. ಈ ಆಪ್‌ನಲ್ಲಿ ಕಲರ್‌ ಬ್ಯಾಲೆನ್ಸ್‌ ಮತ್ತು ಲಿಪ್‌ಸ್ಟಿಕ್, ಈ ಲೈನರ್‌ಗಳನ್ನು ಬಹಳ ನಾಜೂಕಾಗಿ ಉಪಯೋಗಿಸಬಹುದು. ಸೆಲ್ಫಿ ಲವರ್‌ಗಳಿಗೆ ಸೆಲ್ಫಿ ತೆಗೆಯಲು ಮೂರನೆ ಬೆಸ್ಟ್ ಆಪ್‌ ಎಂದರೆ ಅದು ಕ್ಯಾಂಡಿ ಕ್ಯಾಮೆರಾ ಆಪ್.

ರೆಟ್ರಿಕಾ ( Retrica)

ರೆಟ್ರಿಕಾ ( Retrica)

300 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ರೆಟ್ರಿಕಾ ಸ್ವಯಂಚಾಲಿತ ಅತ್ಯುತ್ತ ಚಿತ್ರಗಳನ್ನು ತೆಗೆಯಬಹುದು! ರಿಯಲ್‌ ಟೈಮ್ ಫಿಲ್ಟರ್ಸ್‌ನಿಂದ ರೂಪಿಸಿರುವ ಈ ಆಪ್ ಮೂಲಕ ಹೆಚ್ಚು ಬೇಗವಾಗಿ ಚಿತ್ರಗಳನ್ನು ತೆಗೆಯಬಹುದಾಗಿದೆ. ಇನ್ನು ಈ ಆಪ್‌ ಮೂಲಕ ಫೊಟೊ ಆಲ್ಬಮ್‌ಗಳನ್ನು ತಯಾರಿಸಬಹುದು.

ಯು ಕ್ಯಾಮ್ ಪರ್‌ಫೆಕ್ಟ್ ( YouCam PerFect)

ಯು ಕ್ಯಾಮ್ ಪರ್‌ಫೆಕ್ಟ್ ( YouCam PerFect)

ಭಾರತದಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೆಲ್ಫಿ ಆಪ್ ಯು ಕ್ಯಾಮ್ ಪರ್‌ಫೆಕ್ಟ್ . ಈ ಆಪ್‌ ಮೂಲಕ ಅತ್ಯುತ್ತಮ ಎನ್ನುವಂತಹ ಸೆಲ್ಫಿಗಳನ್ನು ತೆರೆಬಹುದಾಗಿದ್ದು, ವಿಶೇಷವಾಗಿ ಆಪ್‌ನಲ್ಲಿ ಹೆಚ್ಚು ಆಯ್ಕೆಯ ಎಡಿಟ್ ಐಕಾನ್‌ಗಳು ನಿಮಗೆ ಸಿಗುತ್ತವೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are 5 top selfie apps available for the Android and iOS users. Choose which selfie app suits your need. to know more visit to kannada.Gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot