Home
ಕ್ಯಾಮೆರಾ

ಫೋಟೋಗ್ರಫಿ ಭವಿಷ್ಯ ಬದಲಿಸುವ ಕ್ಯಾಮೆರಾ: ಒಂದೇ ಕ್ಯಾಮೆರಾದಲ್ಲಿ 16 ಲೆನ್ಸ್

ಇದು ಮುಂದೆ ಫೋಟೋಗ್ರಫಿ ಭವಿಷ್ಯವನ್ನು ಮತ್ತು ಫೋಟೋಗ್ರಫಿ ಮಾಡುವ ವಿಧಾನವನ್ನು ಬದಲಾಯಿಸಲಿದೆ ಎನ್ನಲಾಗಿದೆ. ಇದು ಒಂದೇ ಕ್ಯಾಮೆರಾದಲ್ಲಿ ವಿವಿಧ ಮಾದರಿಯ 16 ಲೆನ್ಸ್ ಗಳನ್ನು ಹೊಂದಿದ್ದು, ಒಂದೊಂದು ಮಾದರಿಯ ಫೋಟೊಗಾಗಿ ಲೆನ್ಸ್ ಬದಲಾಯಿಸುವ ಅವಶ್ಯಕ

By Srinidhi

ಫೋಟೋಗ್ರಫಿ ಎನ್ನುವುದು ಇಂದಿನ ದಿನದಲ್ಲಿ ಹೆಚ್ಚಿನ ಮಂದಿಯ ಹವ್ಯಾಸವಾಗುತ್ತಿದೆ. ಇದಕ್ಕಾಗಿ DSLR ಕ್ಯಾಮೆರಾಗಳು ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಈ DSLRಗಳ ಜಾಗವನ್ನು ಆಕ್ರಮಿಸಲು ಮಿರರ್ ಲೈಸ್ ಕ್ಯಾಮೆರಾಗಳು ಹವಣಿಸುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ಹೊಸ ಮಾದರಿಯ ಕ್ಯಾಮೆರಾ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಫೋಟೋಗ್ರಫಿ ಭವಿಷ್ಯ ಬದಲಿಸುವ ಕ್ಯಾಮೆರಾ: ಒಂದೇ ಕ್ಯಾಮೆರಾದಲ್ಲಿ 16 ಲೆನ್ಸ್

ಓದಿರಿ: ಸೆಲ್ಫಿಗಾಗಿಯೇ ಹೊಸ ತಂತ್ರಜ್ಞಾನ ಹೊಂದಿರುವ ವಿಶ್ವದ ಮೊದಲ ಫೋನ್..!

ಇದು ಮುಂದೆ ಫೋಟೋಗ್ರಫಿ ಭವಿಷ್ಯವನ್ನು ಮತ್ತು ಫೋಟೋಗ್ರಫಿ ಮಾಡುವ ವಿಧಾನವನ್ನು ಬದಲಾಯಿಸಲಿದೆ ಎನ್ನಲಾಗಿದೆ. ಇದು ಒಂದೇ ಕ್ಯಾಮೆರಾದಲ್ಲಿ ವಿವಿಧ ಮಾದರಿಯ 16 ಲೆನ್ಸ್ ಗಳನ್ನು ಹೊಂದಿದ್ದು, ಒಂದೊಂದು ಮಾದರಿಯ ಫೋಟೊಗಾಗಿ ಲೆನ್ಸ್ ಬದಲಾಯಿಸುವ ಅವಶ್ಯಕತೆಯೇ ಇಲ್ಲ ಎನ್ನಲಾಗಿದೆ.

L16 ಕ್ಯಾಮೆರಾ:

L16 ಕ್ಯಾಮೆರಾ:

L16 ಕ್ಯಾಮೆರಾ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವಷ್ಟು ಗಾತ್ರದಲ್ಲಿದೆ. ನೋಡಲು ಡಿಜಿಟಲ್ ಕ್ಯಾಮೆರಾ, ಇಲ್ಲವೇ ಮೊಬೈಲ್ ಫೋನ್ ಮಾದರಿಯಲ್ಲಿ ಕಾಣಿಸಲಿದೆ. ಇದರಲ್ಲಿ ಒಟ್ಟು 16 ವಿವಿಧ ಲೆನ್ಸ್ ಗಳನ್ನು ಅಳವಡಿಸಿದ್ದು, ಇದು 52MP ಗುಣಮಟ್ಟದ ಚಿತ್ರವನ್ನು ಸೆರೆಹಿಡಿಯಲು ಶಕ್ತವಾಗಿದೆ.

ಟಚ್ ಸ್ಕ್ರಿನ್ ವಿವ್ ಫೈಂಡರ್:

ಟಚ್ ಸ್ಕ್ರಿನ್ ವಿವ್ ಫೈಂಡರ್:

ಕ್ಯಾಮೆರಾಗಳಲ್ಲಿ ಮುಖ್ಯವಾದದ್ದು ವಿವ್ ಫೈಂಡರ್. ಈ L16 ಕ್ಯಾಮೆರಾದಲ್ಲಿ ಟಚ್ ಸ್ಕ್ರಿನ್ ವಿವ್ ಫೈಂಡರ್ ಕಾಣಬಹುದಾಗಿದ್ದು, ಇದರು ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಎಲ್ಲಾ ಮಾದರಿಯ ಚಿತ್ರಗಳನ್ನು ಸೆರೆಹಿಡಿಯಬಹುದು:

ಎಲ್ಲಾ ಮಾದರಿಯ ಚಿತ್ರಗಳನ್ನು ಸೆರೆಹಿಡಿಯಬಹುದು:

ಈ ಕ್ಯಾಮೆರಾದಲ್ಲಿ ಪೊಟ್ರೆಟ್, ಲ್ಯಾಂಡ್ ಸ್ಕೈಪ್ ಸೇರಿದಂತೆ ಎಲ್ಲಾ ಮಾದರಿಯ ಫೋಟೊಗಳನ್ನು ತೆಗೆಯಬಹುದು ಎನ್ನಲಾಗಿದೆ. DSLR ಮಾದರಿಯ ಗುಣಮಟ್ಟವನ್ನು ಇದರಲ್ಲಿ ಕಾಣಬಹುದಾಗಿದೆ.

ವಿಶೇಷ ತಂತ್ರಜ್ಞಾನ:

ವಿಶೇಷ ತಂತ್ರಜ್ಞಾನ:

ಈ ಕ್ಯಾಮೆರಾದಲ್ಲಿ 16 ಲೆನ್ಸ್ ಗಳು ಕಾರ್ಯನಿರ್ವಹಿಸುವಂತೆ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎನ್ನಲಾಗಿದೆ. ಟೆಲಿ ಲೆನ್ಸ್, ವೈಡ್ ಆಂಗಲ್ ಲೆನ್ಸ್ ಗಳ ನಡುವೆ ವಿಶೇಷ ಸಂಪರ್ಕವನ್ನು ಏರ್ಪಡಿಸಲಿದೆ.

ಮೈಕ್ರೋ-ಮ್ಯಾಕ್ರೋ:

ಮೈಕ್ರೋ-ಮ್ಯಾಕ್ರೋ:

ಈ ಕ್ಯಾಮೆರಾದಲ್ಲಿ ಎಲ್ಲಾ ಮಾದರಿಯ ಫೋಟೊವನ್ನು ತೆಗೆಯಬಹುದಾಗಿದೆ. ಇದಕ್ಕಾಗಿಯೇ ಇಲ್ಲಿ ಮೈಕ್ರೋ ಲೆನ್ಸ್ ಮತ್ತು ಮ್ಯಾಕ್ರೋ ಲೆನ್ಸ್ ಗಳನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

ಉತ್ತಮ ಬ್ಯಾಟರಿ:

ಉತ್ತಮ ಬ್ಯಾಟರಿ:

ಈ ಕ್ಯಾಮೆರಾದಲ್ಲಿ ಉತ್ತಮ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಒಂದು ಚಾರ್ಜ್ ನಲ್ಲಿ ಸುಮಾರು 1500 ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ.

ಬೆಲೆ:

ಬೆಲೆ:

ಈ L16 ಕ್ಯಾಮೆರಾ ಬೆಲೆ $1950 ಆಗಿದ್ದು, ಇದೇ ಮಾದರಿಯಲ್ಲಿ ಇದರಲ್ಲಿರುವ ಲೆನ್ಸ್ ಗಳನ್ನು ಬಿಡಿ ಬಿಡಿಯಾಗಿ ಕೊಂಡುಕೊಂಡರೆ ಇದರ ಹತ್ತರಷ್ಟು ಬೆಲೆಯಾಗಲಿದೆ ಎನ್ನಲಾಗಿದೆ.

Best Mobiles in India

English summary
This Crazy Camera Is the Future of Photography. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+