Subscribe to Gizbot

ಶ್ಯೋಮಿಯ ಆಕ್ಷನ್ ಕ್ಯಾಮೆರಾ ವಿಶೇಷತೆ ಗೊತ್ತೇ?

Written By:

ಎಚ್‌ಟಿಸಿಯೊಂದಿಗಿನ ಸಂಘರ್ಷಣೆಗೆ ನೇರವಾಗಿ ಶ್ಯೋಮಿ ಫೋನ್ ತೊಡಗಿರುವಂತೆ ಕಾಣುತ್ತಿದೆ. ಏಕ್ಷನ ಕ್ಯಾಮೆರಾ ಮಾದರಿಯಲ್ಲಿರುವ ಆರ್‌ಇ - ಕ್ಯಾಮೆರಾವನ್ನು ಕಂಪೆನಿ ಘೋಷಿಸಿದೆ. ಇದೀಗ ಚೀನಾದ ಆಪಲ್ ಎಂದೇ ಕರೆಯಲ್ಪಡುವ ಶ್ಯೋಮಿ ಅದೇ ಮಾದರಿಯ ಫೋನ್ ಅನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ.

ಈ ಹೊಸ ಡಿವೈಸ್ ಸ್ಮಾರ್ಟ್‌ಫೋನ್‌ಗಿಂತ ಸಂಪೂರ್ಣ ವಿಭಿನ್ನವಾಗಿದ್ದು ಆರ್‌ಇ ಕ್ಯಾಮೆರಾ ವಿಶೇಷತೆಗಳನ್ನು ಒಳಗೊಂಡಿದೆ. ಇನ್ನು ಇದರ ಬೆಲೆಯನ್ನು ತಿಳಿಸುವುದಾದರೆ ಇದು ರೂ 10,000 ದಲ್ಲಿ ಬಂದಿದೆ.

ಶ್ಯೋಮಿಯ ಆಕ್ಷನ್ ಕ್ಯಾಮೆರಾ ತೆರೆಗೆ

ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ಚೀನಾದ ವರದಿಯ ಪ್ರಕಾರ ಶ್ಯೋಮಿ 138 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಅನ್ನು ಜೋಡಿಸಹೊರಟಿದ್ದು ಇದು 4ಕೆ ವೀಡಿಯೊ ರೆಕಾರ್ಡಿಂಗ್ ಅನ್ನು ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಶ್ಯೋಮಿಯ ಹೊಸ ಕ್ಯಾಮೆರಾ ಪೂರ್ಣ ಎಚ್‌ಡಿ ವೀಡಿಯೊ ರೆಕಾರ್ಡಿಂಗ್ ಅನ್ನು 120fps ನಲ್ಲಿ ರೆಕಾರ್ಡ್ ಮಾಡಲಿದೆ.

ಇದನ್ನೂ ಓದಿ: ವಿಂಡೋಸ್ ಪಿಸಿಯನ್ನು ಬ್ಲ್ಯೂಟೂತ್‌ಗೆ ಸಂಪರ್ಕ ಪಡಿಸುವ ಸರಳ ವಿಧಾನಗಳು

128ಜಿಬಿಯಷ್ಟು ಸಂಗ್ರಹಣಾ ಸಾಮರ್ಥ್ಯವಿರುವ ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಬೆಂಬಲಸುವ ಎಸ್‌ಡಿ ಕಾರ್ಡ್ ಅನ್ನು ಶ್ಯೋಮಿ ಇದರಲ್ಲಿ ಅಳವಡಿಸಲಿದ್ದು ಈ ಕ್ಯಾಮೆರಾದ ಲಾಂಚ್ ಅನ್ನು ಈ ವರ್ಷದ ಕೊನೆಯಲ್ಲಿ ನಮಗೆ ನಿರೀಕ್ಷಿಸಬಹುದಾಗಿದೆ.

ಅದಾಗ್ಯೂ ಶ್ಯೋಮಿ ಕ್ಯಾಮೆರಾವನ್ನು ಚೀನಾದಲ್ಲಿ ಯಾವಾಗ ಲಾಂಚ್ ಮಾಡುತ್ತದೆ ಎಂಬುದು ಖಾತ್ರಿ ಇಲ್ಲ. ಗಿಜ್‌ಬಾಟ್ ಈ ಲಾಂಚ್ ಬಗ್ಗೆ ನಿಮಗೆ ವಿವರವಾದ ಮಾಹಿತಿಯನ್ನು ನೀಡಲಿದ್ದು ಶೀಘ್ರದಲ್ಲಿಯೇ ಲಾಂಚ್ ನಡೆಯುವ ಸಂಭವ ಇದೆ.

English summary
This article tells about Xiaomi's GoPro-Like Action Camera Coming Soon: Report.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot