ಭವಿಷ್ಯದಲ್ಲಿ ನಾವು ಕಾಣಬಹುದಾದ ಲ್ಯಾಪ್ ಟಾಪುಗಳು.

|

ಲ್ಯಾಪ್ ಟಾಪಿನ ರಚನೆ ಯಾವಾಗಲೂ ಆಕಳಿಕೆ ಮೂಡಿಸುವಂತೆಯೇ ಇರಬೇಕಿಲ್ಲ. ಸಾಮಾನ್ಯವಾಗಿ ಲ್ಯಾಪ್ ಟಾಪ್ ಗಳೆಲ್ಲವೂ ಏಕರೂಪವಾಗೇ ಕಾಣಿಸುತ್ತವಾದರೂ, ಸಂಪೂರ್ಣ ವಿಭಿನ್ನವಾಗಿರುವ ಲ್ಯಾಪ್ ಟಾಪ್ ವಿನ್ಯಾಸಗಳೂ ಹಲವಾರಿವೆ.

ಭವಿಷ್ಯದಲ್ಲಿ ನಾವು ಕಾಣಬಹುದಾದ ಲ್ಯಾಪ್ ಟಾಪುಗಳು.

ವಿಭಿನ್ನವಾಗಿ, ಕ್ರಿಯಾತ್ಮಕವಾಗಿ, ಸುಂದರವಾಗಿ ಮತ್ತು ಉಪಯುಕ್ತವಾಗಿಯೂ ಲ್ಯಾಪ್ ಟಾಪ್ ಗಳನ್ನು ರೂಪಿಸಬಹುದು. ಕಳೆದ ಕೆಲವು ವರುಷಗಳಿಂದ, ವಿನ್ಯಾಸಕಾರರು ಹಲವಾರು ಆಸಕ್ತಿಕರ ಲ್ಯಾಪ್ ಟಾಪ್ ಗಳನ್ನು ಕಲ್ಪಿಸಿದ್ದಾರೆ, ಹಲವು ವಾಸ್ತವದಲ್ಲೂ ಲಭ್ಯವಾಗಬಹುದು.

ಓದಿರಿ: ರಾತ್ರಿ ವೇಳೆಯಲ್ಲಿ ಕಂಪ್ಯೂಟರ್ ಶಟ್‌ಡೌನ್ ಏಕೆ ಮಾಡಬೇಕು?

ಇಲ್ಲಿ ಹಲವು ಹೊಸತನದ ಲ್ಯಾಪ್ ಟಾಪ್ ಡಿಸೈನುಗಳನ್ನು ಪರಿಚಯಿಸುತ್ತಿದ್ದೀವಿ. ಇಲ್ಲಿರುವ ಹಲವು ಉತ್ಪನ್ನಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ, ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ ಈ ರೀತಿಯ ನವೀನ ಲ್ಯಾಪ್ ಟಾಪುಗಳು ಯಾವಾಗ ಮಾರುಕಟ್ಟೆಗೆ ಬರುತ್ತವೆ ಎನ್ನುವುದರ ಕುರಿತು ಹೆಚ್ಚಿನ ಮಾಹಿತಿಯಿಲ್ಲ. ಹಾಗಿದ್ದರೂ, ಮುಂದಿನ ದಿನಗಳಲ್ಲಿ ನಾವು ಯಾವ ರೀತಿಯ ಲ್ಯಾಪ್ ಟಾಪ್ ಗಳನ್ನು ನಿರೀಕ್ಷಿಸಬಹುದು ಎನ್ನುವ ಒಂದು ಚಿತ್ರಣವನ್ನು ಈ ಲೇಖನ ನೀಡುತ್ತದೆ.

ಕ್ಯಾರಿಯೋ ಲ್ಯಾಪ್ ಟಾಪ್ ಪರಿಕಲ್ಪನೆ.

ಕ್ಯಾರಿಯೋ ಲ್ಯಾಪ್ ಟಾಪ್ ಪರಿಕಲ್ಪನೆ.

ಈ ಪರಿಕಲ್ಪನೆಯ ವಿನ್ಯಾಸವು ಪೂರ್ತಿ ಪರದೆಯ ಕೀಬೋರ್ಡುಗಳು, ಪಾರದರ್ಶಕತೆ ಮತ್ತು ಮೊನಚಿಲ್ಲದ ಪರದೆಗಳ ಉಪಯುಕ್ತತೆಯನ್ನು ತೋರಿಸುತ್ತದೆ. ಹಾಗಿದ್ದರೂ, ಈ ಲ್ಯಾಪ್ ಟಾಪನ್ನು ಕಾರಿನ ಸ್ಟೇರಿಂಗ್ ಜೊತೆಗೆ ತೋರಿಸಿರುವುದು ಅಚ್ಚರಿ ಮೂಡಿಸುತ್ತದೆ.

ಫುಜಿಟ್ಸು ಟರ್ನ್ ಟೇಬಲ್ ಲ್ಯಾಪ್ ಟಾಪ್.

ಫುಜಿಟ್ಸು ಟರ್ನ್ ಟೇಬಲ್ ಲ್ಯಾಪ್ ಟಾಪ್.

ಫುಜಿಟ್ಸು ಡಿಜೆ ಲ್ಯಾಪ್ ಟಾಪ್ ಐಪಾಡ್ ಕ್ಲಿಕ್ ವ್ಹೀಲ್ ನಿಂದ ಸ್ಪೂರ್ತಿ ಪಡೆದಿದೆ. ಇಡೀ ಮುಚ್ಚಳದ ಮೇಲೆ ಟರ್ನ್ ಟೇಬಲ್ ರೀತಿಯ ಕಂಟ್ರೋಲರ್ ಅಳವಡಿಸಿದೆ.

ಇಂಟೆಲ್ ಮೆಟ್ರೋ ನೋಟ್ ಬುಕ್.

ಇಂಟೆಲ್ ಮೆಟ್ರೋ ನೋಟ್ ಬುಕ್.

ಲ್ಯಾಪ್ ಟಾಪ್ ತಯಾರಕರಲ್ಲಿನ ಅನ್ವೇಷಣೆಯ ಕೊರತೆಯಿಂದ ಬೇಸತ್ತ ಇಂಟೆಲ್ ತಾವೇ ಒಂದಷ್ಟು ವಿನ್ಯಾಸಗಳನ್ನು ರೂಪಿಸುವುದರತ್ತ ಆಸಕ್ತಿ ತೋರಿಸಿದೆ. ಚಿತ್ರಗಳಿಂದ ಈ ಸಾಧನಗಳಿನ್ನೂ ಬಿಡುಗಡೆಯಾಗಬೇಕಷ್ಟೇ ಎನ್ನುವುದು ಸ್ಪಷ್ಟವಾಗುತ್ತದೆ.

ಗೆಲ್ ಫ್ರಾಗ್.

ಗೆಲ್ ಫ್ರಾಗ್.

ವಿನ್ಯಾಸಕಾರರಾದ ಫ್ರಾಗ್ ಪ್ರಕಾರ ಈ ವಿನ್ಯಾಸವು ಚೆಂದಕ್ಕೂ ಸೈ ಕಾರ್ಯನಿರ್ವಹಣೆಗೂ ಸೈ. ಇದು ಒರಟಾಗಿದೆ, ಬಾಗುವಷ್ಟು ಮೆದುವಾಗಿಯೂ ಇದೆ. ಇದು ಮೊಬೈಲ್ ಮಿರರ್, ಫೋಟೋ ಸ್ಲೈಡ್ ಶೋ, ವೀಡಿಯೋ ಪ್ರೊಜೆಕ್ಟರ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಯಿದೆ.

ಥಿಂಕ್ ಪ್ಯಾಡ್ ರಿಸರ್ವ್ ಎಡಿಷನ್.

ಥಿಂಕ್ ಪ್ಯಾಡ್ ರಿಸರ್ವ್ ಎಡಿಷನ್.

ಥಿಂಕ್ ಪ್ಯಾಡ್ ರಿಸರ್ವ್ ಎಡಿಷನ್ನಿಗೆಂದೇ ಲಿನೊವೋ ಪ್ರತ್ಯೇಕ ವೆಬ್ ಪುಟವನ್ನು ಸೃಷ್ಟಿಸಿದೆ. ಸಾಮನ್ಯ ಲ್ಯಾಪ್ ಟಾಪುಗಳಂತೆಯೇ ವಿನ್ಯಾಸವಿದ್ದರೂ ರಿಸರ್ವ್ ಎಡಿಷನ್ನಿ ಲ್ಯಾಪ್ ಟಾಪುಗಳು ವಿಶಿಷ್ಟವಾಗಿವೆ.

ಎರಡನೆಯ ಪರದೆಯೊಂದಿಗೆ ಏಸಸ್ ಲ್ಯಾಪ್ ಟಾಪ್.

ಎರಡನೆಯ ಪರದೆಯೊಂದಿಗೆ ಏಸಸ್ ಲ್ಯಾಪ್ ಟಾಪ್.

ಮುಖ್ಯ ಪರದೆಯ ಜೊತೆಗೆ ಒಂದು ಚಿಕ್ಕ ಪರದೆಯನ್ನು ಒಳಗೊಂಡ ಹೊಸ ಪರಿಕಲ್ಪನೆಯನ್ನು ಏಸಸ್ ಮುಂದಿಟ್ಟಿದೆ. ಅದು ಹೇಗೆ ಕಾಣಿಸುತ್ತದೆ ಎನ್ನುವುದನ್ನು ತಿಳಿಯಲು ಚಿತ್ರ ನೋಡಿ.

ಪ್ರವಾಸಿ ಲ್ಯಾಪ್ ಟಾಪ್.

ಪ್ರವಾಸಿ ಲ್ಯಾಪ್ ಟಾಪ್.

ಇದು ಲ್ಯಾಪ್ ಟಾಪ್ ಅಲ್ಲ, ಆದರೆ ಇದರಲ್ಲಿ ಮಡಿಚಬಲ್ಲ ಪರದೆಯಿದೆ. ಈ ರೀತಿಯ ವಿನ್ಯಾಸವನ್ನು ಹೆಚ್ಚಿನವರು ಮಾಡಿಲ್ಲ ಎನ್ನುವುದೇ ಅಚ್ಚರಿಯ ವಿಷಯ.

ಹೆಚ್.ಪಿ ಕಾನ್ಸೆಪ್ಟ್ ಲ್ಯಾಪ್ ಟಾಪ್.

ಹೆಚ್.ಪಿ ಕಾನ್ಸೆಪ್ಟ್ ಲ್ಯಾಪ್ ಟಾಪ್.

ಹೆಚ್.ಪಿ ಕಂಪನಿಯು ಹಲವು ಕಾನ್ಸೆಪ್ಟ್ ವಿನ್ಯಾಸಗಳನ್ನು ಇತ್ತೀಚೆಗೆ ತೋರಿಸಿದೆ. ಈ ಲ್ಯಾಪ್ ಟಾಪ್ ಪರಿಕಲ್ಪನೆ ನಿಜವಾದರೆ, ಹೆಚ್.ಪಿ ಇನ್ನೂ ಹೆಚ್ಚಿನ ಚೆಂದದ ವಿನ್ಯಾಸಗಳನ್ನು ರೂಪಿಸುವುದರಲ್ಲಿ ಸಂಶಯವಿಲ್ಲ.

ಪ್ರತಿ ಮಗುವಿಗೂ ಒಂದು ಲ್ಯಾಪ್ ಟಾಪ್.

ಪ್ರತಿ ಮಗುವಿಗೂ ಒಂದು ಲ್ಯಾಪ್ ಟಾಪ್.

ಇದು ಪ್ರತಿ ಮಗುವಿಗೂ ಒಂದು ಲ್ಯಾಪ್ ಟಾಪ್ ಪರಿಕಲ್ಪನೆಯಲ್ಲಿ ಮೂಡಿದ ವಿನ್ಯಾಸಗಳು. ಹಲವಾರು ಕಾರಣಗಳಿಂದ ಈ ವಿನ್ಯಾಸವು ಇನ್ನೂ ವಾಸ್ತವದಲ್ಲಿ ರೂಪಿತಗೊಂಡಿಲ್ಲ.

ಎಲ್.ಜಿ ಫ್ಯುಯಲ್ ಸೆಲ್ ಲ್ಯಾಪ್ ಟಾಪ್.

ಎಲ್.ಜಿ ಫ್ಯುಯಲ್ ಸೆಲ್ ಲ್ಯಾಪ್ ಟಾಪ್.

ಲ್ಯಾಪ್ ಟಾಪುಗಳಿಗೆ ಫ್ಯುಯಲ್ ಸೆಲ್ ಗಳನ್ನು ತಯಾರಿಸುವುದರಲ್ಲಿ ಯಶಸ್ಸು ಕಂಡಿರುವುದು ಬಹುಶಃ ಎಲ್.ಜಿ ಮಾತ್ರವೇ ಎಂದೆನ್ನಿಸುತ್ತದೆ.

Best Mobiles in India

Read more about:
English summary
Take a look at the futuristic laptop concepts from different makers such as Lenovo, HP, Asus, and more. These laptops are yet to be made available. You can take a look at them from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X