ರಾತ್ರಿ ವೇಳೆಯಲ್ಲಿ ಕಂಪ್ಯೂಟರ್ ಶಟ್‌ಡೌನ್ ಏಕೆ ಮಾಡಬೇಕು?
ನಿಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮೊದಲಾದ ಗ್ಯಾಜೆಟ್‌ಗಳನ್ನು ಇಂದಿನ ದಿನಗಳಲ್ಲಿ ಅತಿ ಹೆಚ್ಚು ಬಳಸಿಕೊಳ್ಳುತ್ತಿದ್ದೇವೆ. ಇಂದಿನ ದಿನಗಳಲ್ಲಿ ಇವೆಲ್ಲವೂಗಳು ನಮಗೆ ಅತ್ಯವಶ್ಯಕ ಎಂದೆನಿಸಿದ್ದು ಇವುಗಳ ಬಳಕೆಯನ್ನು ನಾವು ಮಾಡದೇ ದಿನವನ್ನು ಆರಂಭಿಸುವುದಿಲ್ಲ ಅಂತೆಯೇ ಕೊನೆಗೊಳಿಸುವುದೂ ಇಲ್ಲ. ಆಧುನಿಕ ಅಧ್ಯಯನಗಳೂ ಕೂಡ ತಂತ್ರಜ್ಞಾನದ ಬಳಕೆಯನ್ನು ಮಾನವ ಎಷ್ಟು ಪ್ರಬಲವಾಗಿ ಮಾಡುತ್ತಿದ್ದಾನೆ ಮತ್ತು ಅವುಗಳನ್ನು ಅತಿಯಾಗಿ ಆತ ಹೇಗೆ ಅವಲಂಬಿಸಿದ್ದಾನೆ ಎಂಬುದು ತಿಳಿದು ಬಂದಿದೆ.
ಓದಿರಿ: ಬಿಯರ್ ಕ್ಯಾನ್ ಬಳಸಿ ವೈಫೈ ಬಲಪಡಿಸಿ
ಇಂದಿನ ಲೇಖನದಲ್ಲಿ ಕಂಪ್ಯೂಟರ್ ಅನ್ನು ರಾತ್ರಿ ವೇಳೆ ಆಫ್ ಮಾಡುವುದು ಒಳ್ಳೆಯದೋ ಕೆಟ್ಟದ್ದೋ ಎಂಬ ಅಂಕಿಅಂಶಗಳ ಮೇಲೆ ಬೆಳಕು ಚೆಲ್ಲುತ್ತಿದ್ದೇವೆ. ರಾತ್ರಿ ವೇಳೆ ಕಂಪ್ಯೂಟರ್ ಅನ್ನು ಏಕೆ ಆಫ್ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಅನುಕೂಲ
ನಮ್ಮ ಕಂಪ್ಯೂಟರ್ ಅನ್ನು ಆಫ್ ಮಾಡದೆಯೇ ಹಾಗೆಯೇ ಬಿಡುವುದು ನಮ್ಮ ಅನುಕೂಲಕ್ಕಾಗಿದೆ ಆಗಿದೆ. ಕೆಲವೊಮ್ಮೆ ಕಂಪ್ಯೂಟರ್ ರೀಬೂಟ್ ಆಗುವಷ್ಟು ಸಮಯ ಕಾಯಲು ನಮಗೆ ತಾಳ್ಮೆ ಇರುವುದಿಲ್ಲ.

ಸಿಸ್ಟಮ್ ಬೂಟ್
ಸಾಮಾನ್ಯವಾಗಿ ಸಿಸ್ಟಮ್ ಬೂಟ್ ಆಗಲು 40 ರಿಂದ 50 ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಹಾಗೆಯೇ ಆನ್ ಮಾಡಿ ಬಿಡುವುದು ಪುನಃ ಆನ್ ಆಗಲು 10 ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಸಿಸ್ಟಮ್ ಕಾನ್ಫಿಗರೇಶನ್ ಮೇಲೆ ಇದು ಅವಲಂಬಿತವಾಗಿರುತ್ತದೆ.

ಅಪ್‌ಡೇಟ್
ರಾತ್ರಿ ವೇಳೆಯಲ್ಲೇ ಕೆಲವು ಕೆಲಸಗಳನ್ನು ನಡೆಸಬೇಕಾಗುತ್ತದೆ. ನಿಮ್ಮ ಸಿಸ್ಟಮ್ ಅನ್ನು ಅಪ್‌ಡೇಟ್ ಮಾಡುವುದು ರಾತ್ರಿ ವೇಳೆಯಲ್ಲಾದರೆ ಇನ್ನಷ್ಟು ಆರಾಮದಾಯಕವಾಗಿರುತ್ತದೆ.

ವೈರಸ್ ಸ್ಕ್ಯಾನ್
ವೈರಸ್ ಸ್ಕ್ಯಾನ್ ನಿರ್ವಹಿಸುವುದು, ಬ್ಯಾಕಪ್ ರಚನೆ ಮತ್ತು ಇತರ ಕಂಪ್ಯೂಟರ್ ಸಂಬಂಧಿ ಕೆಲಸಗಳನ್ನು ನಡೆಸಲು ರಾತ್ರಿ ಉತ್ತಮವಾಗಿರುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

ಸಮರ್ಥ
ಈ ಎಲ್ಲಾ ಕೆಲಸಗಳನ್ನು ನಡೆಸಲು ಪವರ್ ಅಗತ್ಯವಾಗಿರುತ್ತದೆ. ಅಂತೆಯೇ ರಾತ್ರಿ ವೇಳೆಯಲ್ಲಿ ಈ ಕೆಲಸಗಳನ್ನು ನಡೆಸುವುದು ಸಿಸ್ಟಮ್ ಅನ್ನು ಇನ್ನಷ್ಟು ಸಮರ್ಥವಾಗಿಸುತ್ತದೆ.

ರಿಮೋಟ್ ಲೊಕೇಶನ್‌ಗಳಿಂದ ಕಾರ್ಯನಿರ್ವಹಣೆ
ನಿಮ್ಮ ಕಂಪ್ಯೂಟರ್ ಅನ್ನು ಆನ್ ಆಗಿಯೇ ಇರಿಸುವುದರ ಲಾಭವೆಂದರೆ ಬೇರೆ ಬೇರೆ ಸ್ಥಾನಗಳಿಂದ ಬೇರೆ ಬೇರೆ ಡಿವೈಸ್‌ಗಳನ್ನು ಆಪರೇಟ್ ಮಾಡುವ ವ್ಯವಸ್ಥೆಯಾಗಿದೆ. ಟೀಮ್ ವ್ಯೂವರ್‌ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನಿಮಗೆ ಬೇಕಾದ್ದನ್ನು ನಿಮಗೆ ನಿರ್ವಹಿಸಬಹುದಾಗಿದೆ.

ಸೀಮಿತ ಜೀವಿತಾವಧಿ
ಸಿಸ್ಟಮ್‌ನಲ್ಲಿರುವ ಪ್ರತಿಯೊಂದು ಭಾಗವೂ ಸೀಮಿತ ಜೀವಿತಾವಧಿಯನ್ನು ಪಡೆದುಕೊಂಡಿರುತ್ತದೆ. ಮಾನಿಟರ್‌ನ ಬ್ಯಾಕ್‌ಲೈಟ್ ಸಾವಿರ ಗಂಟೆಗಳಷ್ಟು, ಎಸ್‌ಎಸ್‌ಡಿ ಪ್ರೊಗ್ರಾಮ್ ಇರೇಸ್ ಮಾಡುವವರೆಗೆ. ಅಂತೆಯೇ ಇವುಗಳ ಜೀವಿತಾವಧಿ ಮುಗಿದ ನಂತರ ಹೆಚ್ಚು ಬಿಸಿಯಾಗಿ ಕೂಡ ಇರುತ್ತವೆ.

ಪವರ್ ವೇಸ್ಟೇಜ್
ಭಾಗಗಳ ಜೀವಿತಾವಧಿ ಮಾತ್ರವಲ್ಲದೆ, ಶಕ್ತಿ ಕೂಡ ಪೋಲಾಗುತ್ತದೆ. ಅಂತೆಯೇ ಕಂಪ್ಯೂಟರ್ ಸಕ್ರಿಯಗೊಂಡಿರುವಾಗ ವ್ಯಯಿಸುವ ಶಕ್ತಿ ಮತ್ತು ಸ್ಲೀಪ್ ಮೋಡ್‌ನಲ್ಲಿರುವಾಗ ಕಂಪ್ಯೂಟರ್‌ನ ಶಕ್ತಿ ಇದಕ್ಕೆ ವ್ಯತ್ಯಾಸವಿರುತ್ತದೆ. ನೀವು ಕಂಪ್ಯೂಟರ್ ಅನ್ನು ಸ್ವಿಚ್ ಆಫ್ ಮಾಡಿದಾಗ, ಇದು ಆನ್ ಆಗಲು 0.2W ಅನ್ನು ಬಳಸುತ್ತದೆ.

ಪವರ್ ಕಟ್ಸ್
ಹೆಚ್ಚಿನ ಪವರ್ ಕಟ್‌ಗಳು ನಿಮ್ಮ ಕಂಪ್ಯೂಟರ್ ಅನ್ನು ಹಾಳುಮಾಡಿಬಿಡುತ್ತವೆ. ಅಂತೆಯೇ ಸಿಡಿಲು ಗುಡುಗು ಕೂಡ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಹಾನಿಮಾಡಿಬಿಡುವ ಸಾಧ್ಯತೆ ಇರುತ್ತದೆ.


Click it and Unblock the Notifications








