ಲ್ಯಾಪ್‌ಟಾಪ್‌/ಪಿಸಿಗಳ ಶೀಘ್ರ ಸ್ಕ್ರೀನ್ ಟರ್ನ್‌ ಆಫ್‌ಗಾಗಿ 3 ವಿಧಾನಗಳು!

By Suneel
|

ಕಂಪ್ಯೂಟರ್‌ ಬಳಕೆದಾರರು ಸ್ಕ್ರೀನ್ ಸ್ವಿಚ್‌ ಆಫ್‌ ಮಾಡಲು ಲಕ್ಸುರಿ ಬಟನ್‌ ಅನ್ನು ಹೊಂದಿದ್ದಾರೆ. ಆದರೆ ಲ್ಯಾಪ್‌ಟಾಪ್ ಬಳಕೆದಾರರು ಕೇವಲ ಸ್ಕ್ರೀನ್ ಸ್ವಿಚ್‌ ಆಫ್ ಮಾಡುವ ಬಟನ್ ಅನ್ನು ಹೊಂದಿರುವುದಿಲ್ಲ. ಆಫೀಸ್‌ಗಳಲ್ಲಿ ಲ್ಯಾಪ್‌ಟಾಪ್‌ನಲ್ಲಿ ವರ್ಕ್‌ ಮಾಡುವ ಹಲವರು ಆಗಾಗ ಕಾಫಿ/ಟೀ ಬ್ರೇಕ್‌ ಎಂದು ಹೋದರೆ ಪದೇ ಪದೇ ಶಟ್‌ಡೌನ್‌ ಮಾಡೇ ಹೋಗಬೇಕಾಗುತ್ತದೆ. ಲ್ಯಾಪ್‌ಟಾಪ್‌ ಬಳಕೆದಾರರಿಗೆ ಇದೊಂದು ರೀತಿಯ ಸಮಸ್ಯೆ ಆಗಿದೆ.

ಆದ್ದರಿಂದ ಇಂದಿನ ಲೇಖನದಲ್ಲಿ ಲ್ಯಾಪ್‌ಟಾಪ್(Laptop) ಮತ್ತು ಪಿಸಿ ಬಳಕೆದಾರರು ಶೀಘ್ರವಾಗಿ ಸ್ಕ್ರೀನ್ ಮಾತ್ರ ಆಫ್‌ ಮಾಡಲು ಕೆಲವು ಟ್ರಿಕ್ಸ್‌ಗಳನ್ನು ಗಿಜ್‌ಬಾಟ್‌ ನೀಡುತ್ತಿದೆ. ಇದರಿಂದ ಲ್ಯಾಪ್‌ಟಾಪ್‌ ಅನ್ನು ಪದೇ ಪದೇ ಶಟ್‌ಡೌನ್‌ ಮಾಡಿ, ಆನ್‌ ಮಾಡುವ ಸಮಸ್ಯೆ ತಪ್ಪುತ್ತದೆ. ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ವಿಶ್ವವನ್ನು ನಡುಗಿಸಿದ ಐದು ಡಿಜಿಟಲ್ ರಕ್ಷಣಾ ಉಲ್ಲಂಘನೆಗಳು.

ಈ ಹಳೆಯ ವಿಧಾನವನ್ನು  ಬಳಸಿ

ಈ ಹಳೆಯ ವಿಧಾನವನ್ನು ಬಳಸಿ

ಲ್ಯಾಪ್‌ಟಾಪ್‌/ಪಿಸಿ ಡಿಸ್‌ಪ್ಲೇ ಆಪ್‌ ಅನ್ನು ಕೆಲವು ಸಮಯ ಮಾತ್ರ ಆಫ್‌ ಆಗುವಂತೆ ಮಾಡುವ ವಿಧಾನವನ್ನು ಪ್ರಯತ್ನಿಸಿ
PC settings > PC and devices > Power and Sleep > Set time(ಬಲಭಾಗದಲ್ಲಿ)

ನಿಮ್ಮ ಲ್ಯಾಪ್‌ಟಾಪ್‌ ಸ್ಕ್ರೀನ್ ಆಟೋಮೆಟಿಕಲಿ 1 ನಿಮಷ, 2 ನಿಮಿಷ, 3 ನಿಮಿಷ, 5 ನಿಮಿಷ, 10 ನಿಮಿಷ, 15 ನಿಮಿಷ, 20 ನಿಮಿಷ, 25 ನಿಮಿಷ, 30 ನಿಮಿಷಗಳ ನಂತರ ಟರ್ನ್‌ ಆಫ್‌ ಆಗುವಂತೆ ಆಯ್ಕೆ ಮಾಡಬಹುದು.

ಆದರೆ ಯಾವಾಗಲಾದರೂ ನೀವು ಆನ್‌ಲೈನ್‌ನಲ್ಲಿ ಲೇಖನಗಳನ್ನು ಓದುವ ಸಮಯದಲ್ಲಿ, ಅಥವಾ ಟೈಪಿಂಗ್‌ ಮಾಡುತ್ತಿದ್ದಲ್ಲಿ ಸೆಟ್‌ ಮಾಡುತ್ತಿದ್ದ ಸಮಯಕ್ಕೆ ಸರಿಯಾಗಿ ಸ್ವಯಂಕೃತವಾಗಿ ಸ್ಕ್ರೀನ್‌ ಆಫ್‌ ಆಗುತ್ತದೆ. ಆದ್ದರಿಂದ ಈ ಕೆಳಗಿನ ವಿಧಾನವನ್ನು ಅನುಸರಿಸಿ.

ಟರ್ನ್‌ ಆಫ್‌ ಎಲ್‌ಸಿಡಿ ಬಳಕೆ

ಟರ್ನ್‌ ಆಫ್‌ ಎಲ್‌ಸಿಡಿ ಬಳಕೆ

'ಟರ್ನ್‌ ಆಫ್‌ ಎಲ್‌ಸಿಡಿ (Turn Off LCD)' ಡೌನ್‌ಲೋಡ್‌ ಮಾಡಿ. 'ಟರ್ನ್‌ ಆಫ್‌ ಎಲ್‌ಸಿಡಿ' ಕಂಪ್ಯೂಟರ್‌ ಪ್ರೋಗ್ರಾಮ್‌ ಆಗಿದ್ದು, ನಿಮ್ಮ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ ಸ್ಕ್ರೀನ್‌ ಅನ್ನು ಸುಲಭವಾಗಿ ಒಂದು ಬಟನ್‌ ಕ್ಲಿಕ್‌ ಮಾಡುವ ಮುಖಾಂತರ ಟರ್ನ್‌ ಆಫ್‌ ಮಾಡುತ್ತದೆ. 'ಟರ್ನ್‌ ಆಫ್‌ ಎಲ್‌ಸಿಡಿ (Turn Off LCD)' ಡೌನ್‌ಲೋಡ್‌ ಮಾಡಿದ ನಂತರ ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. ಯಾವುದೇ ಇನ್‌ಸ್ಟಾಲ್ ಪ್ರಕ್ರಿಯೆ ಅಗತ್ಯವಿಲ್ಲ. ಅಂದಹಾಗೆ ಪುನಃ ಸ್ಕ್ರೀನ್‌ ಆನ್‌ ಮಾಡಲು ಕೀಬೋರ್ಡ್‌ನ ಯಾವುದೇ ಬಟನ್‌ ಅನ್ನು ಪ್ರೆಸ್‌ ಮಾಡಿ.

ಹಾಟ್‌ಕೀ ಅಥವಾ ಶಾರ್ಟ್‌ಕಟ್‌ ಕ್ರಿಯೇಟ್‌ ಮಾಡಿ

ಹಾಟ್‌ಕೀ ಅಥವಾ ಶಾರ್ಟ್‌ಕಟ್‌ ಕ್ರಿಯೇಟ್‌ ಮಾಡಿ

ಮಾನಿಟರ್‌ ಸ್ಕ್ರೀನ್ ಆಫ್‌ ಮಾಡಲು ಮೇಲೆ ತಿಳಿಸಿದಂತೆ ಡಬಲ್‌ ಕ್ಲಿಕ್ ಮಾಡಿದರೆ ಸಾಕು ಅಥವಾ ಶಾರ್ಟ್‌ಕಟ್‌ ಕೀ ಕ್ರಿಯೇಟ್‌ ಮಾಡಬಹುದು. ಶಾರ್ಟ್‌ಕಟ್‌ ಕೀ ಕ್ರಿಯೇಟ್ ಮಾಡಲು 'Monitor Off Utility' ಡೌನ್‌ಲೋಡ್‌ ಮಾಡಿ.

ಡೌನ್‌ಲೋಡ್‌ ಆದ ನಂತರ ಈ ಟೂಲ್‌ಗಳ ಮೇಲೆ ಬಲಭಾಗದ ಬಟನ್‌ ಕ್ಲಿಕ್‌ ಮಾಡಿ. ಶಾರ್ಟ್‌ಕಟ್‌ ಫೈಲ್‌ ಮೇಲೆ ಬಲಭಾಗದ ಬಟನ್‌ ಕ್ಲಿಕ್ ಮಾಡಿ open > Properties > Shortcut ( ಶಾರ್ಟ್‌ಕಟ್‌ ಕೀಗಳನ್ನು ಟೆಕ್ಸ್ಟ್‌ ಫೀಲ್ಡ್‌ನಲ್ಲಿ ಟೈಪಿಸಿ)
ಉದಾಹರಣೆಗೆ: Ctrl+L ಬಟನ್‌ಗಳು. ನಂತರ ಸೇವ್‌ ಮಾಡಿ.

Best Mobiles in India

English summary
3 Quick Ways to Turn Off Your Laptop/PC Screen [Windows]. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X