ವಿಶ್ವವನ್ನು ನಡುಗಿಸಿದ ಐದು ಡಿಜಿಟಲ್ ರಕ್ಷಣಾ ಉಲ್ಲಂಘನೆಗಳು.

|

ವಿಶ್ವವು ಡಿಜಿಟಲ್ ಕ್ರಾಂತಿಯ ಮೆಟ್ಟಿಲುಗಳನ್ನು ಏರುತ್ತಿರುವಂತೆಯೇ, ಡೇಟಾ ಕದಿಯುವ ಘಟನೆಗಳೂ ಹೆಚ್ಚುತ್ತಲಿವೆ. ಡಿಜಿಟಲ್ ಮಾಹಿತಿಯು ಕಳುವಾಗುವುದು ಅಥವಾ ಹಾಳಾಗುವುದು ಟೆಕ್ ಕಂಪನಿಗಳ ಮತ್ತು ಸಾಮಾಜಿಕ ಜಾಲತಾಣಗಳ ಮೇಲಿನ ಬಳಕೆದಾರರ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಾಪಾರಕ್ಕೂ ತೊಂದರೆಯಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಒಮ್ಮೆ ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಗಳಿಸುವುದು ಕಷ್ಟಸಾಧ್ಯ.

ವಿಶ್ವವನ್ನು ನಡುಗಿಸಿದ ಐದು ಡಿಜಿಟಲ್ ರಕ್ಷಣಾ ಉಲ್ಲಂಘನೆಗಳು.

ವರದಿಯೊಂದರ ಪ್ರಕಾರ, ಜನಪ್ರಿಯ ಸಾಮಾಜಿಕ ಜಾಲತಾಣಗಳ ರಕ್ಷಣೆ ಶಿಥಿಲಗೊಂಡ ಕಾರಣದಿಂದಾಗಿ ಕಳೆದ ಕೆಲವು ತಿಂಗಳಿನಲ್ಲಿ ಒಂದು ಬಿಲಿಯನ್ನಿಗಿಂತಲೂ ಹೆಚ್ಚಿನ ಜನರ ವಿವರಗಳು ಅಂತರ್ಜಾಲದಲ್ಲಿ ಸೋರಿಕೆಯಾಯಿತು.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಸ್ಫೋಟ, ಬಳಕೆದಾರರ ಪ್ರತಿಕ್ರಿಯೆ ಹೀಗಿದೆ

ಜನಪ್ರಿಯ ಹೆಸರುಗಳಾದ ಯಾಹೂ, ಲಿಂಕ್ಡ್ ಇನ್, ಒರಾಕಲ್ ಹೆಸರುಗಳು ಈ ಪಟ್ಟಿಯಲ್ಲಿವೆ. ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಭಾಗವಹಿಸುವ ಡಿಜಿಟಲ್ ವಿಶ್ವದಲ್ಲಿನ ರಕ್ಷಣೆಯ ಬಗ್ಗೆ ಅನೇಕ ರೀತಿಯ ಪ್ರಶ್ನೆಗಳು ಏಳುವಂತಾಗಿದೆ.

ಓದಿರಿ: ರಿಲಾಯನ್ಸ್ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತಿದ್ದೀರಾ? ಕೊಂಚ ಯೋಚಿಸಿ

ಇಲ್ಲಿ ನಾವು ಕಳೆದ ಕೆಲವು ತಿಂಗಳಿನಿಂದ ನಡೆದ ದೊಡ್ಡ ಮಟ್ಟದ ಡಿಜಿಟಲ್ ರಕ್ಷಣಾ ಉಲ್ಲಂಘನೆಗಳನ್ನು ಪಟ್ಟಿ ಮಾಡಿದ್ದೀವಿ, ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಧದಲ್ಲಿ ಇದರ ಪರಿಣಾಮ ತಟ್ಟಿದೆ. ಒಮ್ಮೆ ನೋಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾಹೂ: 500 ಮಿಲಿಯನ್ ಖಾತೆಗಳಿಗೆ ಕನ್ನ.

ಯಾಹೂ: 500 ಮಿಲಿಯನ್ ಖಾತೆಗಳಿಗೆ ಕನ್ನ.

ಬಹುಶಃ ಅತಿ ದೊಡ್ಡ ಸೈಬರ್ ರಕ್ಷಣಾ ಉಲ್ಲಂಘನೆಯ ಪ್ರಕರಣದಲ್ಲಿ, "ಸರಿಸುಮಾರು 500 ಮಿಲಿಯನ್ ಬಳಕೆದಾರರ ಖಾತೆಗಳ" ಮಾಹಿತಿಯನ್ನು ಕಂಪನಿಯ ಡೇಟಾಬೇಸ್ ನಿಂದ ಕದಿಯಲಾಗಿದೆ ಎಂದು ಯಾಹೂ ಗುರುವಾರ ದೃಡಪಡಿಸಿದೆ.

ಕಂಪನಿಯ ಹೇಳಿಕೆಯ ಪ್ರಕಾರ "ಸರಕಾರವೊಂದರಿಂದ ಪೋಷಿತವಾದ"ವರು ಈ ಡೇಟಾ ಕದಿಯುವಿಕೆಯ ಹಿಂದಿದ್ದಾರೆ, ಇದರರ್ಥ ಈ ಕಾರ್ಯಕ್ಕೆ ವ್ಯಕ್ತಿಯೊಬ್ಬರಿಗೆ ಸರಕಾರವೊಂದು ಬೆಂಬಲ ನೀಡಿದೆಯೆಂದು. ಈ ಡೇಟಾ ಕದಿಯುವಿಕೆ ನಡೆದದ್ದು 2014ರ ಕೊನೆಯ ಭಾಗದಲ್ಲಿ; ಹೆಸರುಗಳು, ಇಮೇಲ್ ವಿಳಾಸಗಳು, ಫೋನ್ ನಂಬರುಗಳು, ಹುಟ್ಟಿದ ದಿನಾಂಕ, ಪಾಸ್ ವರ್ಡ್, ಮತ್ತು ಕೆಲವು ಸಂದರ್ಭದಲ್ಲಿ ಎನ್ಕ್ರಿಪ್ಟೆಡ್ ಮತ್ತು ಅನ್ ಎನ್ಕ್ರಿಪ್ಟೆಡ್ ರಕ್ಷಣಾ ಪ್ರಶ್ನೆಗಳು ಮತ್ತು ಉತ್ತರಗಳನ್ನೂ ಕದಿಯಲಾಗಿದೆ.

ಅಂತರ್ಜಾಲದೈತ್ಯ ಕಾನೂನು ಪಾಲಕರೊಂದಿಗೆ ಕೆಲಸ ಮಾಡುತ್ತಾ ಈ ರಕ್ಷಣಾ ಉಲ್ಲಂಘನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ ಮತ್ತು ತಮ್ಮ ಬಳಕೆದಾರರಿಗೆ ಪಾಸ್ ವರ್ಡ್ ಹಾಗೂ ರಕ್ಷಣಾ ಪ್ರಶ್ನೆಗಳನ್ನು ಬದಲಿಸಿಕೊಳ್ಳಲು ಸೂಚಿಸುತ್ತಿದ್ದಾರೆ.

ಡ್ರಾಪ್ ಬಾಕ್ಸ್: 68 ಮಿಲಿಯನ್ ಖಾತೆಗಳ ವಿವರಗಳು ಅಂತರ್ಜಾಲದಲ್ಲಿ ಸೋರಿಕೆ.

ಡ್ರಾಪ್ ಬಾಕ್ಸ್: 68 ಮಿಲಿಯನ್ ಖಾತೆಗಳ ವಿವರಗಳು ಅಂತರ್ಜಾಲದಲ್ಲಿ ಸೋರಿಕೆ.

ಆನ್ ಲೈನ್ ಕ್ಲೌಡ್ ಸ್ಟೋರೇಜ್ ಡ್ರಾಪ್ ಬಾಕ್ಸ್ ಕಳೆದ ತಿಂಗಳು (ಆಗಷ್ಟ್ 30) ಹ್ಯಾಕರ್ ಗಳು 68 ಮಿಲಿಯನ್ ಬಳಕೆದಾರರ ವಿವರಗಳನ್ನು ಪಡೆದುಕೊಂಡುಬಿಟ್ಟಿದ್ದಾರೆ ಎಂದು ದೃಡಪಡಿಸಿತು. 2012ರಲ್ಲಿ ನಡೆದ ಈ ರಕ್ಷಣಾ ಉಲ್ಲಂಘನೆಯ ಬಗ್ಗೆ ತನ್ನ ಬಳಕೆದಾರರಿಗೆ ತಿಳಿಸಿದ ಡ್ರಾಪ್ ಬಾಕ್ಸ್, ಪಾಸ್ ವರ್ಡ್ ಗಳನ್ನು ಬದಲಿಸಿಕೊಳ್ಳುವಂತೆ ಸೂಚಿಸಿತು.

ಇದರಲ್ಲಿ ನಿಮ್ಮ ಡೇಟಾ ಕೂಡ ಸೇರಿದೆಯೇ ಎಂದು ನೋಡಲು Havelbeenpwned ಪುಟಕ್ಕೆ ಭೇಟಿ ಕೊಡಿ ಮತ್ತು ನಿಮ್ಮ ಇಮೇಲ್ ವಿಳಾಸ ಅಥವಾ ಬಳಕೆದಾರ ಹೆಸರನ್ನು ಹಾಕಿ ಪರೀಕ್ಷಿಸಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒರಾಕಲ್: ಕಂಪನಿಯ ಮೈಕ್ರೋ ವಿಭಾಗದ ಮೇಲೆ ಭಾರೀ ದಾಳಿ.

ಒರಾಕಲ್: ಕಂಪನಿಯ ಮೈಕ್ರೋ ವಿಭಾಗದ ಮೇಲೆ ಭಾರೀ ದಾಳಿ.

ಅಂತರ್ಜಾಲದಲ್ಲಿ ಕಳುವುಗೊಂಡವರ ಪಟ್ಟಿಗೆ ಇತ್ತೀಚೆಗೆ ಒರಾಕಲ್ ಸೇರಿಕೊಂಡಿತು. ಪ್ರಪಂಚದ ಟಾಪ್ 3 ಪಾಯಿಂಟ್ ಆಫ್ ಸೇಲ್ಸ್ ಸೇವೆಯೊಳಗೆ ಬರುವ ತನ್ನ ಮೈಕ್ರೋ ವಿಭಾಗದಲ್ಲಿ 2014ರಂದು ದೊಡ್ಡ ಮಟ್ಟದ ರಕ್ಷಣಾ ಉಲ್ಲಂಘನೆ ನಡೆದಿದೆಯೆಂದು ಸಾಫ್ಟ್ ವೇರ್ ದೈತ್ಯ ಆಗಷ್ಟ್ 8,2016ರಂದು ದೃಡಪಡಿಸಿತು.

ತಮ್ಮ ಪಾಯಿಂಟ್ ಆಫ್ ಸೇಲ್ ವಿಭಾಗದಲ್ಲಿರುವ ನೂರಾರು ಕಂಪ್ಯೂಟರ್ ಗಳನ್ನು ಹ್ಯಾಕರ್ಗಳು ಪ್ರವೇಶಿಸಿದರು, ಬಳಕೆದಾರರು ಬಳಸುವ ಸೇವಾ ಪೋರ್ಟಲ್ಲನ್ನು ಪ್ರವೇಶಿಸಿ ಪ್ರಪಂಚದೆಲ್ಲೆಡೆ ನಡೆದ ಮಾರಾಟದ ವಿವರಗಳನ್ನು ತಿಳಿದುಕೊಂಡು ಬಳಕೆದಾರರ ರಕ್ಷಣೆಯನ್ನು ಉಲ್ಲಂಘಿಸಿದರು.

ಒರಾಕಲ್ ನಂತರ ತಮ್ಮ ಗ್ರಾಹಕರಿಗೆ ಮೈಕ್ರೋಸ್ ಸಿಬ್ಬಂದಿ ಆನ್ ಸೈಟ್ ಪೇಮೆಂಟ್ ಅನ್ನು ನಿಯಂತ್ರಿಸುವ ಮೈಕ್ರೋಸ್ ಖಾತೆಯನ್ನು ಬದಲಿಸಲು ಸೂಚಿಸಿತು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿಂಕ್ಡ್ ಇನ್: 117 ಮಿಲಿಯನ್ ಎನ್ಕ್ರಿಪ್ಟೆಡ್ ಪಾಸ್ ವರ್ಡುಗಳ ಕಳವು.

ಲಿಂಕ್ಡ್ ಇನ್: 117 ಮಿಲಿಯನ್ ಎನ್ಕ್ರಿಪ್ಟೆಡ್ ಪಾಸ್ ವರ್ಡುಗಳ ಕಳವು.

ಮುಂದಿನ ಹೆಸರು ಲಿಂಕ್ಡ್ ಇನ್ ನದ್ದು, ಪ್ರಪಂಷದ ಅತಿ ದೊಡ್ಡ ಪ್ರೊಫೆಷನಲ್ ಜಾಲತಾಣವಾದ ಲಿಂಕ್ಡ್ ಇನ್ ಮೇ2016ರಂದು ಹ್ಯಾಕರ್ ಗಳಿಗೆ ಬಲಿಯಾಯಿತು. 'ಪೀಸ್' ಹೆಸರಿನ ಹ್ಯಾಕರ್ 117 ಮಿಲಿಯನ್ ಎನ್ಕ್ರಿಪ್ಟೆಡ್ ಪಾಸ್ ವರ್ಡುಗಳನ್ನು ತಾಣದಿಂದ ಕದ್ದು ರಷ್ಯಾದ ಕ್ರೈಮ್ ಫೋರಮ್ಮಿನಲ್ಲಿ ಪ್ರಕಟಿಸಿದ.

ಎಂದಿನಂತೆ, ಲಿಂಕ್ಡ್ ಇನ್ ಅಧಿಕಾರಿಗಳು ತಮ್ಮ ಬಳಕೆದಾರರಿಗೆ ಪಾಸ್ ವರ್ಡ್ ಗಳನ್ನು ಬದಲಿಸಲು ಹೇಳಿದರು ಮತ್ತು ತಮ್ಮ ಖಾತೆಗಳಿಗೆ ಲಾಗಿನ್ ಆಗಲು ಎರಡು ಹಂತದ ಅಥೆಂಟಿಕೇಷನ್ ಪ್ರಕ್ರಿಯೆಯನ್ನು ಉಪಯೋಗಿಸಲು ಹೇಳಿದರು.

ಸ್ನ್ಯಾಪ್ ಚಾಟ್: ಉದ್ಯೋಗಿಗಳ ವಿವರಗಳಿಗೆ ಕನ್ನ.

ಸ್ನ್ಯಾಪ್ ಚಾಟ್: ಉದ್ಯೋಗಿಗಳ ವಿವರಗಳಿಗೆ ಕನ್ನ.

ಕೊನೆಯದಾಗಿ, ಸ್ಮಾರ್ಟ್ ಫೋನ್ ಬಳಕೆದಾರರ ಅಚ್ಚುಮೆಚ್ಚಿನ ಆ್ಯಪ್ ಗಳಲ್ಲೊಂದಾದ ಸ್ನ್ಯಾಪ್ ಚಾಟ್ ತನ್ನ ಕೆಲವು ಉದ್ಯೋಗಿಗಳ ಡೇಟಾ ಕಳುವಾಗಿರುವುದರ ಬಗ್ಗೆ ಬ್ಲಾಗ್ ಪೋಸ್ಟಿನಲ್ಲಿ ಹೇಳಿಕೊಂಡಿತ್ತು. ಈ ಕಳುವು ನಡೆದಿದ್ದು ಫೆಬ್ರವರಿ 2016ರಂದು, ಸ್ಕ್ಯಾಮರ್ ಒಬ್ಬ ಕಂಪನಿಯ ಸಿಇಒ ಇವಾನ್ ಸ್ಪೀಗೆಲ್ ಹೆಸರಿನಲ್ಲಿ ಫಿಶಿಂಗ್ ಇಮೇಲುಗಳನ್ನು ಕಳಿಸಿ ಉದ್ಯೋಗಿಯೊಬ್ಬರಿಗೆ ಪೇರೋಲ್ ವಿವರಗಳನ್ನು ನೀಡುವಂತೆ ಕೇಳಿದ.

ದುರದೃಷ್ಟವಶಾತ್, ಉದ್ಯೋಗಿಗೆ ಅದು ಸ್ಕ್ಯಾಮ್ ಎಂದು ತಿಳಿಯದೆ, ವಿವರಗಳನ್ನು ಹಂಚಿಕೊಂಡುಬಿಟ್ಟ. ಆದರೆ ಒಳ್ಳೆ ಸುದ್ದಿಯೆಂದರೆ ಬಳಕೆದಾರರ ವಿವರಗಳು ಮತ್ತು ಕಂಪನಿಯ ಡೇಟಾ ಸರ್ವರ್ರುಗಳು ಸುರಕ್ಷಿತವಾಗಿದ್ದವು. ಘಟನೆಯ ಬಗ್ಗೆ ಎಫ್.ಬಿ.ಐಗೆ ದೂರು ನೀಡಲಾಯಿತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The year 2016 saw a number of online security breaches around the globe, which resulted in loss of user's information to the dark web. Here is the list of most talked about security breaches in last few months.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X