ಕಂಪ್ಯೂಟರಿನಲ್ಲಿ ಯು.ಎಸ್.ಬಿ ಫ್ಲಾಷ್ ಡ್ರೈವ್ ತೋರದೆ ಇದ್ದಾಗ ಸರಿಪಡಿಸಲು ಐದು ಸರಳ ವಿಧಾನಗಳು.

|

ಪೆನ್ ಡ್ರೈವ್ ಅಥವಾ ಯು.ಎಸ್.ಬಿ ಅಥವಾ ಫ್ಲಾಷ್ ಡ್ರೈವ್ ಗಳು(ಇವೆಲ್ಲ ಪದಗಳನ್ನೂ ಬದಲಿಯಾಗಿ ಉಪಯೋಗಿಸುತ್ತೆವೆಯಾದರೂ ಪ್ರತಿಯೊಂದರಲ್ಲೂ ಚೂರು ಚೂರು ವ್ಯತ್ಯಾಸಗಳಿವೆ) ತುಂಬ ಸುಲಭವಾಗಿ ಡೇಟಾ ಸಂಗ್ರಹಿಸಲು ನೆರವಾಗುತ್ತವೆ ಮತ್ತು ಎಲ್ಲೆಡೆಗೂ ಒಯ್ಯುವುದಕ್ಕೆ ಸುಲಭವಾಗಿದೆ.

ಕಂಪ್ಯೂಟರ್‌ನ ಯು.ಎಸ್.ಬಿ ಫ್ಲಾಷ್ ಡ್ರೈವ್ ಪತ್ತೆಗಾಗಿ 5 ವಿಧಾನಗಳು

ಬಹಳಷ್ಟು ಸಲ ಇವುಗಳು ಸರಳವಾಗಿ ಕಾರ್ಯನಿರ್ವಹಿಸುತ್ತವೆ ಆದರೆ ಕೆಲವೊಮ್ಮೆ ಹಾಳಾಗಿಬಿಡುತ್ತವೆ. ಹೌದು ನಾವು ಕಂಪ್ಯೂಟರಿನಲ್ಲಿ ಯು.ಎಸ್.ಬಿ ಫ್ಲಾಷ್ ಡ್ರೈವ್ ತೋರದೆ ಇರುವ ಸಮಸ್ಯೆಯ ಬಗ್ಗೆ ಇಲ್ಲಿ ಮಾತನಾಡುತ್ತಿದ್ದೇವೆ.
ಓದಿರಿ: ಐಫೋನ್ 7 ಮತ್ತು 7 ಪ್ಲಸ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ ಆರ್ಡರ್

ಅವುಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಾಗ ಅಥವಾ ಕರಪ್ಟ್ ಆಗಿಬಿಟ್ಟಾಗ ಸಾಮಾನ್ಯವಾಗಿ ಅದನ್ನು ಸರಿ ಪಡಿಸಲು ಸಾಧ್ಯವಿಲ್ಲವೆಂದು ಭಾವಿಸಿ ಎಸೆದು ಬಿಡುತ್ತೇವೆ. ಕೆಲವು ಸರಳ ವಿಧಾನಗಳನ್ನು ಅಳವಡಿಸಿ ಹಲವು ಕ್ಲಿಕ್ಕುಗಳನ್ನು ಮಾಡಿ ಮತ್ತೆ ಅವು ಕೆಲಸ ಮಾಡುವಂತೆ ಮಾಡಬಹುದೆನ್ನುವುದು ನಮಗೆ ತಿಳಿದಿಲ್ಲ.

ಸಮಯ ವ್ಯರ್ಥ ಮಾಡದೆ ನಿಮ್ಮ ಫ್ಲಾಷ್ ಡ್ರೈವ್ ಸರಿಯಾಗಿ ಕೆಲಸ ಮಾಡುವಂತೆ ಮಾಡುವುದು ಹೇಗೆಂದು ತಿಳಿಯೋಣ ಬನ್ನಿ.

ಕಂಪ್ಯೂಟರ್‌ನ ಯು.ಎಸ್.ಬಿ ಫ್ಲಾಷ್ ಡ್ರೈವ್ ಪತ್ತೆಗಾಗಿ 5 ವಿಧಾನಗಳು

ಬೇರೆ ಪೋರ್ಟುಗಳಲ್ಲಿ ಕೆಲಸ ಮಾಡುತ್ತಿದೆಯಾ ಪರೀಕ್ಷಿಸಿ.

ಸಮಸ್ಯೆಯನ್ನು ಸರಿಪಡಿಸುವುದನ್ನು ನಾವು ಹೇಳುತ್ತೇವೆ. ಅದಕ್ಕೂ ಮೊದಲು ನಿಮ್ಮ ಪೆನ್ ಡ್ರೈವ್ ಅನ್ನು ಬೇರೆ ಪೋರ್ಟುಗಳಿಗೆ ಹಾಕಿ ಕೆಲಸ ಮಾಡುತ್ತಿದೆಯಾ ಪರೀಕ್ಷಿಸಿ. ಎಲ್ಲವೂ ವಿಫಲವಾದರೆ ಮುಂದೆ ಓದಿ.

ಓದಿರಿ:ಲ್ಯಾಂಡ್‌ಲೈನ್‌ ನಂಬರ್‌ನಿಂದ ವಾಟ್ಸಾಪ್ ಖಾತೆ ಕ್ರಿಯೇಟ್‌ ಹೇಗೆ?

ರಿಮೂವೆಬಲ್ ಡ್ರೈವ್ ಅಕ್ಷರವನ್ನು ಬದಲಿಸಿ.

ನಿಮ್ಮ ಮೈ ಕಂಪ್ಯೂಟರ್ ಫೋಲ್ಡರಿನಲ್ಲಿ ರಿಮೂವೆಬಲ್ ಡ್ರೈವ್ ಆಯ್ಕೆ ಕಾಣಿಸದೇ ಇದ್ದಲ್ಲಿ, ಅದಕ್ಕೆ ಕೊಡಲಾಗಿದ್ದ ಡ್ರೈವ್ ಅಕ್ಷರವನ್ನು ಬದಲಿಸಿ ನೋಡಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಂಪ್ಯೂಟರ್‌ನ ಯು.ಎಸ್.ಬಿ ಫ್ಲಾಷ್ ಡ್ರೈವ್ ಪತ್ತೆಗಾಗಿ 5 ವಿಧಾನಗಳು

ಇದನ್ನು ಮಾಡಲು ಕೆಳಗಿನ ವಿಧಾನವನ್ನು ಪಾಲಿಸಿ.

ಹಂತ 1: ಕಂಟ್ರೋಲ್ ಪ್ಯಾನೆಲ್ ತೆರೆಯಿರಿ > ಅಡ್ಮಿನಿಷ್ಟ್ರೇಟಿವ್ ಟೂಲ್ಸ್ > ಕಂಪ್ಯೂಟರ್ ಮ್ಯಾನೇಜ್ ಮೆಂಟ್.

ಹಂತ 2: ಕಂಪ್ಯೂಟರ್ ಮ್ಯಾನೇಜ್ ಮೆಂಟ್ ಪುಟವನ್ನು ತೆರೆದ ನಂತರ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ, ಪರದೆಯ ಎಡ ಭಾಗದಲ್ಲಿ - ಸಿಸ್ಟಮ್ ಟೂಲ್ಸ್, ಸ್ಟೋರೇಜ್ ಮತ್ತು ಸರ್ವೀಸಸ್ ಮತ್ತು ಅಪ್ಲಿಕೇಷನ್ಸ್. ಸ್ಟೋರೇಜ್ ಮೇಲೆ ಕ್ಲಿಕ್ಕಿಸಿ > ಡಿಸ್ಕ್ ಮ್ಯಾನೇಜ್ ಮೆಂಟ್ ಅನ್ನು ಆಯ್ಕೆ ಮಾಡಿ.

ಹಂತ 3: ನಂತರ, ಪೆನ್ ಡ್ರೈವ್ ಮೇಲೆ ರೈಟ್ ಕ್ಲಿಕ್ ಮಾಡಿ > ಚೇಂಜ್ ಡ್ರೈವರ್ ಲೆಟರ್ ಮತ್ತು ಪಾಥ್ಸ್ ಅನ್ನು ಆಯ್ಕೆ ಮಾಡಿ.

ಹಂತ 4: ನೀವು ಈಗಾಗಲೇ ಡ್ರೈವರ್ ಗೆ ಅಕ್ಷರವೊಂದನ್ನು ಕೊಟ್ಟಿದ್ದರೆ ಅದನ್ನು ಬದಲಿಸಿ, ಕೊಟ್ಟಿಲ್ಲದೇ ಹೋದರೆ ಒಂದು ಅಕ್ಷರ ಕೊಡಿ.

ಹಂತ 5: ಮೇಲಿನ ಹಂತಗಳನ್ನು ನೀವು ಸರಿಯಾಗಿ ಮಾಡಿದರೆ ನಿಮ್ಮ ಮೈ ಕಂಪ್ಯೂಟರ್ ಫೋಲ್ಡರಿನಲ್ಲಿ ಡ್ರೈವ್ ಅನ್ನು ನೋಡಬಹುದು. ಈಗಲೂ ಕಾಣಿಸದೇ ಇದ್ದರೆ ಕಂಪ್ಯೂಟರ್ ರೀ ಸ್ಟಾರ್ಟ್ ಮಾಡಿ. ಡ್ರೈವ್ ಕಾಣಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Pen Drive, USB, or Flash Drives call it whatever (though these terms are used interchangeably they refer to slightly different technologies), at the end of the day, all that matters is that they are extremely portable and allow us to hoard data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X