Subscribe to Gizbot

ಐಫೋನ್ 7 ಮತ್ತು 7 ಪ್ಲಸ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ ಆರ್ಡರ್

Written By:

ಆಪಲ್‌ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಾಗಿರುವ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ವಿಶ್ವದೆಲ್ಲೆಡೆ ಬೇರೆ ಬೇರೆ ಮಾರುಕಟ್ಟೆಗಳಲ್ಲಿ ಮಾರಾಟವನ್ನು ಕಂಡುಕೊಳ್ಳುತ್ತಿದೆ. ಅಕ್ಟೋಬರ್ 7 ಕ್ಕೆ ಭಾರತ ಕೂಡ ಐಫೋನ್ ರುಚಿಯನ್ನು ಸವಿಯಲಿದೆ. ಐಫೋನ್ ತಯಾರಕರು ಇಂಡಿಯನ್ ರಿಟೈಲರ್ ತಾಣವಾದ ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು ಭಾರತದಲ್ಲಿ ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ನ ಮಾರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ.

ಓದಿರಿ: ಜಿಯೋಫೈ, ವರ್ಸಸ್ 4ಜಿ ಸ್ಮಾರ್ಟ್‌ಫೋನ್ ನಿಮ್ಮ ಆಯ್ಕೆ ಯಾವುದು?

ಐಫೋನ್ 7 ಮತ್ತು 7 ಪ್ಲಸ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ ಆರ್ಡರ್

ಇಂದಿನಿಂದ ಫ್ಲಿಪ್‌ಕಾರ್ಟ್ ಐಫೋನ್‌ಗಳಿಗಾಗಿ ಪ್ರಿ ಆರ್ಡರ್ ಅನ್ನು ತೆರೆಯಲಿದೆ. ಇದೇ ಮೊದಲ ಬಾರಿಗೆ ಆಪಲ್ ರಿಟೈಲ್ ತಾಣದೊಂದಿಗೆ ಒಪ್ಪಂದ ಮಾಡಿಕೊಂಡು ಐಫೋನ್‌ಗಳ ಮಾರಾಟವನ್ನು ಮಾಡುತ್ತಿದೆ. ಈ ತಿಂಗಳ ಫೂರ್ವದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಂಪೆನಿ ಐಫೋನ್‌ಗಳ ಲಾಂಚ್ ಅನ್ನು ಮಾಡಿತ್ತು. ಈ ಎರಡೂ ಡಿವೈಸ್‌ಗಳ ಆರಂಭ ಬೆಲೆ ಭಾರತದಲ್ಲಿ ರೂ 60,000 ಆಗಿದೆ.

ಓದಿರಿ: ಫೋನ್ ನಂಬರ್ ಇಲ್ಲದೆಯೇ ಫೇಸ್‌ಬುಕ್ ಖಾತೆ ರಚಿಸುವುದು ಹೇಗೆ?

ಐಫೋನ್ 7 ಮತ್ತು 7 ಪ್ಲಸ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ ಆರ್ಡರ್

ಐಫೋನ್ 7 ಮತ್ತು ಐಫೋನ್ 7 ಪ್ಲಸ್ 32 ಜಿಬಿ, 128 ಜಿಬಿ ಮತ್ತು 256 ಜಿಬಿ ಆವೃತ್ತಿಗಳಲ್ಲಿ ದೊರೆಯಲಿದೆ. ಸಿಲ್ವರ್, ಗೋಲ್ಡ್ ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಐಫೋನ್‌ಗಳನ್ನು ನಿಮಗೆ ಕೊಂಡುಕೊಳ್ಳಬಹುದಾಗಿದೆ. ಹೊಸ ಜೆಟ್ ಬ್ಲ್ಯಾಕ್ ಆವೃತ್ತಿಯು 128 ಜಿಬಿ ಮತ್ತು 256 ಜಿಬಿ ಆವೃತ್ತಿಗಳಲ್ಲಿ ದೊರೆಯಲಿದೆ.

ಓದಿರಿ: ಐಡಿಯಾದಿಂದ ರೂ 1 ಕ್ಕೆ ಅನಿಯಮಿತ 4ಜಿ ಡೇಟಾ ಆಫರ್ ಪಡೆದುಕೊಳ್ಳುವುದು ಹೇಗೆ?

ಐಫೋನ್ 7 ಮತ್ತು 7 ಪ್ಲಸ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ ಆರ್ಡರ್

ಐಫೋಎಸ್ 10 ಚಾಲನೆಯುಳ್ಳ ಐಫೋನ್ 7, 12 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 4 ಕೆ ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಐಫೋನ್ 7 ಪ್ಲಸ್, 12 ಎಮ್‌ಪಿ ರಿಯರ್ ಕ್ಯಾಮೆರಾ, ವೈಡ್ ಆಂಗಲ್ ಮತ್ತು ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ.

ಐಫೋನ್ 7 ಮತ್ತು 7 ಪ್ಲಸ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ ಆರ್ಡರ್

 

English summary
Flipkart will open the pre-order for the iPhones from tonight, Sept 29, at 23:59 hours, the company said in a statement.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot