Subscribe to Gizbot

ಆ್ಯಪಲ್ಲಿನ ಮ್ಯಾಕ್ ನಲ್ಲಿ ವೇಗವಾಗಿ ಸ್ಕ್ರೀನ್ ಶಾಟ್ ತೆಗೆಯಲು ಐದು ತಂತ್ರಗಳು.

Written By:

ಆ್ಯಪಲ್ಲಿನ ಮ್ಯಾಕ್ ಒಎಸ್ ನಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ಹಲವು ವಿಧಾನಗಳಿವೆ. ಕೀಬೋರ್ಡ್ ಶಾರ್ಟ್ ಕಟ್ಟುಗಳನ್ನು ಉಪಯೋಗಿಸಿಕೊಂಡು ಕ್ಷಣಮಾತ್ರದಲ್ಲಿ ಸ್ಕ್ರೀನ್ ಶಾಟ್ ತೆಗೆಯಬಹುದು, ಉಳಿದ ವಿಧಾನಗಳು ಸ್ವಲ್ಪ ಹೆಚ್ಚಿನ ಸಮಯ ಬೇಡುತ್ತದೆ.

ಆ್ಯಪಲ್ಲಿನ ಮ್ಯಾಕ್ ನಲ್ಲಿ ವೇಗವಾಗಿ ಸ್ಕ್ರೀನ್ ಶಾಟ್ ತೆಗೆಯಲು ಐದು ತಂತ್ರಗಳು.

ಓದಿರಿ: ನವರಾತ್ರಿ ಆಫರ್: ಏರ್‌ಟೆಲ್‌ ಗ್ರಾಹಕರು 60 GB 4G ಡಾಟಾ ಉಚಿತವಾಗಿ ಪಡೆಯುವುದು ಹೇಗೆ?

ಪ್ರತಿಯೊಂದು ವಿಧಾನದಲ್ಲೂ ತನ್ನದೇ ಆದಂತಹ ಅನುಕೂಲತೆಗಳಿವೆ. ಈ ಲೇಖನದಲ್ಲಿ, ಆ್ಯಪಲ್ಲಿನ ಮ್ಯಾಕ್ ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ವಿವಿಧ ವಿಧಾನಗಳನ್ನು ತಿಳಿಸಿದ್ದೇವೆ. ಜೊತೆಗೆ ಯಾವುದು ವೇಗದ್ದು ಮತ್ತು ಯಾವುದನ್ನು ನೀವು ನಿಮ್ಮ ಇಚ್ಛೆಗೆ ತಕ್ಕಂತೆ ಮಾರ್ಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದೇವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಮ್ಯಾಂಡ್ + ಶಿಫ್ಟ್ + 3 (ನಂಬರ್ ಕೀ)

ಕಮ್ಯಾಂಡ್ + ಶಿಫ್ಟ್ + 3 (ನಂಬರ್ ಕೀ)

ಇದು ಮ್ಯಾಕ್ ಒಎಸ್ ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಅತ್ಯಂತ ಸುಲಭ ವಿಧಾನ. ಕಮ್ಯಾಂಡ್ + ಶಿಫ್ಟ್ + 3 (ನಂಬರ್ ಕೀ) ಅನ್ನು ಒಂದೇ ಸಲ ಒತ್ತಿದರೆ ಸ್ಕ್ರೀನ್ ಶಾಟ್ ತೆಗೆಯಬಹುದು. ಸ್ಕ್ರೀನ್ ಶಾಟ್ ಡೆಸ್ಕ್ ಟಾಪಿನಲ್ಲಿ .ಪಿ.ಎನ್.ಜಿ ಫಾರ್ಮ್ಯಾಟಿನಲ್ಲಿ ಸೇವ್ ಆಗುತ್ತದೆ.

ಕಮ್ಯಾಂಡ್ Plus ಶಿಫ್ಟ್ Plus 4 (ನಂಬರ್ ಕೀ).

ಕಮ್ಯಾಂಡ್ Plus ಶಿಫ್ಟ್ Plus 4 (ನಂಬರ್ ಕೀ).

ಸ್ಕ್ರೀನಿನ ನಿರ್ದಿಷ್ಟ ಭಾಗವನ್ನು ಮಾತ್ರ ಸೆರೆಹಿಡಿಯಬೇಕೆಂದಿದ್ದರೆ ಕಮ್ಯಾಂಡ್ + ಶಿಫ್ಟ್ + 4(ನಂಬರ್ ಕೀ) ಅನ್ನು ಒಮ್ಮೆಲೆ ಒತ್ತಿರಿ. ಆಗ ಪರದೆಯ ಮೇಲೆ ಮೂಡುವ ಗೆರೆಗಳನ್ನು ನಿಮಗೆ ಎಲ್ಲಿಗೆ ಬೇಕೋ ಅಲ್ಲಿಗೆ ಇರಿಸಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಮ್ಯಾಂಡ್ Plus ಶಿಫ್ಟ್ Plus 4 Plus ಸ್ಪೇಸ್ ಬಾರ್.

ಕಮ್ಯಾಂಡ್ Plus ಶಿಫ್ಟ್ Plus 4 Plus ಸ್ಪೇಸ್ ಬಾರ್.

ನಿಮ್ಮ ಪರದೆಯಲ್ಲಿ ಮಲ್ಟಿಪಲ್ ವಿಂಡೋಗಳು ತೆರೆದುಕೊಂಡಿದ್ದರೆ ಮತ್ತು ನಿಮಗೆ ಒಂದು ನಿರ್ದಿಷ್ಟ ವಿಂಡೋದ ಚಿತ್ರವಷ್ಟೇ ಬೇಕಿದ್ದರೆ ಈ ಕಮ್ಯಾಂಡನ್ನು ಉಪಯೋಗಿಸಿ. ಕಮ್ಯಾಂಡ್ + ಶಿಫ್ಟ್ + 4 + ಸ್ಪೇಸ್ ಬಾರ್ ಅನ್ನು ಒಮ್ಮೆಲೆ ಒತ್ತಿದಾಗ ಕ್ಯಾಮೆರ ಐಕಾನ್ ಮೂಡುತ್ತದೆ. ಯಾವ ವಿಂಡೋದ ಸ್ಕ್ರೀನ್ ಶಾಟ್ ಬೇಕೋ ಅದರ ಮೇಲೆ ಐಕಾನನ್ನು ತೆಗೆದುಕೊಂಡು ಹೋಗಿ ಕ್ಲಿಕ್ಕಿಸಿದರೆ ಸ್ಕ್ರೀನ್ ಶಾಟ್ ಸೇವ್ ಆಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ ಬಿಲ್ಟ್ ಸ್ಕ್ರೀನ್ ಶಾಟ್ ಆ್ಯಪ್ ಗ್ರ್ಯಾಬ್ ಅನ್ನು ಉಪಯೋಗಿಸಿ.

ಇನ್ ಬಿಲ್ಟ್ ಸ್ಕ್ರೀನ್ ಶಾಟ್ ಆ್ಯಪ್ ಗ್ರ್ಯಾಬ್ ಅನ್ನು ಉಪಯೋಗಿಸಿ.

ಕೀಬೋರ್ಡ್ ಶಾರ್ಟ್ ಕಟ್ಟುಗಳೇ ಇರಬೇಕಾದರೆ ಮತ್ತೊಂದು ಆ್ಯಪ್ ಯಾಕೆ ಬೇಕೆಂದು ನೀವು ಕೇಳಬಹುದು. ಮೇಲೆ ಉಲ್ಲೇಖಿಸಿದ ಮೂರು ಆಯ್ಕೆಗಳನ್ನು ಕೊಡುವುದರ ಜೊತೆಗೆ, ಗ್ರ್ಯಾಬ್ ಆ್ಯಪ್ ನಲ್ಲಿ ನೀವು ಸ್ಕ್ರೀನ್ ಶಾಟ್ ತೆಗೆಯಲು ಟೈಮರ್ ಸೆಟ್ ಮಾಡಬಹುದು. ಸ್ಪಾಟ್ ಲೈಟಿನಲ್ಲಿ ಗ್ರ್ಯಾಬ್ ಎಂದು ಟೈಪಿಸಿ ಈ ಆ್ಯಪ್ ಅನ್ನು ತೆರೆಯಬಹುದು.

ಟರ್ಮಿನಲ್ ಬಳಸಿಕೊಂಡು ಸ್ಕ್ರೀನ್ ಶಾಟ್ ಅನ್ನು ಕಸ್ಟಮೈಸ್ ಮಾಡಿ.

ಟರ್ಮಿನಲ್ ಬಳಸಿಕೊಂಡು ಸ್ಕ್ರೀನ್ ಶಾಟ್ ಅನ್ನು ಕಸ್ಟಮೈಸ್ ಮಾಡಿ.

ಟರ್ಮಿನಲ್ ಬಳಸಿಕೊಂಡು ಸ್ಕ್ರೀನ್ ಶಾಟ್ ತೆಗೆಯುವುದಕ್ಕಾಗುವುದಿಲ್ಲ. ಆದರೆ ಅದನ್ನು ಬಳಸಿ ಸ್ಕ್ರೀನ್ ಶಾಟಿನ ಹೆಸರು, ಕಡತದ ರೀತಿ, ಅದು ಸೇವ್ ಆಗುವ ಜಾಗಗಳನ್ನು ಕಸ್ಟಮೈಜ್ ಮಾಡಿಕೊಳ್ಳಬಹುದು. ಕೆಳಗಿನ ಕಮ್ಯಾಂಡುಗಳನ್ನು ಬಳಸಿಕೊಂಡು ಕಸ್ಟಮೈಜ್ ಮಾಡಿಕೊಳ್ಳಿ.

ಸ್ಕ್ರೀನ್ ಶಾಟ್ ಕಡತದ ರೀತಿಯನ್ನು ಬದಲಿಸಲು:

defaults write com.apple.screencapturetype [type]

killall SystemUI

ಸೂಚನೆ: [type] ಜಾಗದಲ್ಲಿ jpg,bmp,pdf,tif ಅಥವಾ png ಎಂದು ಬರೆಯಿರಿ, ನಿಮ್ಮ ಅನುಕೂಲಗಳಿಗೆ ತಕ್ಕಂತೆ.

ಸ್ಕೀನ್ ಶಾಟ್ ಕಡತದ ಹೆಸರನ್ನು ಬದಲಿಸಲು:

defaults write com.apple.screencapturename [filename]

killall Sys

ಸೂಚನೆ: [file name] ಜಾಗದಲ್ಲಿ ನಿಮಗೆ ಬೇಕಾದ ಹೆಸರನ್ನು ಬರೆಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple's macOS allows its users to capture screenshots in multiple ways. While the keyboard shortcuts let you take a screenshot within seconds, the other ways take a little longer comparatively.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot