ಏಸರ್ ವಿಂಡೋಸ್ 8 ಟ್ಯಾಬ್ಲೆಟ್ ಅನಾವರಣ

Posted By: Varun
ಏಸರ್ ವಿಂಡೋಸ್ 8 ಟ್ಯಾಬ್ಲೆಟ್ ಅನಾವರಣ

ಮೊನ್ನೆ ತಾನೇ ಡೆಲ್ ಕಂಪನಿಯು ವಿಂಡೋಸ್ 8 ಆಧಾರಿತ ಡೆಲ್ ಲ್ಯಾಟಿಟ್ಯೂಡ್ ಟ್ಯಾಬ್ಲೆಟ್ ಅನ್ನು ಘೋಷಿಸಿದ್ದು, ಈಗ ತೈವಾನ್ ನ ಮುಂಚೂಣಿ ಕಂಪ್ಯೂಟರ್ ಹಾಗು ಲ್ಯಾಪ್ಟಾಪ್ ಉತ್ಪಾದಕ ಏಸರ್ ಕೂಡ ವಿಂಡೋಸ್ 8 ಆಧಾರಿತ ಎರಡು ಟ್ಯಾಬ್ಲೆಟ್ ಗಳನ್ನು ಅನಾವರಣಗೊಳಿಸಿದೆ.

ಏಷಿಯಾದ ಅತಿ ದೊಡ್ಡ ಕಂಪೂಟರ್ ಉತ್ಪನ್ನಗಳ ಪ್ರದರ್ಶನವಾದ ಕಂಪ್ಯೂಟಕ್ಸ್ ನಲ್ಲಿ ಭಾಗವಹಿಸಿದ್ದ ಏಸರ್, W510 ಹಾಗು W700 ಹೆಸರಿನ ವಿಂಡೋಸ್ 8 ಪ್ರಿವ್ಯೂ ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸಿದೆ.

ಇದಷ್ಟೇ ಅಲ್ಲದೆ, ಅಸ್ಪೈರ್ S7 ಎಂಬ ವಿಂಡೋಸ್ 8 ಆಧಾರಿತ ಮಿನಿ ಲ್ಯಾಪ್ಟಾಪ್ ಅನ್ನೂ ಅನಾವರಣ ಗೊಳಿಸಿತು ಏಸರ್. ಆಪಲ್ ನ iOS ಹಾಗು ಆಂಡ್ರಾಯ್ಡ್ ತಂತ್ರಾಂಶಗಳಿಗೆ ಸರಿಯಾದ ಉತ್ತರ ನೀಡಲು ಮೈಕ್ರೋಸಾಫ್ಟ್ ಕಾಯುತ್ತಿದ್ದು, ವಿಂಡೋಸ್ 8 ಮೂಲಕ ಟಚ್ ಸ್ಕ್ರೀನ್ ಇರುವ ಟ್ಯಾಬ್ಲೆಟ್ ಗಳಿಗೆ ಹೊಂದಾಣಿಕೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆಪಲ್ ನ ಐಪ್ಯಾಡ್ ಹಾಗು ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಗಳಿಂದ ಬಹಳಷ್ಟು ವಿಂಡೋಸ್ ಉಪಯೋಗಿಸುವ PC ಉತ್ಪಾದಕರಿಗೆ ಭಾರೀ ಹೊಡೆತ ಬಿದ್ದ ಹಿನ್ನೆಲೆಯಲ್ಲಿ, ವಿಂಡೋಸ್ 8 ಬಹುಮುಖ್ಯವಾಗಿದ್ದು, ಹಾಗಾಗಿಯೇ ಡೆಲ್ ಹಾಗು ಏಸರ್ ನಂತಹ ಕಂಪನಿಗಳು ವಿಂಡೋಸ್ 8 ಆಧಾರಿತ ಟ್ಯಾಬ್ಲೆಟ್ಗಳನ್ನು ಬಿಡಲು ಕಾತರದಿಂದ ಕಾಯುತ್ತಿವೆ. ಅಕ್ಟೋಬರ್ ಕೊನೆಯ ವೇಳೆಗೆ ವಿಂಡೋಸ್ 8 ಪೂರ್ಣ ಪ್ರಮಾಣದ ತಂತ್ರಾಂಶ ಬಿಡುಗಡೆಯಾಗಲಿದ್ದು, ಏನಾಗುತ್ತೆ ಎಂದು ಕಾಡು ನೋಡಬೇಕು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot