ಜೆಲ್ಲಿಬೀನ್ ಚಾಲಿತ ಐನೋಲ್ ನೊವೊ 9 ಟ್ಯಾಬ್ಲೆಟ್ ಬರಲಿದೆ

ಅಂದಹಾಗೆ ನೂತನ ಟ್ಯಾಬ್ಲೆಟ್‌ನಲ್ಲಿ ವಿಡಿಯೋ ಕರೆ ಸಲುವಾಗಿ ಮುಂಬದಿಯ 0.3 MP ಕ್ಯಾಮೆರಾ ಹಾಗೂ 5MP ಸಾಮರ್ತ್ಯದ ಹಿಂಬದಿಯ ಕ್ಯಾಮೆರಾ ಕೂಡಾ ನೀಡಲಾಗಿದೆ.ಇನ್ನು ಕನೆಕ್ಟಿವಿಟಿ ವಿಚಾರದಲ್ಲಿ ಹೆಚ್‌ಡಿಎಂಐ, ಯುಎಸ್‌ಬಿ, ವೈ-ಫೈ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ನೀಡಲಾಗಿದೆ. ಹಾಗೂ ನೊವೊ 9 ಅಂದಾಜು ರೂ. 13,500 ದರದಲ್ಲಿ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
ನೂತನ ಟ್ಯಾಬ್ಲೆಟ್ ಬಿಡುಗಡೆಯ ದಿನಾಂಕದ ಕುರಿರತಾಗಿ ಸಂಸ್ಥೆಯು ಈಬರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಅಂದಹಾಗೆ ಟ್ಯಾಬ್ಲೆಟ್‌ನಲ್ಲಿ ನೀಡಲಾಗಿರುವ ಫೀಚರ್ಸ್‌ಗಳನ್ನು ನೋಡಿದಲ್ಲಿ ಖರೀದಿಸಿದ ಬೆಲೆಗೆ ಯಾವುದೇ ಮೋಸವಿಲ್ಲ ಎಂಬಂತೆ ತೋರುತ್ತಿದೆ. ಮತ್ತೊಂದೆಡೆ ಸಂಸ್ಥೆಯು ನೊವೊ 10 ಹೆಸರಿನ, 10 ಇಂಚಿನ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಿಡುಗಡೆ ಮಾಡುತ್ತಿರುವುದಾಗಿಯೂ ಕೂಡಾ ವರದಿಯಾಗಿದ್ದು. ನೊವೊ 10 ಹೀರೋ ಹಾಗೂ ನೋವೋ 10 ಹೀರೋ II ಎಂಬ ಎರಡು ಮಾದರಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ನೂತ ಟ್ಯಾಬ್ಲೆಟ್‌ನಲ್ಲಿಯೂ ಕೂಡಾ ಗೂಗಲ್‌ನ ಹೊಸ ಮಾದರಿಯ ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ ನೀಡಲಾಗಿದೆ. ಹಾಗೂ ಎರಡೂ ಟ್ಯಾಬ್ಲೆಟ್‌ಗಳಲ್ಲಿ ವೈ-ಫೈ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ಸ್ ನೀಡಲಾಗಿದೆ.
ಐನೋಲ್ ನೊವೊ ಹೀರೋ II ಟ್ಯಾಬ್ಲೆಟ್‌ನಲ್ಲಿ ATM7029 ಕ್ವಾಡ್-ಕೋರ್ ಪ್ರೊಸೆಸರ್ ನೀಡಲಾಗಿದ್ದರೆ, ನೊವೊ ಹೀರೋ ನಲ್ಲಿ ಡ್ಯುಯೆಲ್-ಕೋರ್ ಆಮ್‌ಲಾಜಿಕ್ 8726-MX h ಪ್ರೊಸೆಸರ್ ನೀಡಲಾಗಿದೆ ಅಂದಹಾಗೆ ಎರಡೂ ಟ್ಯಾಬ್ಲೆಟ್‌ಗಳಲ್ಲಿ 1.5 GHZ ಸ್ಪೀಡ್ ನೀಡಲಾಗಿದೆ.
ಕಡಿಮೆ ದರದಲ್ಲಿನ ಟಾಪ್ 5 ಲ್ಯಾಪ್‌ಟಾಪ್‌ಗಳು
10.1 ಇಂಚಿನ ಟಾಪ್ 5 ಆಂಡ್ರಾಯ್ಡ್ ಐಸಿಎಸ್ ಟ್ಯಾಬ್ಲೆಟ್ಸ್


Click it and Unblock the Notifications




