ಆಪಲ್ ಏರ್‌ಪಾಡ್ಸ್ ಮ್ಯಾಕ್ಸ್, ಏರ್‌ಪಾಡ್ಸ್ ಪ್ರೊಗೆ ಬೃಹತ್ ಡಿಸ್ಕೌಂಟ್!
ಆಪಲ್ ಸಂಸ್ಥೆಯ ಸ್ಮಾರ್ಟ್ ಡಿವೈಸ್ ಖರೀದಿ ಮಾಡುವವರಿಗೆ ಇದು ಸುವರ್ಣಾವಕಾಶ ಎಂದೇ ಹೇಳಬಹುದು. ಯಾಕೆಂದರೆ ಆಪಲ್ ಐಫೋನ್ ಸೇರಿದಂತೆ ವಿವಿಧ ಡಿವೈಸ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಲಾಗುತ್ತಿದ್ದು, ಇದೀಗ ಏರ್‌ಪಾಡ್ಸ್ ಮೇಲೂ ದೊಡ್ಡ ರಿಯಾಯಿತಿ ನೀಡಲಾಗಿದೆ. ಈ ಮೂಲಕ ಕೈಗೆಟಕುವ ದರದಲ್ಲಿ ಈ ಡಿವೈಸ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಹೌದು, ಇದೀಗ ಪ್ರಮುಖ ಇ-ಕಾಮರ್ಸ್ ಸೈಟ್ ನಲ್ಲಿ ಆಪಲ್ ಏರ್‌ಪಾಡ್ಸ್ ಮ್ಯಾಕ್ಸ್ (Apple AirPods ) ಹಾಗೂ ಏರ್‌ಪಾಡ್ಸ್ ಪ್ರೊ(Airpods Pro) ಗೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದ್ದು, ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಬನ್ನಿ ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಈ ಡಿವೈಸ್‌ಗಳಿಗೆ ಆಫರ್ ಇದೆ?, ಇವುಗಳ ಪ್ರಮುಖ ಫೀಚರ್ಸ್ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಏರ್‌ಪಾಡ್ಸ್ ಮ್ಯಾಕ್ಸ್ ಫೀಚರ್ಸ್: ಈ ಡಿವೈಸ್‌ಗಳನ್ನು ಖರೀದಿ ಮಾಡುವ ಮುನ್ನ ಇವುಗಳ ಕೆಲವು ಫೀಚರ್ಸ್‌ಗಳನ್ನು ತಿಳಿದುಕೊಳ್ಳೋಣ. ಅದರಂತೆ ಈ ಡಿವೈಸ್ ಏರ್‌ಪಾಡ್ಸ್ ಮ್ಯಾಕ್ಸ್ ಆಪಲ್-ವಿನ್ಯಾಸಗೊಳಿಸಿದ ಡೈನಾಮಿಕ್ ಡ್ರೈವರ್ ಅನ್ನು ಹೊಂದಿದ್ದು, ಇದರಲ್ಲಿರುವ ಸಕ್ರಿಯ ಶಬ್ದ ರದ್ದತಿ ಆಯ್ಕೆ ಹಾಗೂ ಟ್ರಾನ್ಫರೆಂಟ್ ಮೋಡ್ ವಿಶೇಷ ಎನಿಸಿದೆ. ಉಳಿದಂತೆ ಡೈನಾಮಿಕ್ ಹೆಡ್ ಟ್ರ್ಯಾಕಿಂಗ್‌ನೊಂದಿಗೆ ವೈಯಕ್ತೀಕರಿಸಿದ ಪ್ರಾದೇಶಿಕ ಆಡಿಯೊ ಫೀಚರ್ಸ್ ಇದ್ದು, ಆಪ್ಟಿಕಲ್ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ.
ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಸಕ್ರಿಯ ಶಬ್ದ ರದ್ದತಿ ಅಥವಾ ಟ್ರಾನ್ಫರೆಂಟ್ ಮೋಡ್ ಅನ್ನು ಆನ್ ಮಾಡಿ ಬಳಕೆ ಮಾಡಿದರೆ ಒಂದು ಚಾರ್ಜ್‌ನಲ್ಲಿ 20 ಗಂಟೆಗಳವರೆಗೆ ಬ್ಯಾಕಪ್ ಪಡೆಬಹುದು. ಹಾಗೆಯೇ 5 ನಿಮಿಷಗಳ ಚಾರ್ಜ್ ಸಮಯವು ಸುಮಾರು 1.5 ಗಂಟೆಗಳ ಪ್ಲೇಬ್ಯಾಕ್ ಟೈಮ್ ಅನ್ನು ನೀಡುತ್ತದೆ. ಇದು ಐಫೋನ್, ಐಪ್ಯಾಡ್, ಮ್ಯಾಕ್ ಸೇರಿದಂತೆ ಎಲ್ಲಾ ಡಿವೈಸ್‌ಗಳಿಗೂ ಹೊಂದಿಕೊಳ್ಳುತ್ತದೆ.
ಮೊದಲ ತಲೆಮಾರಿನ ಏರ್‌ಪಾಡ್ಸ್ ಪ್ರೊ ಫೀಚರ್ಸ್: ಈ ಡಿವೈಸ್ ಕಸ್ಟಮ್ ಹೈ ಡೈನಾಮಿಕ್ ರೇಂಜ್ ಆಂಪ್ಲಿಫಯರ್ ಹಾಗೂ ಸಕ್ರಿಯ ಶಬ್ದ ರದ್ದತಿ, ಡೈನಾಮಿಕ್ ಹೆಡ್ ಟ್ರ್ಯಾಕಿಂಗ್ ನಂತಹ ವಿಶೇಷ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಡ್ಯುಯಲ್ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್, ಸ್ಕಿನ್ ಟೋನ್ ಸೆನ್ಸರ್, ಚಲನೆ-ಪತ್ತೆಹಚ್ಚುವ ವೇಗವರ್ಧಕಮ ಸ್ಪೀಚ್ ಡಿಟೆಕ್ಟಿಂಗ್ ಅಕ್ಸೆಲೆರೊಮೀಟರ್ ಟಚ್ ಕಂಟ್ರೋಲ್ ಸೆನ್ಸರ್‌ಗಳ ಸೌಲಭ್ಯ ಹೊಂದಿದೆ.
ಇನ್ನು ಏರ್‌ಪಾಡ್ಸ್ ಪ್ರೊ ಒಂದೇ ಚಾರ್ಜ್‌ನೊಂದಿಗೆ 4.5 ಗಂಟೆಗಳವರೆಗೆ ಪ್ಲೇ ಬ್ಯಾಕ್ ಟೈಮ್ ನೀಡಲಿದೆ. ಜೊತೆಗೆ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಆಯ್ಕೆಯಲ್ಲಿ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 3.5 ಗಂಟೆಗಳವರೆಗೆ ಟಾಕ್ ಟೈಮ್ ನೀಡಲಿದೆ. ಹಾಗಿದ್ರೆ, ತಡ ಯಾಕೆ ಬನ್ನಿ ಈ ಎರಡೂ ಡಿವೈಸ್‌ಗಳ ಬೆಲೆ ವಿವರ ಹಾಗೂ ಆಫರ್ ವಿವರಗಳನ್ನು ಗಮನಿಸೋಣ.
ಇನ್ನು ಏರ್‌ಪಾಡ್ ಮ್ಯಾಕ್ಸ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 39,999ರೂ.ಗಳಿಗೆ ಲಿಸ್ಟ್ ಮಾಡಲಾಗಿದೆ. ಆದರೆ, ಇದರ ಸಾಮಾನ್ಯ ದರ 59,900ರೂ.ಗಳು ಈ ಮೂಲಕ ನೀವು 19,901ರೂ.ಗಳನ್ನು ಉಳಿತಾಯ ಮಾಡಬಹುದಾಗಿದೆ. ಈ ಕೊಡುಗೆಯಲ್ಲಿ ಯಾವುದೇ ನಿಯಮಗಳು ಅಥವಾ ಷರತ್ತುಗಳಿಲ್ಲ. ಇದರ ಜೊತೆಗೆ, ನೀವು ಇಎಮ್‌ಐ ವಹಿವಾಟನ್ನು ಆರಿಸಿಕೊಂಡರೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1,250 ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು.
ಈ ಡಿವೈಸ್‌ನಲ್ಲಿ ಹಸಿರು ಮತ್ತು ಬೆಳ್ಳಿಯ ಬಣ್ಣದ ವೇರಿಯಂಟ್‌ಗೆ ಹೆಚ್ಚಿನ ಬೆಲೆ ಇದ್ದು ಈ ಎರಡೂ ವೇರಿಯಂಟ್ ಸಹ 44,999 ರೂ.ಗಳಲ್ಲಿ ಕಾಣಿಸಿಕೊಂಡಿದೆ. ಆದರೆ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳಲ್ಲಿ 3,000ರೂ.ಗಳ ಹೆಚ್ಚುವರಿ ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ, ನೀವು ಈ ಡಿವೈಸ್ ಅನ್ನು 41,999ರೂ. ಗಳಿಗೆ ಖರೀದಿ ಮಾಡಬಹುದು.

ಏರ್‌ಪಾಡ್ಸ್ ಪ್ರೊ ಫ್ಲಿಪ್‌ಕಾರ್ಟ್‌ನಲ್ಲಿ 16,990 ಆರಂಭಿಕ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದು, ಇದರ ಸಾಮಾನ್ಯ ದರ 24,900ರೂ.ಗಳು. ಇದರಿಂದಾಗಿ ನೀವು 7,910ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೇ ಮೇಲೆ ತಿಳಿಸಿದ ಬ್ಯಾಂಕ್ ಕೊಡುಗೆಗಳು ಸಹ ಈ ಡಿವೈಸ್ ಖರೀದಿಯಲ್ಲೂ ಅನ್ವಯ ಆಗುತ್ತವೆ. ಇದರಿಂದಾಗಿ ನೀವು 15,740 ರೂ.ಗಳಿಗೆ ಇಳಿಯುತ್ತದೆ.
ಎರಡನೇ ತಲೆಮಾರಿನ ಏರ್‌ಡಾಪ್ಸ್ ಪ್ರೊ: ಈ ಡಿವೈಸ್‌ಗೂ ಸಹ ಈ ವೇಳೆ ಆಫರ್ ಘೋಷಣೆ ಮಾಡಲಾಗಿದ್ದು, ಇದರ ಸಾಮಾನ್ಯ ದರ 26,900ರೂ.ಗಳಾಗಿದೆ. ಆದರೆ, ಆಸಕ್ತ ಗ್ರಾಹಕರು ಯಾವುದೇ ಬ್ಯಾಂಕ್ ಕಾರ್ಡ್ ಬಳಸದೆಯೇ ಫ್ಲಿಪ್‌ಕಾರ್ಟ್ ಮೂಲಕ 24,990ರೂ.ಗಳಲ್ಲಿಇದನ್ನು ಖರೀದಿ ಮಾಡಬಹುದು. ಇದನ್ನು ಖರೀದಿ ಮಾಡಲು ಇಎಮ್‌ಐ ಆಯ್ಕೆ ಸಹ ನೀಡಲಾಗಿದೆ.


Click it and Unblock the Notifications








