ಆಪಲ್ ಪರಿಚಯಿಸಲಿದೆ ವೇಗದ 'ಮ್ಯಾಕ್‌ಬುಕ್ ಪ್ರೊ' ಲ್ಯಾಪ್‌ಟಾಪ್!
ಟೆಕ್ ದೈತ್ಯ ಆಪಲ್ ಕಂಪನಿಯ ಮ್ಯಾಕ್‌ಬುಕ್ ಪ್ರೊ ಸರಣಿಯ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಭರ್ಜರಿ ಸೌಂಡ್‌ನಲ್ಲಿರುವ ಬೆನ್ನಲ್ಲೇ ಕಂಪನಿ ಇದೀಗ ಮತ್ತೊಂದು ಹೊಸ ಲ್ಯಾಪ್‌ಟಾಪ್ ಅನ್ನು ಮ್ಯಾಕ್‌ಬುಕ್ ಸರಣಿಗೆ ಸೇರಿಸಲು ಮುಂದಾಗಿದೆ. ಹೊಸ ಮ್ಯಾಕ್‌ಬುಕ್ ಲ್ಯಾಪ್‌ಟಾಪ್ ಪವರ್‌ಪುಲ್ ಪ್ರೊಸೆಸರ್ ಶಕ್ತಿಯನ್ನು ಒಳಗೊಂಡಿರಲಿದ್ದು, ಲ್ಯಾಪ್‌ಟಾಪ್ ಕಾರ್ಯವೈಖರಿಯ ವೇಗದಲ್ಲಿ ಇನ್ನಷ್ಟು ಅಧಿಕ ವೇಗವನ್ನು ನಿರೀಕ್ಷಿಸಬಹುದಾಗಿದೆ.

ಹೌದು, ಆಪಲ್ ಸಂಸ್ಥೆಯು ಮ್ಯಾಕ್‌ಬುಕ್ ಪ್ರೊ ಸರಣಿಯಲ್ಲಿ ಹೊಸದೊಂದು ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ನ ಡಿಸ್‌ಪ್ಲೇಯು 15 ಇಂಚಿನಲ್ಲಿರಲಿದೆ. ಅದರೊಂದಿಗೆ ಆಕ್ಟಾಕೋರ್ 6 ಮತ್ತು 8 ಪ್ರೊಸೆಸರ್ ಸಾಮರ್ಥ್ಯದ ಆಯ್ಕೆಗಳನ್ನು ಹೊಂದಿರುವ ಜೊತೆಗೆ 5GHz ಶಕ್ತಿಯ ಟರ್ಬೋ ಬೂಸ್ಟ್ ವೇಗವನ್ನು ಹೊಂದಿರಲಿದೆ. ಈ ಹಿಂದಿನ 'ಮ್ಯಾಕ್‌ಬುಕ್ ಪ್ರೊ 13' 4.5GHz ಶಕ್ತಿಯ ವೇಗದಲ್ಲಿದೆ.

ಮ್ಯಾಕ್‌ಬುಕ್ ಕೋರ್ 8 ಪ್ರೊಸೆಸರ್, ಮ್ಯಾಕ್‌ಬುಕ್ ಕೋರ್ 6 ಪ್ರೊಸೆಸರ್‌ಗಿಂತ ಶೇ.40% ಹೆಚ್ಚಿನ ಸ್ಪೀಡ್‌ನಲ್ಲಿ ಕೆಲಸ ಮಾಡಲಿದ್ದು, ಈ ಮೂಲಕ 'ಅಧಿಕ ವೇಗದ ಮ್ಯಾಕ್‌ಬುಕ್ ಪ್ರೊ' ಲ್ಯಾಪ್‌ಟಾಪ್ ಎನಿಸಿಕೊಳ್ಳುವ ಸಾಧ್ಯತೆಗಳಿವೆ. ಹಾಗಾದರೇ ಆಪಲ್ ಮ್ಯಾಕ್‌ಬುಕ್ ಪ್ರೊ 15 ಲ್ಯಾಪ್‌ಟಾಪ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪವರ್‌ಪುಲ್ ಕಾರ್ಯವೈಖರಿ
ಹೊಸ 15 ಇಂಚಿನ ಮ್ಯಾಕ್‌ಬುಕ್ ಪ್ರೊ ಆಕ್ಟಾಕೋರ್ 8 ಪ್ರೊಸೆಸರ್ ಶಕ್ತಿಯನ್ನು ಹೊಂದಿರಲಿದ್ದು, 5GHz ಟರ್ಬೋ ಬೂಸ್ಟ್ ವೇಗವನ್ನು ಪಡೆದಿರಲಿದೆ. ಇನ್ನು 4K ವಿಡಿಯೊ, 3D ರೆಂಡರಿಂಗ್, ಎಡಿಟಿಂಗ್ ಫೀಚರ್ಸ್ ಮತ್ತು ಹೈ ರೆಸಲ್ಯೂಶನ್ ಚಿತ್ರಗಳು ಸೇರಿದಂತೆ ಹಲವು ಆಯ್ಕೆಗಳಲ್ಲಿ ಬದಲಾವಣೆ ಎನಿಸಿಲಿದ್ದು, ಕೆಲಸಗಳಿಗೆ ಅಧಿಕ ವೇಗದ ಬೆಂಬಲ ನೀಡದೆ.

ವರ್ಲ್ಡ್ ಬೆಸ್ಟ್ ಪ್ರೊ ನೋಟ್‌ಬುಕ್
ಸ್ಟನ್ನಿಂಗ್ ರೇಟಿನಾ ಡಿಸ್‌ಪ್ಲೇಯ ಇದ್ದು, 500nits ಸಾಮರ್ಥ್ಯ ಬ್ರೈಟ್ನೆಸ್ ಮತ್ತು ಟ್ರೂ ಟ್ಯೂನ್ ತಂತ್ರಜ್ಞಾನವನ್ನು ಹೊಂದಿದೆ. ಹಾಗೇ ವೈಲ್ಡ್ ಸ್ಟೀರಿಯೊ ಸೌಂಡ್ ಇರಲಿದ್ದು, ಭದ್ರತೆಗಾಗಿ ಟಚ್ ID ಆಯ್ಕೆಯೊಂದಿಗೆ ಟಚ್ ಟ್ರಾಕ್‌ಪ್ಯಾಡ್ ಆಯ್ಕೆಗಳನ್ನು ಸಹ ಒಳಗೊಂಡಿದೆ.

ಮ್ಯಾಕ್Os ಮೊಜಾವೆ (macOS Mojave)
ಹೊಸ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ನಲ್ಲಿ ಮ್ಯಾಕ್‌ಓಎಸ್ ಮೊಜಾವೆ ಓಎಸ್ ಕಾರ್ಯನಡೆಸಲಿದ್ದು, ಈ ಸಿಸ್ಟಮ್‌ನಲ್ಲಿ ಡಾರ್ಕ್ ಮೋಡ್, ಆಪ್ಸ್ ನ್ಯೂಸ್, ವಾಯಿಸ್ ಮೆಮೊಸ್, ಹೋಮ್ ಟು ಮ್ಯಾಕ್ ಸೌಲಭ್ಯಗಳು ದೊರೆಯಲಿವೆ. ಫೇಸ್‌ಟೈಮ್ ಗ್ರೂಪ್ ಕಾಲಿಂಗ್ ಸೌಲಭ್ಯವನ್ನು ಹೊಂದಿವೆ.

ಇತರೆ ಸೌಲಭ್ಯಗಳು
ಆಪಲ್ ಮ್ಯಾಕ್‌ಬುಕ್ ಪ್ರೊ ನಲ್ಲಿ ಎಸ್‌ಎಸ್‌ಡಿ ಸ್ಟೋರೇಜ್ ಆಯ್ಕೆಯೊಂದಿಗೆ ಆಪಲ್ T2 ಸೆಕ್ಯುರಿಟಿ ಚಿಪ್ಪ ನೀಡಲಾಗಿದೆ. ಡೇಟಾ ಟ್ರಾನ್ಸ್‌ಫರ್‌ಗಾಗಿ ಥಂಡರ್‌ಬೋಟ್ 3 ಪೋರ್ಟ್‌ಗಳ ಆಯ್ಕೆ ಇದ್ದು, ಚಾರ್ಜಿಂಗ್ ಮತ್ತು ಕನೆಕ್ಟಿಂಗ್ ಆಯ್ಕೆಗಳನ್ನು ನೀಡಿದೆ. ಬಾಹ್ಯವಾಗಿ GPUs ಆಯ್ಕೆಗಳು ಸೇರಿರಲಿವೆ.

ಲಭ್ಯತೆ ಮತ್ತು ಬೆಲೆ
ಹೊಸ ಮ್ಯಾಕ್‌ಬುಕ್ ಪ್ರೊ 15 ಮಾದರಿಯ ಲ್ಯಾಪ್‌ಟಾಪ್ ಆರಂಭಿಕ ಬೆಲೆಯು 1,99,900ರೂ.ಗಳು ಆಗಿರಲಿದೆ. ಮತ್ತು ಮ್ಯಾಕ್‌ಬುಕ್ ಪ್ರೊ 13 ವರ್ಷನ್‌ನ ಲ್ಯಾಪ್‌ಟಾಪ್ ಆರಂಭಿಕ ಬೆಲೆಯು 1,59,900ರೂ.ಗಳು ಆಗಿದೆ. ಆಪಲ್ ಸಂಸ್ಥೆ ಅಧಿಕೃತ ಮಳಿಗೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications