ಬಹುನಿರೀಕ್ಷಿತ ಆಸೂಸ್ 'ಝೆನ್‌ಬುಕ್' ಸರಣಿ ಭಾರತದಲ್ಲಿಗ ಲಭ್ಯ.!

|

ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ಕಂಪನಿ ಆಸೂಸ್ ಈಗಾಗಲೇ ತನ್ನ ಉತ್ಪನ್ನಗಳಿಂದ ವಿಶ್ವದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಕಳೆದ ಆಸೂಸ್ ಝೆನ್ ಬುಕ್ ಲ್ಯಾಪ್‌ಟಾಪ್‌ ಸರಣಿಯನ್ನು ಬಿಡುಗಡೆ ಮಾಡುವುದಾಗಿ ಭಾರಿ ಸುದ್ದಿಯಾಗಿತ್ತು. ಇದೀಗ ಭಾರತೀಯ ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ಆಸೂಸ್ ನೀಡಿದ್ದು, ಅದೆನೆಂದರೇ ಆಸೂಸ್ ಕಂಪನಿ ತನ್ನ ಬಹುನಿರೀಕ್ಷಿತ ಝೆನ್ ಬುಕ್ ಲ್ಯಾಪ್‌ಟಾಪ್‌ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬಹುನಿರೀಕ್ಷಿತ ಆಸೂಸ್ 'ಝೆನ್‌ಬುಕ್' ಸರಣಿ ಭಾರತದಲ್ಲಿಗ ಲಭ್ಯ.!

ಹೌದು, ಗ್ರಾಹಕರು ಬಹುದಿನಗಳಿಂದ ಕಾಯುತ್ತಿದ್ದ ಆಸೂಸ್ ಝೆನ್ ಬುಕ್ ಲ್ಯಾಪ್‌ಟಾಪ್ ಸರಣಿ ಇದೀಗ ಭಾರತದಲ್ಲಿ ಲಾಂಚ್‌ ಆಗಿದ್ದು, ಈ ಝೆನ್ ಬುಕ್ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ. ಇದರೊಂದಿಗೆ ಅತೀ ತೆಳುವಾಗಿದ್ದು ಮತ್ತು ತುಂಬಾ ಹಗುರಾಗಿಯೂ ಇದೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಝೆನ್ ಬುಕ್‌ಗೆ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂಬ ವಿಶ್ವಾಸವನ್ನು ಆಸೂಸ್ ವ್ಯಕ್ತಪಡಿಸಿದೆ.

ಬಹುನಿರೀಕ್ಷಿತ ಆಸೂಸ್ 'ಝೆನ್‌ಬುಕ್' ಸರಣಿ ಭಾರತದಲ್ಲಿಗ ಲಭ್ಯ.!

ಆಸೂಸ್ ಝೆನ್ ಬುಕ್ ಸರಣಿಯಲ್ಲಿ ಒಟ್ಟು ಮೂರು ಲ್ಯಾಪ್‌ಟಾಪ್‌ಗಳಿದ್ದು, ಅವುಗಳೆಂದರೆ ಝೆನ್ ಬುಕ್ 13, ಝೆನ್ ಬುಕ್ 14 ಮತ್ತು ಝೆನ್ ಬುಕ್ 15 ಈ ಮೂರು ಲ್ಯಾಪ್‌ಟಾಪ್‌ಗಳು ಪ್ರತ್ಯಕ ಫೀಚರ್ಸ್‌ಗಳನ್ನು ಹೊಂದಿವೆ. ಹಾಗಾದರೇ ಆಸೂಸ್‌ನ ಈ ಮೂರು ಝೆನ್ ಬುಕ್‌ ಲ್ಯಾಪ್‌ಟಾಪ್‌ಗಳು ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿವೆ ಎಂದು ತಿಳಿಯಲು ಮುಂದೆ ಓದಿರಿ.

ಝೆನ್ ಬುಕ್ 13

ಝೆನ್ ಬುಕ್ 13

ಝೆನ್ ಬುಕ್ 13 ಲ್ಯಾಪ್‌ಟಾಪ್‌ ನಾಲ್ಕು ಮೂಲೆಯಲ್ಲಿ ಫ್ರೇಮ್ ಲೆಸ್‌ ರಚನೆ ಹೊಂದಿದ್ದು ಮತ್ತು ನ್ಯಾನೋ ಎಡ್ಜ್ ಆಕಾರ ಡಿಸ್‌ಪ್ಲೇ ಹೊಂದಿದೆ ಇದರೊಂದಿಗೆ ಲ್ಯಾಪ್‌ಟಾಪ್‌ನ ಡಿಸ್‌ಪ್ಲೇಯ ನಾಲ್ಕು ಮೂಲೆಯಲ್ಲಿ ಅತೀ ತಿಳುವಾದ ಅಂಚನ್ನು ಕಾಣಬಹುದು. ಸ್ಕ್ರೀನ್ ನಿಂದ ಬಾಹ್ಯ ರಚನೆ ನಡುವಿನ ಅಂತರ ಶೇ.95 ಇದ್ದು, 1.09 ಕಿ.ಗ್ರಾ ತೂಕವನ್ನು ಹೊಂದಿದೆ. ಇನ್ನೂ 13.3 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. 8GB RAM ಮತ್ತು 256/512GB ಆಂತರಿಕ ಸಂಗ್ರಹದ ಆಯ್ಕೆ ಇದೆ. ಇದರೊಟ್ಟಿಗೆ 2GB ಸಾಮರ್ಥ್ಯದ GDDR5 NVIDIA GeForce MX150 ಗ್ರಾಫಿಕ್ ಹೊಂದಿದೆ. ಕೋರ್‌ i7-8565U ಪ್ರೊಸೆಸರ್ ಇರಲಿದೆ. ಇನ್ನೂ ಇದರ ಆರಂಭಿಕ ಬೆಲೆ 71,990 ರೂ.ಗಳು.

ಝೆನ್ ಬುಕ್ 14

ಝೆನ್ ಬುಕ್ 14

ಆಸೂಸ್ ಕಂಪನಿಯ ಝೆನ್ ಬುಕ್ 14 ನೋಡಲು ಆಕರ್ಷಕವಾಗಿದ್ದು, ತೆಳುವಾಗಿಯು ಮತ್ತು ಹಗುರಾಗಿಯು ಇದೆ. ಸ್ಕ್ರೀನ್ ಸುತ್ತಲು ಕಡಿಮೆ ಅಂಚು ಇರುವ 13.3 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಕೋರ್‌ i7-8565U ಪ್ರೊಸೆಸರ್ ನೊಂದಿಗೆ 2GB ಸಾಮರ್ಥ್ಯ ಹೊಂದಿದ Nvidia GeForce MX150 GPU ಗ್ರಾಫಿಕ್ ಇದರಲ್ಲಿದೆ. ಇನ್ನೂ ಇದರ ತೂಕ 1.19ಕಿ.ಗ್ರಾಂ ಆಗಿದೆ. ಆಸೂಸ್ ಸೋನಿಕ್ ಮಾಸ್ಟರ್ ಆಡಿಯೋ ಸಿಸ್ಟಂ ಇದರಲ್ಲಿ ಇರಲಿದೆ. ಇನ್ನೂ ಇದರ ಆರಂಭಿಕ ಬೆಲೆ 72,990 ರೂ.ಗಳು.

ಝೆನ್ ಬುಕ್ 15

ಝೆನ್ ಬುಕ್ 15

ಝೆನ್ ಬುಕ್ 15 ಲ್ಯಾಪ್‌ಟಾಪ್‌ ಸಹ ಅತೀ ಹೆಚ್ಚು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಎಡ್ಜ್ ಟು ಎಡ್ಜ್ ಡಿಸೈನ್ ಅದ್ಭುತವಾಗಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ 1920 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ ಡಿಸ್‌ಪ್ಲೇ ಆಗಿದೆ. ಈ ಲ್ಯಾಪ್‌ಟಾಪ್‌ ಸಹ ಕೋರ್‌ i7-8565U ಪ್ರೊಸೆಸರ್ ನಲ್ಲಿ ಕೆಲಸಮಾಡಲಿದೆ ಇದರೊಟ್ಟಿಗೆ 16GB RAM ಮತ್ತು 1TB ಸಂಗ್ರಹ ಸಾಮರ್ಥ್ಯ ಹೊಂದಿದೆ. 17 ಗಂಟೆಗಳ ಬ್ಯಾಟರಿ ಬಾಳಿಕೆ ಶಕ್ತಿ ಹೊಂದಿದೆ. ಇದರ ಆರಂಭಿಕ ಬೆಲೆ 1,39,990 ರೂ.ಗಳು.

Best Mobiles in India

English summary
Asus ZenBook 13, ZenBook 14 and ZenBook 15 feature NanoEdge display and NumberPad design.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X