ಬ್ಲ್ಯಾಕ್ ರೇಟಿನಲ್ಲಿ ಗೂಗಲ್ ಟ್ಯಾಬ್ಲೆಟ್ ಮಾರಾಟ !

Posted By: Varun
ಬ್ಲ್ಯಾಕ್ ರೇಟಿನಲ್ಲಿ ಗೂಗಲ್ ಟ್ಯಾಬ್ಲೆಟ್ ಮಾರಾಟ !

ಅಸುಸ್ ಉತ್ಪಾದಿತ ನೆಕ್ಸಸ್ 7 ಹೆಸರಿನ ಗೂಗಲ್ ಟ್ಯಾಬ್ಲೆಟ್ ಯಾವಾಗಪ್ಪಾ ಭಾರತಕ್ಕೆ ಬರುತ್ತೆ ಅಂತ ಕಾಯ್ತಾ ಇರೋ ಸುಮಾರು ಜನರಿಗೆ ಒಂದು ಸಂತೋಷದ ಹಾಗು ಸ್ವಲ್ಪ ಬೇಜಾರಾಗುವಂಥ ಸುದ್ದಿ ಬಂದಿದೆ.

ಅದೇನೆಂದರೆ ಈಗಾಗಲೇ ಅಮೇರಿಕಾ, ಯುಕೆ, ಆಸ್ಟ್ರೇಲಿಯಾ ಹಾಗು ಕೆನಡಾದಲ್ಲಿ ಬಿಡುಗಡೆಯಾಗಿ ಭಾರೀ ಮಾರಾಟವಾಗುತ್ತಿರುವ ನೆಕ್ಸಸ್ 7 ಭಾರತಕ್ಕೆ ಬರುವುದು ಇನ್ನೂ ಎರಡು ತಿಂಗಳಾಗುವುದರಿಂದ ಇಲ್ಲಿರುವ ಬೇಡಿಕೆಯನ್ನು ಪೂರೈಸಲು ebay.in ಆಗಲೇ ಆನ್ಲೈನ್ ಮಾರಾಟ ಶುರು ಮಾಡಿಕೊಂಡಿದೆ, ಅದೂ ಬ್ಲ್ಯಾಕ್ ರೇಟಿನಲ್ಲಿ.

ಸುಮಾರು 11 ಸಾವಿರಕ್ಕೆ ಗೂಗಲ್ ಅಧೀಕೃತವಾಗಿ ಬಿಡುಗಡೆ ಮಾಡುವ ಅಂದಾಜಿತ್ತು. ಅದು ಬಿಡುಗಡೆ ಮಾಡುವುದು ಲೇಟಾಗುವುದರಿಂದ ಬೇಡಿಕೆ ಪೂರೈಸಲು ಇಬೆ ಈಗ 8 GB ಆವೃತ್ತಿಯನ್ನು 17,690 ರೂಪಾಯಿಗೆ ಹಾಗು 16 GB ಆವೃತ್ತಿಯನ್ನು 21,690 ರೂಪಾಯಿಗೆ ಮಾರಾಟ ಮಾಡುತ್ತಿದ್ದು, ಬುಕ್ ಮಾಡಿದ 15 ದಿನಗಳ ಒಳಗೆ ebay.in ನಿಮ್ಮ ಮನಗೆ ಟ್ಯಾಬ್ಲೆಟ್ ತಲುಪಿಸುವುದಾಗಿ ಹೇಳಿಕೊಂಡಿದೆ.

ಅಮೆರಿಕಾದಲ್ಲಿ ನೆಕ್ಸಸ್ 7 ಟ್ಯಾಬ್ಲೆಟ್ ನ 8 GB ಅನ್ನು 199 ಡಾಲರ್ (11 ಸಾವಿರ ರೂಪಾಯಿ) ಹಾಗು 16 GB ಅನ್ನು 249 ಡಾಲರ್ (13,500 ರೂಪಾಯಿ) ಮಾರಾಟ ಮಾಡುತ್ತಿದೆ.

6 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಮಾರಾಟ ಮಾಡುತ್ತಿರುವ ಇಬೆ ನಿಜಕ್ಕೂ ಅವಕಾಶವಾದಿ. ಏನಂತೀರ ?

 

ಗೂಗಲ್ ಟ್ಯಾಬ್ಲೆಟ್ ವಿಶೇಷತೆ ಏನು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot