ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

ಈಗ ಜಿಯೋ ಸಿಮ್ ಹಾಕಬಹುದಾದ ಲಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ. ಕಾರಣ ಈಗಾಗಲೇ 4G ಡೇಟಾ ರುಚಿ ಹತ್ತಿಸಿದಂತೆ, ಬ್ರಾಡ್‌ ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿದೆ. ಅದೇ ಮಾದರಿಯಲ್ಲಿ ಡಿಟಿಹೆಚ್ ಸೇವೆಯನ್ನು ಸಹ. ಈಗ ಜಿಯೋ ಸಿಮ್ ಹಾಕಬಹುದಾದ ಲಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ.

ಓದಿರಿ: ಜಿಯೋ ದಿಂದ ಮತ್ತಷ್ಟು ಆಕರ್ಷಕ ಆಫರ್‌ಗಳು..!?! ಏಪ್ರಿಲ್ 15ಕ್ಕೇ ಜಿಯೋ ಪ್ಲಾನ್ ಏನು..?

ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

ಜಿಯೋ 4G ಲಾಪ್ ಟಾಪ್‌ಗಳು ಕಂಪ್ಯೂಟರ್ ಲೋಕದಲ್ಲಿ ಹೊಸ ಭಾಷ್ಯವನ್ನು ಬರೆಯಲಿದ್ದು, ಈಗಾಗಲೇ ಜಿಯೋ ಗ್ರಾಹಕರು ಜಿಯೋ ಲಾಪ್‌ಟಾಪ್ ಖರೀದಿ ಮಾಡಲು ತುದಿಗಾಗಲಿನಲ್ಲಿ ನಿಂತಿದ್ದಾರೆ. ಕಾರಣ ಜಿಯೋ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಲಾಪ್‌ಟಾಪ್‌ಗಳನ್ನು ನೀಡಲಿದೆ ಎನ್ನುವ ವಿಶ್ವಾಸವು ಗ್ರಾಹಕರ ಮನದಲ್ಲಿ ಮನೆ ಮಾಡಿದೆ. ಈ ಕಾರಣದಿಂದ ಶೀಘ್ರವೇ ಜಿಯೋ 4G ಲ್ಯಾಪ್‌ಟಾಪ್ ಬಿಡುಗಡೆಯಾಗಲಿದೆ.

ಓದಿರಿ: ನೀವಿಗಲೂ ಮೂರು ತಿಂಗಳು ಜಿಯೋ ಉಚಿತ ಸೇವೆ ಪಡೆಯಬಹುದು..! ಹೇಗೆ..?

ಜಿಯೋ 4G ಲ್ಯಾಪ್‌ಟಾಪ್ ಎಲ್ಲಿ ಲಭ್ಯ..?

ಜಿಯೋ 4G ಲ್ಯಾಪ್‌ಟಾಪ್ ಎಲ್ಲಿ ಲಭ್ಯ..?

ಜಿಯೋ 4G ಲ್ಯಾಪ್‌ಟಾಪ್ ಶೀಘ್ರವೇ ಬಿಡುಗಡೆಯಾಗಲಿದ್ದು, ಅದುವೇ ಮೊದಲಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾತ್ರ ದೊರೆಯಲಿದೆ. ಸದ್ಯ ದೇಶದ ದೈತ್ಯ ಆನ್‌ಲೈನ್ ಶಾಂಪಿಂಗ್ ತಾಣಗಳಾದ ಅಮೇಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಜಿಯೋ ಲಾಪ್‌ಟಾಪ್ ಸೇಲ್ ಆರಂಭವಾಗಲಿದೆ.

ಜಿಯೋ 4G ಲ್ಯಾಪ್‌ಟಾಪ್ ಬೆಲೆ ಎಷ್ಟು..?

ಜಿಯೋ 4G ಲ್ಯಾಪ್‌ಟಾಪ್ ಬೆಲೆ ಎಷ್ಟು..?

ಸದ್ಯ ಸದ್ದು ಮಾಡುತ್ತಿರುವ ಜಿಯೋ 4G ಲ್ಯಾಪ್‌ಟಾಪ್ ಕುರಿತಂತೆ ಜಿಯೋ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡದಿದ್ದರೂ, ಈ ಕುರಿತಂತೆ ಅನೇಕ ವಿಷಯಗಳ ಮಾಹಿತಿ ಸೋರಿಕೆಯಾಗಿದೆ. ಹಾಗಾಗಿ ಈ ಜಿಯೋ 4G ಲ್ಯಾಪ್‌ಟಾಪ್ ಬೆಲೆಯೂ 29,999 ರೂಗಳಾಗಲಿದೆ ಎನ್ನಲಾಗಿದೆ.

ಜಿಯೋ 4G ಲ್ಯಾಪ್‌ಟಾಪ್:

ಜಿಯೋ 4G ಲ್ಯಾಪ್‌ಟಾಪ್:

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ 1920 x 1080 p ರೆಸಲ್ಯೂಷನ್‌ನ Full HD ಗುಣಮಟ್ಟ 13.3 ಇಂಚಿನ ಡಿಸ್‌ಪ್ಲೇ ಅಳವಡಿಸಲಾಗಿದೆ. HD ಕ್ಯಾಮೆರಾ, ವೇಗದ ಕಾರ್ಯಚರಣೆಗೆ 4GB RAM, ಇನ್‌ಟೆಲ್ ಪೆನ್‌ಟಿಮ್ ಕ್ವಾಡ್ ಕೋರ್ ಪ್ರೋಸೆಸರ್ ಇದೆ. 64 GB ಇಂಟರ್‌ನಲ್ ಮೆಮೊರಿ ಹೊಂದಿದೆ.

ಜಿಯೋ 4G ಲ್ಯಾಪ್‌ಟಾಪ್‌ ವಿಶೇಷತೆಗಳು:

ಜಿಯೋ 4G ಲ್ಯಾಪ್‌ಟಾಪ್‌ ವಿಶೇಷತೆಗಳು:

4G LTE ಸಪೋರ್ಟ್‌ ಮಾಡುವ ಜಿಯೋ 4G ಲಾಪ್‌ಟಾಪ್‌ಗಳು ಕೊಂಚ ಭಿನ್ನವಾಗಿದೆ. ಬ್ಲೂಟೂಟ್ 4.0, ಎರಡು USB 3.0 ಪೋರ್ಟ್‌ಗಳು, ಮೈಕ್ರೋ HDMI ಪೋರ್ಟ್‌ಗಳು, ಹಾಗೂ ಮೈಕ್ರೋ SD ಕಾರ್ಡ್ ಹಾಕುವ ಸ್ಲಾಟ್ ಗಳನ್ನು ಹೊಂದಿರಲಿದೆ. ಇದರಲ್ಲಿ ಜಿಯೋ ಸಿಮ್ ಹಾಕುವ ಸ್ಲಾಟ್ ಇರಲಿದ್ದು, ಇದರಲ್ಲಿಯೇ ಕರೆ ಸ್ವೀಕರಿಸುವ ಮತ್ತು ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಡೇಟಾ ಬಳಕೆಯನ್ನು ಮಾಡಬಹುದಾಗಿದೆ.

Best Mobiles in India

Read more about:
English summary
we will tell you about a new product of Jio. As of now, Jio is going to launch 4G laptop of their own. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X