Home
ಸುದ್ದಿಜಾಲ

ಚಿಂತಿಸ ಬೇಡಿ.! ನೀವಿಗಲೂ ಮೂರು ತಿಂಗಳು ಜಿಯೋ ಉಚಿತ ಸೇವೆ ಪಡೆಯಬಹುದು..! ಹೇಗೆ..?

ಜಿಯೋ ಮತ್ತೇ ಮೂರು ತಿಂಗಳು ನೀಡಿದ್ದ ಉಚಿತ ಸೇವೆಯನ್ನು ಕೊನೆಗಾಣಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಜಿಯೋ ತನ್ನ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ಕೈಬಿಟ್ಟಿದೆ.

By Srinidhi

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಉಚಿತ ಸೇವೆಯನ್ನು ನೀಡಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದರೂ ಟ್ರಾಯ್ ಇದಕ್ಕೆ ಆಸ್ಪದ ನೀಡುತ್ತಿಲ್ಲ. ತನ್ನ ನಿಯಾಮವಳಿಗಳನ್ನು ಮೀರಿ ಜಿಯೋ ತನ್ನ ಕಾರ್ಯಚರಣೆ ನಡೆಸುತ್ತಿದೆ ಎಂದು ಹೇಳಿ, ಜಿಯೋ ಮತ್ತೇ ಮೂರು ತಿಂಗಳು ನೀಡಿದ್ದ ಉಚಿತ ಸೇವೆಯನ್ನು ಕೊನೆಗಾಣಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಜಿಯೋ ತನ್ನ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ಕೈಬಿಟ್ಟಿದೆ.

ಚಿಂತಿಸ ಬೇಡಿ.! ನೀವಿಗಲೂ ಮೂರು ತಿಂಗಳು ಜಿಯೋ ಉಚಿತ ಸೇವೆ ಪಡೆಯಬಹುದು..!

ಓದಿರಿ: ಎಗ್ಗಿಲ್ಲದೇ ಡೇಟಾ ಬಳಸುವ ಜಿಯೋ ಪ್ರೈಮ್ ಮೆಂಬರ್‌ಗಳ ಗಮನಕ್ಕೆ...!

ಆದರೆ ಜಿಯೋ ಗ್ರಾಹಕರು ಮತ್ತೆ ಮೂರು ತಿಂಗಳ ಉಚಿತ ಸೇವೆಯ ಲಾಭವನ್ನು ಪಡೆಯಬಹುದಾಗಿದೆ, ಆದರೆ ಈ ಮೂರು ತಿಂಗಳ ನಂತರ ಜಿಯೋ ಸೇವೆಗೆ ಹಣವನ್ನು ಪಾವತಿ ಮಾಡಲೇಬೇಕಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ಗ್ರಾಹಕರು ಮತ್ತೆ ಮೂರು ತಿಂಗಳ ಉಚಿತ ಸೇವೆಯನ್ನು ಪಡೆಯುವುದು ಹೇಗೆ ಮತ್ತು ಎಲ್ಲಿ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಓದಿರಿ: ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಮತ್ತೆ ಮೂರು ತಿಂಗಳ ಉಚಿತ ಸೇವೆ:

ಮತ್ತೆ ಮೂರು ತಿಂಗಳ ಉಚಿತ ಸೇವೆ:

ಜಿಯೋ ಟ್ರಾಯ್ ಆದೇಶದಂತೆ ಜಿಯೋ ಸಮರ್ ಸರ್ಪ್ರೈಸ್ ಆಫರ್ ಅನ್ನು ಕೊನೆ ಮಾಡಿದೆಯಾದರೂ, ಈ ಸೇವೆಯ ಲಾಭವನ್ನು ಪಡೆಯಲು ಏಪ್ರಿಲ್ 15ರ ವರೆಗೂ ಅವಕಾಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಯಾರು ಈ ಸಮ್ಮರ್ ಸರ್ಪ್ರೈಸ್ ಆಫರ್ ಲಾಭವನ್ನು ಪಡೆದಿಲ್ಲವೋ ಅವರೆಲ್ಲರೂ ಶೀಘ್ರವೇ ಈ ಸೇವೆಯನ್ನು ನಿಮ್ಮದಾಗಿಸಿಕೊಳ್ಳಿ.

ಉಚಿತ ಸೇವೆಯನ್ನು ಪಡೆದುಕೊಳ್ಳುವುದು ಎಲ್ಲಿ..?

ಉಚಿತ ಸೇವೆಯನ್ನು ಪಡೆದುಕೊಳ್ಳುವುದು ಎಲ್ಲಿ..?

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಸದ್ಯ ಜಿಯೋ ಅಧಿಕೃತ ವೆಬ್ ಸೈಟ್ ಮತ್ತು ಜಿಯೋ ಆಪ್‌ನಲ್ಲಿ ಲಭ್ಯವಿದ್ದು, ಈ ಸೇವೆಯನ್ನು ಪಡೆಯಲು ಇಚ್ಛಿಸುವ ಗ್ರಾಹಕರು ಶೀಘ್ರವೇ 303ರೂ. ಗಳಿಗೆ ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಮತ್ತೆ ಮೂರು ತಿಂಗಳ ಉಚಿತ ಸೇವೆ ಪಡೆಯುವುದು ಹೇಗೆ..?

ಮತ್ತೆ ಮೂರು ತಿಂಗಳ ಉಚಿತ ಸೇವೆ ಪಡೆಯುವುದು ಹೇಗೆ..?

ಮತ್ತೆ ಮೂರು ತಿಂಗಳ ಜಿಯೋ ಉಚಿತ ಸೇವೆಯನ್ನ ಪಡೆದುಕೊಳ್ಳಲು ನೀವು ಮೊದಲು ಜಿಯೋ ಪ್ರೈಮ್ ಸದಸ್ಯರಾಗಬೇಕಾಗಿದೆ. ಇದಾದ ಮೇಲೆ ಜಿಯೋ ಆಪ್ ಅಥವಾ ಜಿಯೋ ವೆಬ್ ಓಪನ್ ಮಾಡಿದ ಸಂದರ್ಭದಲ್ಲಿ ಪ್ರೈಮ್ ಪ್ಲಾನ್ ಜೊತೆಯಲ್ಲೇ ಜಿಯೋ ಸಮ್ಮರ್ ಸರ್ಫ್ರೈಸ್ ಆಫರ್ ನ ವಿವರಣೆಗಳು ದೊರೆಯಲಿದೆ. ಇದು ನಿಮಗೆ ಆಫರ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯಕಾರಿಯಾಗಲಿದೆ.

Best Mobiles in India

English summary
Jio Summer Surprise offer cancelled in accordance with TRAI order. You can still avail Jio Summer Surprise benefits. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+