Subscribe to Gizbot

ಶಿಯೋಮಿಗೆ ಸೆಡ್ಡು: ಡೆಲ್‌ನಿಂದ ನಾಲ್ಕು ಗೇಮಿಂಗ್ ಲ್ಯಾಪ್‌ಟಾಪ್ ಲಾಂಚ್..!

Written By:

ಮಾರುಕಟ್ಟೆಗೆ ಹೊಸ ಮಾದರಿಯ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಶಿಯೋಮಿ ಲಾಂಚ್ ಮಾಡಿದ್ದ ಬೆನ್ನಲೇ, ಲ್ಯಾಪ್‌ಟಾಪ್ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ದೈತ್ಯ ಡೆಲ್ ನೂತನ G ಸರಣಿಯ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. ಸದ್ಯಕ್ಕೆ ಚೀನಾ ಮತ್ತು ಅಮೆರಿಕಾ ಮಾರುಕಟ್ಟೆಯಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ಈ ಡೆಲ್‌ ಗೇಮಿಂಗ್ ಲ್ಯಾಪ್‌ಟಾಪ್‌ಗಳು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

ಶಿಯೋಮಿಗೆ ಸೆಡ್ಡು: ಡೆಲ್‌ನಿಂದ ನಾಲ್ಕು ಗೇಮಿಂಗ್ ಲ್ಯಾಪ್‌ಟಾಪ್ ಲಾಂಚ್..!

ಡೆಲ್ ಹೊಸದಾಗಿ G ಸರಣಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯ ಮಾಡಿದ್ದು, G3 15 ಮತ್ತು G3 17, G5 15 ಮತ್ತು G7 15 ಲ್ಯಾಪ್‌ಟಾಪ್‌ಗಳನ್ನು ಗೇಮೆರ್ ಗಳಿಗಾಗಿಯೇ ವಿನ್ಯಾಸ ಮಾಡಲಾಗಿದೆ. ಈ ಲ್ಯಾಪ್‌ಟಾಪ್‌ಗಳಲ್ಲಿ 8 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೋಸೆಸರ್ ಅವಡಿಸಿದ್ದು, ನವೀಡಾ ಜಿಫೋರ್ಸ್ GTX 10 ಸರಣಿಯ GPUವನ್ನು ಹೊಂದಿವೆ. ಅಲ್ಲದೇ 4K ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಶಿಯೋಮಿ ಲ್ಯಾಪ್‌ಟಾಪ್‌ಗೆ ಸೆಡ್ಡು ಹೊಡೆಯಲಿದೆ ಎನ್ನುವ ಮಾತು ಕೇಳಿಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
G3 15 ಮತ್ತು G3 17 ಲ್ಯಾಪ್‌ಟಾಪ್:

G3 15 ಮತ್ತು G3 17 ಲ್ಯಾಪ್‌ಟಾಪ್:

ಡೆಲ್ G3 ಸರಣಿಯಲ್ಲಿ ಎರಡು ಲ್ಯಾಪ್ ಟಾಪ್‌ಗಳನ್ನು ಲಾಂಚ್ ಮಾಡಿದ್ದು, G3 15 ಮತ್ತು G3 17 ಲ್ಯಾಪ್‌ಟಾಪ್‌ಗಳು ಕ್ರಮವಾಗಿ 15 ಇಂಚಿನ ಮತ್ತು 17 ಇಂಚಿನ ಡಿಸ್‌ಪ್ಲೇಯನ್ನು ಹೊಂದಿವೆ. ಈ ಲ್ಯಾಪ್ ಟಾಪ್ ಗಳಲ್ಲಿ ಪವರ್ ಫುಲ್ GPU ಅಳವಡಿಸಲಾಗಿದ್ದು, ನವೀಡಾ ಜಿಫೋರ್ಸ್ GTX 1050 ಜೊತೆಗೆ 1060 ಮ್ಯಾಕ್ಸ್ Q GPU ನೊಂದಿಗೆ ಕಾಣಿಸಿಕೊಂಡಿದ್ದು, ಹೆಚ್ಚಿನ ಗ್ರಾಫಿಕ್ಸ್ ಪ್ಲೇ ಮಾಡಲಿದೆ. ಈ ಲ್ಯಾಪ್‌ಗಳಲ್ಲಿ ಕೋರ್ i7 CPU ವನ್ನು ನೀಡಲಾಗಿದೆ.

G5 15 ಮತ್ತು G7 15 ಲ್ಯಾಪ್ ಟಾಪ್:

G5 15 ಮತ್ತು G7 15 ಲ್ಯಾಪ್ ಟಾಪ್:

ಡೆಲ್ G5 15 ಮತ್ತು G7 15 ಲ್ಯಾಪ್ ಟಾಪ್‌ಗಳು ಉತ್ತಮ ಹಾರ್ಡ್‌ವೇರ್ ಅನ್ನು ಹೊಂದಿದೆ. ಈ ಎರಡು ಲ್ಯಾಪ್ ಟಾಪ್ ಗಳಲ್ಲಿ ನವೀಡಾ ಜಿಫೋರ್ಸ್ GTX 1050 ಜೊತೆಗೆ 1060 ಮ್ಯಾಕ್ಸ್ Q GPU ಅಳವಡಿಸಲಾಗಿದ್ದು, G7 15ನಲ್ಲಿ 8ನೇ ತಲೆಮಾರಿನ ಕೋರ್ i7 ಮತ್ತು ಕೋರ್ i9 ಪ್ರೊಸೆಸರ್ ಅನ್ನು ಕಾಣಬಹುದಾಗಿದೆ. ಡ್ಯುಯಲ್ ಕೂಲಿಂಗ್ ಫ್ಯಾನ್ ಮತ್ತು 4K ಗುಣಮಟ್ಟದ ಡಿಸ್‌ಪ್ಲೇಯನ್ನು ನೋಡಬಹುದಾಗಿದೆ.

ಬೆಲೆಗಳು:

ಬೆಲೆಗಳು:

ಈ ನಾಲ್ಕು ಲ್ಯಾಪ್‌ಟಾಪ್‌ಗಳು ವಿಂಡೋಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಗೇಮ್ ಗಳನ್ನು ಆಡಲು ಹೇಳಿ ಮಾಡಿಸಿದಂತೆ ಇದೆ. ಭಾರತದಲ್ಲಿ ಈ ಲ್ಯಾಪ್‌ಟಾಪ್‌ಗಳು ಕೆಲವು ದಿನಗಳ ನಂತರದಲ್ಲಿ ಮಾರಾಟವಾಗಲಿದ್ದು, G3 15 ಮತ್ತು G3 17 ಲ್ಯಾಪ್‌ಟಾಪ್ ಕ್ರಮವಾಗಿ ರೂ.49,000 ಮತ್ತು ರೂ.52000ರ ಅಸುಪಾನಿನಲ್ಲಿ ಲಭ್ಯವಿರಲಿದೆ. ಇದೇ ಮಾದರಿಯಲ್ಲಿ G5 15 ರೂ.55,300ಗಳ ಆಸುಪಾಸಿನಲ್ಲಿ ದೊರೆಯುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್ ಲಿನೊವೊ K8 ಪ್ಲಸ್ ಬೆಲೆಯಲ್ಲಿ ರೂ.3000 ಕಡಿತ..!

English summary
Dell Launches Four Entry-Level Gaming Laptops Running Windows 10. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot