Subscribe to Gizbot

ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್ ಲಿನೊವೊ K8 ಪ್ಲಸ್ ಬೆಲೆಯಲ್ಲಿ ರೂ.3000 ಕಡಿತ..!

Written By:

ಲಿನೊವೊ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್ ಕಂಪನಿಗಳಲ್ಲಿ ಒಂದಾಗಿದ್ದು, ಮಾರುಕಟ್ಟೆಗೆ ಈ ಹಿಂದೆ ಬಿಡುಗಡೆ ಮಾಡಿದ್ದ ಲಿನೊವೊ K8 ಪ್ಲಸ್ ಸ್ಮಾರ್ಟ್‌ಪೋನ್, ಹೆಚ್ಚಿನ ಬಳಕೆದಾರರನ್ನು ಸೆಳೆದಿದ್ದಲ್ಲದೇ, ಡ್ಯುಯಲ್ ಕ್ಯಾಮೆರಾ ಹೊಂದಿರುವ ಉತ್ತಮ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು. ಅಲ್ಲದೇ ದೊಡ್ಡ ಬ್ಯಾಟರಿಯನ್ನು ಸಹ ಇದರಲ್ಲಿ ನೀಡಲಾಗಿತ್ತು. ಸದ್ಯ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರೂ.3000 ಕಡಿತವಾಗಿದ್ದು, ರೂ.7,999ಕ್ಕೆ ಫ್ಲಿಪ್‌ಕಾರ್ಟಿನಲ್ಲಿ ಮಾರಾಟವಾಗಲಿದೆ.

ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್ ಲಿನೊವೊ K8 ಪ್ಲಸ್ ಬೆಲೆಯಲ್ಲಿ ರೂ.3000 ಕಡಿತ..!

ಇದಲ್ಲದೇ ಫ್ಲಿಪ್‌ಕಾರ್ಟಿನಲ್ಲಿ ಲಿನೊವೊ K8 ಪ್ಲಸ್ ಸ್ಮಾರ್ಟ್‌ಪೋನ್ ಕೊಳ್ಳುವವರು ಅನೇಕ ಆಫರ್‌ಗಳನ್ನು ಪಡೆಯಬಹುದಾಗಿದ್ದು, ರೂ. 7500 ವರೆಗೂ ಎಕ್ಸ್‌ಚೇಂಜ್ ಆಫರ್, ನೋ ಕಾಸ್ಟ್ EMI ಆಯ್ಕೆಯೂ ಸಹ ಇದರೊಂದಿಗಿದೆ. ಅಲ್ಲದೇ ಆಕ್ಸಿಸ್ ಬ್ಯಾಂಕ್ ಕಾರ್ಡುದಾರರು ಹೆಚ್ಚುವರಿ 5% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಲಿನೊವೊ K8 ಪ್ಲಸ್ ಸ್ಮಾರ್ಟ್‌ಪೋನ್ ನಲ್ಲಿ ಒಕ್ಟಾ-ಕೋರ್ ಮೀಡಿಯಾಟೆಕ್ P25 ಪ್ರೊಸೆಸರ್ ಕಾಣಬಹುದಾಗಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್ ಲಿನೊವೊ K8 ಪ್ಲಸ್ ಬೆಲೆಯಲ್ಲಿ ರೂ.3000 ಕಡಿತ..!

ಲಿನೊವೊ K8 ಪ್ಲಸ್ ಸ್ಮಾರ್ಟ್‌ಪೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, . 13MP + 5MP ಕ್ಯಾಮೆರಾಗಳನ್ನು ಕಾಣಬಹುದಾಗಿದೆ. ಅಲ್ಲದೇ 8 MP ಸೆಲ್ಫೀ ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಲೆನೋವೋ ಕೆ8 ಪ್ಲಸ್ ಚಿತ್ರದಲ್ಲಿರುವಂತೆ ಫೋನ್ 3.5mm ಹೆಡ್ಫೋನ್ ಜಾಕ್, ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಲಭ್ಯವಿರಲಿದೆ. ಲಿನೊವೊ K8 ಪ್ಲಸ್ ಸ್ಮಾರ್ಟ್‌ಪೋನ್ 4000mAh ಬ್ಯಾಟರಿ ನೀಡಲಾಗಿದ್ದು, ಇದೇ ಸ್ಮಾರ್ಟ್‌ಫೋನ್ ಹೈಲೈಟ್‌ಗಳಲ್ಲಿ ಒಂದು ಎನ್ನಲಾಗಿದೆ.

English summary
Lenovo K8 Plus gets price cut of Rs 3,000 on Flipkart. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot