ಗೌಪ್ಯತಾ ನೀತಿಯನ್ನು ಸರಳಗೊಳಿಸಿದ ಫೇಸ್‌ಬುಕ್
ತನ್ನ ಅತೀ ದೀರ್ಘವಾದ ಗೌಪ್ಯತಾ ನೀತಿಯನ್ನು ಸರಳಗೊಳಿಸುವ ಮತ್ತು ಅದು ಜಾಹೀರಾತಿಗೆ ಹೇಗೆ ಗುರಿಯನ್ನಿರಿಸಿದೆ ಎಂಬುದನ್ನು ತನ್ನ 1.35 ಬಿಲಿಯನ್ ಬಳಕೆದಾರರಿಗೆ ವಿವರಿಸಲು ಫೇಸ್‌ಬುಕ್ ಮುಂದಾಗಿದೆ.
ಜಗತ್ತಿನ ಅತಿ ದೊಡ್ಡ ಆನ್‌ಲೈನ್ ಸಾಮಾಜಿಕ ನೆಟ್‌ವರ್ಕ್ ಜನರು ತಮ್ಮ ಸೈಟ್‌ನಲ್ಲಿ ಹಂಚಿಕೊಂಡ ಮಾಹಿತಿಯನ್ನು ಬಳಸುತ್ತದೆ, ಅಪ್ಲಿಕೇಶನ್‌ನೊಂದಿಗೆ ಅವರು ಭೇಟಿ ನೀಡಿರಬಹುದಾದ ಹೊರಗಿನ ವೆಬ್‌ಸೈಟ್‌ಗಳನ್ನು ಬಳಸಿಕೊಂಡು, ಜಾಹೀರಾತು ಅವರಿಗೆ ಎಷ್ಟು ಪ್ರಮುಖವಾಗಿದೆ ಎಂಬುದನ್ನು ಫೇಸ್‌ಬುಕ್ ತಿಳಿಸಲು ಮುಂದಾಗಿದೆ. ಜಾಹೀರಾತಿನಿಂದ ತನ್ನ ಉತ್ಪನ್ನ ಗಳಿಕೆಯಲ್ಲಿ ಫೇಸ್‌ಬುಕ್ ವರ್ಷದಿಂದ ವರ್ಷಕ್ಕೆ ಆದಾಯವನ್ನು ಗಳಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ಮೊಬೈಲ್ ಸಂಖ್ಯೆ ಬಳಸದೇ ವಾಟ್ಸಾಪ್ ಖಾತೆ ತೆರೆಯಬೇಕೇ?
ಕೆಲವೊಂದು ಸಮಯಗಳಿಂದೀಚೆಗೆ, ಬಳಕೆದಾರರು, ಸರಕಾರಿ ನಿಯಂತ್ರಕರು ಮತ್ತು ಗೌಪ್ಯತಾ ಅಧಿಕಾರಿಗಳು ಫೇಸ್‌ಬುಕ್ ನೀತಿಗಳು ಕಠಿಣವಾಗಿದೆ ಎಂಬ ದೂರನ್ನು ಕಂಪೆನಿಗೆ ಮಾಡಿವೆ. ಇದರಿಂದಾಗಿ ಈ ನೀತಿಗಳನ್ನು ಆದಷ್ಟು ಸರಳಗೊಳಿಸುವ ತೀರ್ಮಾನಕ್ಕೆ ಕಂಪೆನಿ ಬಂದಿದ್ದು ಇದನ್ನು ಸರಳ ಇಂಗ್ಲೀಷಿನಲ್ಲಿರಿಸಿದೆ. ಇನ್ನು "ಪ್ರೈವಸಿ ಬೇಸಿಕ್ಸ್" ಎಂಬ ಪರಿಕರವನ್ನು ಫೇಸ್‌ಬುಕ್ ಗುರುವಾರ ಪರಿಚಯಿಸಿದ್ದು ಬಳಕೆದಾರರು ಸೈಟ್‌ನಲ್ಲಿ ಹಂಚಿಕೊಳ್ಳುವುದನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ಇದು ತಿಳಿಸಿಕೊಡುತ್ತದೆ.
ತನ್ನ ನಿಯಮಗಳು ಮತ್ತು ಗೌಪ್ಯತಾ ನೀತಿಗೆ ಕೂಡ ಇದು ಬದಲಾವಣೆಗಳನ್ನು ಮಾಡಿದ್ದು, ಇದನ್ನು ತನ್ನ ಡೇಟಾ ಪಾಲಿಸಿ ಎಂದು ಕಂಪೆನಿ ಕರೆದಿದೆ. ಈ ಹೊಸ ಪಾಲಿಸಿ ತುಂಬಾ ಸಣ್ಣದಾಗಿದೆ ಹಾಗೂ ಸರಳವಾಗಿದೆ. ಇನ್ನು ಈ ಸೈಟ್ ಅನ್ನು ಬಳಸಿಕೊಂಡು ಬಳಕೆದಾರರು ಏನನ್ನಾದರೂ ಖರೀದಿಸಿದಲ್ಲಿ, ಅವರ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.


Click it and Unblock the Notifications








